ರಾತ್ರಿ ಮಿಕ್ಕ ಅನ್ನವನ್ನು ಡ್ರೈ ಆಗದ ಹಾಗೆ ಬಿಸಿ ಮಾಡೋದು ಹೇಗೆ?

First Published | Oct 15, 2024, 3:31 PM IST

ಸಾಮಾನ್ಯವಾಗಿ ರಾತ್ರಿ ಉಳಿದ ಅನ್ನವನ್ನು ಬೆಳಗ್ಗೆ ತಿನ್ನೋಣ ಅಂದ್ರೆ ಗಟ್ಟಿಯಾಗಿರುತ್ತದೆ. ಬಿಸಿ ಮಾಡಲು ಹೋದರೆ ಬೇಗ ತಳ ಹಿಡಿಯುತ್ತದೆ. ಹೀಗಾಗಿ ಮಿಕ್ಕ ಅನ್ನವನ್ನು ತಳ ಹಿಡಿಯದೇ, ಒಣಗದಂತೆ ಬಿಸಿ ಮಾಡೋದು ಹೇಗೆ? ಎಂಬುದು ಬಹುತೇಕ ಗೃಹಿಣಿಯರ ಪ್ರಶ್ನೆ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ. ಇದೊಂದು ಟ್ರಿಕ್ ಬಳಸಿ ನೀವು ಅನ್ನ ಡ್ರೈ ಆಗದಂತೆ ಬಿಸಿ ಮಾಡ್ಬಹುದು.

ಮನೆಮಂದಿಗೆ ಅನ್ನ ಬೇಯಿಸುವಾಗ ಸ್ವಲ್ಪ ಹೆಚ್ಚೇ ಮಾಡಬೇಕು. ಊಟದ ಸಮಯಕ್ಕೆ ಯಾರಾದರೂ ಬಂಧುಗಳು ಬಂದರೆ ಕಷ್ಟವಾಗುತ್ತದೆ. ಹೀಗಾಗಿ ಭಾರತೀಯರು ಅನ್ನ ಬೇಯಿಸುವಾಗ ತುಸು ಹೆಚ್ಚು ಅನ್ನಕ್ಕಿಡುತ್ತಾರೆ. ಎಲ್ಲಿಯೋ ಒಂದೊಂದು ದಿನ ಅಪ್ಪಿ ತಪ್ಪಿ ಯಾರಾದ್ರೂ ಬರಬಹುದು. ಇಲ್ಲಿದ್ದರೆ ಯಾರು ಬರ್ತಾರೆ ಹೇಳಿ? ಸರಿ ಅನ್ನು ಉಳಿಯುತ್ತೆ. ಎಸೆಯಲು ಮನಸ್ಸು ಕೇಳೋಲ್ಲ. ತಿನ್ನಲು ಕಷ್ಟ.ಇದನ್ನು ಬೇಯಿಸಲು ಹೋದ್ರೆ ತಳ ಸೀದೋಗುತ್ತೆ ವಿನಃ ಅನ್ನ ಬಿಸಿಯಾಗಲ್ಲ, ರುಚಿಯೂ ಹೋಗಿ ಬಿಡುತ್ತೆ. ಹೀಗಾಗಿ ಮಿಕ್ಕಿದ ಅನ್ನವನ್ನು ತಳ ಹಿಡಿಯದಂತೆ ಒಣಗದಂತೆ ಬಿಸಿ ಮಾಡಲು ಇಲ್ಲಿದೆ ಕೆಲ ಟ್ರಿಕ್ಸ್.

ಫ್ರೈಡ್ ರೈಸ್ ಅಥವಾ ಪಲಾವ್ ಮಾಡಿದ್ರೆ ಗಟ್ಟಿಯಾಗುತ್ತೆ. ತಿನ್ನೋಕೂ ಆಗಲ್ಲ. ಆದ್ರೆ ಈ ಟಿಪ್ಸ್ ಫಾಲೋ ಮಾಡಿದ್ರೆ ಅನ್ನ ಮೆತ್ತಗೆ ಆಗುತ್ತೆ. ಅನ್ನ ಬಿಸಿಯಾಗಲು ಗ್ಯಾಸ್ ಮೇಲೆ ಇಡುವ ಮುನ್ನ ಸ್ವಲ್ಪ ನೀರು ಹಾಕಿ. ಅಥವಾ ಮಿಕ್ಕಿದ ಅನ್ನಕ್ಕೆ ನೀರು ಹಾಕಿ ಬೇಯಿಸಿ. ನೀರು ಅನ್ನವನ್ನು ಮೆತ್ತಗೆ ಮಾಡುತ್ತೆ. ಒಂದು ಕಪ್ ಅನ್ನಕ್ಕೆ 2 ಟೇಬಲ್‌ ಸ್ಪೂನ್‌ ನೀರು ಹಾಕಿ ಆವಿಯಲ್ಲಿ ಬೇಯಿಸಿ. ಮೈಕ್ರೋವೇವ್ ನಲ್ಲಿ 2 ನಿಮಿಷ ಇಟ್ರೆ ಸಾಕು.

Tap to resize

ಮೈಕ್ರೋವೇವ್ ನಲ್ಲಿ ಕಾಯಿಸಿ

ಮಿಕ್ಕಿದ ಅನ್ನವನ್ನು ಮೈಕ್ರೋವೇವ್ ಬಟ್ಟಲಲ್ಲಿ ಹಾಕಿ, ಮೇಲೆ ಒದ್ದೆ ಟಿಶ್ಯೂ ಪೇಪರ್ ಇಟ್ಟು 1-2 ನಿಮಿಷ ಕಾಯಿಸಿ. ಟಿಶ್ಯೂ ಪೇಪರ್ ಆವಿ ಹರಡುವಂತೆ ಮಾಡಿ ಅನ್ನವನ್ನು ಮೆತ್ತಗೆ ಮಾಡುತ್ತೆ.

ಸ್ವಲ್ಪ ಎಣ್ಣೆ ಹಾಕಿ ಹುರಿಯಿರಿ

ಬಾಣಲೆಯಲ್ಲಿ ಎಣ್ಣೆ/ಬೆಣ್ಣೆ ಹಾಕಿ ಕಾಯಿಸಿ, ಅನ್ನ ಹಾಕಿ, 1-2ಚಮಚ ನೀರು ಹಾಕಿ ಮುಚ್ಚಳ ಮುಚ್ಚಿ. ಕೆಲವು ನಿಮಿಷ ಬೇಯಿಸಿ. ಎಣ್ಣೆ/ಬೆಣ್ಣೆ ಅನ್ನವನ್ನು ಮೆತ್ತಗೆ ಮಾಡುತ್ತೆ.

ತರಕಾರಿಗಳೊಂದಿಗೆ ಹುರಿಯಿರಿ

ಮಿಕ್ಕಿದ ಅನ್ನಕ್ಕೆ ನೀರು ಹಾಕಿ, ತರಕಾರಿ/ಮಾಂಸದೊಂದಿಗೆ ಹುರಿಯಿರಿ. ತರಕಾರಿ/ಮಾಂಸದಿಂದ ರಸ ಬಂದು ಅನ್ನ ರುಚಿಯಾಗಿ, ಮೆತ್ತಗಾಗುತ್ತೆ. ಚಟ್ನಿ/ಉಪ್ಪಿನಕಾಯಿ ಜೊತೆ ತಿನ್ನಿ.

ಸ್ವಲ್ಪ ಹಾಲು ಹಾಕಿ ಕಾಯಿಸಿ

ಒಣ ಅನ್ನ ರುಚಿಯಾಗಿರಲ್ಲ. ತರಕಾರಿ ಹಾಕೋಕೆ ಇಷ್ಟ ಇಲ್ಲದಿದ್ರೆ, ಸ್ವಲ್ಪ ಹಾಲು ಹಾಕಿ ಕಾಯಿಸಿ. ಬಾಣಲೆಯಲ್ಲಿ ಅನ್ನ ಹಾಕಿ, 1-2 ಚಮಚ ಹಾಲು ಹಾಕಿ, ಮುಚ್ಚಳ ಮುಚ್ಚಿ ಕುಕ್ಕರ್ ನಲ್ಲಿ ಆವಿಯಲ್ಲಿ ಬೇಯಿಸಿ. ಅನ್ನ ಹಾಲು ಹೀರಿಕೊಂಡು ಮೆತ್ತಗಾಗುತ್ತೆ, ಸ್ವಲ್ಪ ಸಿಹಿಯಾಗುತ್ತೆ.

Latest Videos

click me!