ಮೊಸರು ಸಿಕ್ಕಾಪಟ್ಟೆ ಹುಳಿ ಇದೆಯೇ? ಈ ಒಂದು ವಸ್ತು ಹಾಕಿ ನೋಡಿ

Published : Sep 16, 2025, 10:36 PM IST

ಹಲವು ಬಾರಿ ಮೊಸರು ಅಗತ್ಯಕ್ಕಿಂತ ಹೆಚ್ಚು ಹುಳಿಯಾಗಿರುತ್ತದೆ, ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ನಿಮಗೆ ಅರ್ಥವಾಗುವುದಿಲ್ಲ? ಇಂದು ನಾವು ನಿಮಗಾಗಿ ಒಂದು ಉಪಾಯವನ್ನು ತಂದಿದ್ದೇವೆ, ಅದರ ಸಹಾಯದಿಂದ ನೀವು ಮೊಸರಿನ ಹುಳಿಯನ್ನು ತೆಗೆದುಹಾಕಬಹುದು.

PREV
17
ಆರೋಗ್ಯಕ್ಕೆ ಉತ್ತಮವಾದ ಮೊಸರು

ಮೊಸರು ಆರೋಗ್ಯಕ್ಕೆ ತುಂಬಾನೆ ಉತ್ತಮವಾದ ಆಹಾರ. ಇದರಲ್ಲಿ ಪ್ರೊಬಯೋಟಿಕ್ಸ್ ಇದ್ದು, ಇದನ್ನು ನಿಯಮಿತವಾಗಿ ಸೇವಿಸೋದರಿಂದ ಕರುಳಿನ ಆರೋಗ್ಯ ಉತ್ತಮವಾಗಿರುತ್ತೆ. ಹಾಗಾಗಿ ಜನರು ಮೊಸರು ಸೇವಿಸಲು ಇಷ್ಟಪಡುತ್ತಾರೆ.

27
ಹುಳಿ ಮೊಸರು

ನಮ್ಮಲ್ಲಿ ಹಲವರು ಊಟದ ಜೊತೆ ಮೊಸರು ತಿನ್ನಲು ಇಷ್ಟಪಡುತ್ತಾರೆ. ಕೆಲವೊಮ್ಮೆ ಈ ಮೊಸರು ತುಂಬಾ ಹುಳಿಯಾಗಿರುತ್ತದೆ, ಅದನ್ನು ತಿನ್ನಲು ಸಹ ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ಎಸೆಯುವುದನ್ನು ಬಿಟ್ಟು ಬೇರೆ ದಾರಿಯಿರೋದಿಲ್ಲ ಎಂದು ನೀವು ಅಂದುಕೊಂಡಿರುತ್ತೀರಿ ಅಲ್ವಾ?.

37
ಹುಳಿ ನಿವಾರಿಸೋದಕ್ಕೆ ಸಿಂಪಲ್ ಟಿಪ್ಸ್

ಆದರೆ ಹುಳಿಯಾದ ಮೊಸರನ್ನು ಬಿಸಾಕುವ ಬದಲು, ಅದರಲ್ಲಿನ ಹುಳಿಯನ್ನು ನಿವಾರಿಸಬಹುದು. ಇಂದು ನಾವು ನಿಮಗೆ ಒಂದು ಉಪಾಯವನ್ನು ಹೇಳುತ್ತೇವೆ, ಅದರ ಸಹಾಯದಿಂದ ನೀವು ಅದರ ಹುಳಿಯನ್ನು ತೆಗೆದುಹಾಕಬಹುದು. ಅದಕ್ಕಾಗಿ ನೀವು ಏನು ಮಾಡಬೇಕು ಅನ್ನೋದನ್ನು ನೋಡೋಣ.

47
ತಂಪಾದ ಜಾಗದಲ್ಲಿಡಿ

ಮೊದಲನೆಯದಾಗಿ, ಮೊಸರನ್ನು ಯಾವಾಗಲೂ ತಂಪಾದ ಸ್ಥಳದಲ್ಲಿ ಇರಿಸಿ. ಮೊಸರು ತಂಪಾದ ಸ್ಥಳದಲ್ಲಿ ಇದ್ದರೆ ಅದು ಬೇಗನೆ ಹುಳಿಯಾಗೋದಿಲ್ಲ. ನೀವು ಅದನ್ನು ಹೊರಗೆ ಇಟ್ಟರೆ ಅದು ಬೇಗನೆ ಹುಳಿಯಾಗುತ್ತೆ. ಹಾಗಾಗಿ ಸಾಧ್ಯವಾದಷ್ಟು ಅದನ್ನು ಫ್ರಿಜ್ ನಲ್ಲಿಡಿ.

57
ಸಕ್ಕರೆ ಅಥವಾ ಜೇನುತುಪ್ಪ

ಇನ್ನು ನೀವು ಇಟ್ಟಂತಹ ಮೊಸರು ಹುಳಿಯಾಗಿದ್ದರೆ, ಅದಕ್ಕೆ ಸ್ವಲ್ಪ ಸಕ್ಕರೆ ಅಥವಾ ಜೇನುತುಪ್ಪ ಸೇರಿಸಿ, ಇದು ಹುಳಿಯನ್ನು ತೆಗೆದುಹಾಕಬಹುದು. ತಿನ್ನಲು ಕೂಡ ಇದು ತುಂಬಾನೆ ರುಚಿಯಾಗಿರುತ್ತದೆ.

67
ಬೇವು ಮತ್ತು ತುಳಸಿ

ಇದಲ್ಲದೇ ಮೊಸರಿನೊಂದಿಗೆ ಬೇವು ಮತ್ತು ತುಳಸಿ ಎಲೆಗಳನ್ನು ಸೇರಿಸುವುದರಿಂದ ಬ್ಯಾಕ್ಟೀರಿಯಾವನ್ನು ನಿಯಂತ್ರಿಸುತ್ತದೆ, ಹೀಗಾಗಿ ಹುಳಿ ಕಡಿಮೆಯಾಗುತ್ತದೆ. ನೀವು ಅವುಗಳನ್ನು ಪೇಸ್ಟ್ ಮಾಡಿ ಸಹ ನೀವು ಮೊಸರಿನಲ್ಲಿ ಬೆರೆಸಬಹುದು. ಆದರೆ ಹೆಚ್ಚು ಬೇವು ಬಳಕೆ ಮಾಡಬೇಡಿ.

77
ಉಪ್ಪು ಮತ್ತು ಅಡುಗೆ ಸೋಡಾ

ಮತ್ತೊಂದು ಸಿಂಪಲ್ ವಿಧಾನ ಎಂದರೆ ಮೊಸರಿಗೆ ಸ್ವಲ್ಪ ಉಪ್ಪು ಸೇರಿಸುವುದರಿಂದ ಅದರ ಹುಳಿ ಕಡಿಮೆಯಾಗುತ್ತದೆ. ಅಥವಾ ಮೊಸರಿಗೆ ಬಹಳ ಕಡಿಮೆ ಪ್ರಮಾಣದಲ್ಲಿ ಅಡುಗೆ ಸೋಡಾ ಸೇರಿಸುವುದರಿಂದ ಮೊಸರು ಹಾಳಾಗುವುದಿಲ್ಲ.

Read more Photos on
click me!

Recommended Stories