ನೀರು, ಹಾಲು, ಟೀಪುಡಿ, ಸಕ್ಕರೆ ಯಾವಾಗ ಎಷ್ಟು ಹಾಕಿ ಕುದಿಸಬೇಕು ತಿಳ್ಕೊಳಿ, ಪರ್‌ಫೆಕ್ಟ್ ಆಗಿ ಬರುತ್ತೆ ಟೀ

Published : Nov 28, 2025, 11:19 AM IST

How to make perfect tea: ಪರ್‌ಫೆಕ್ಟ್ ಆಗಿ ಟೀ ತಯಾರಿಸಲು ಅದಕ್ಕೆ ಬೇಕಾದ ಪದಾರ್ಥ ಸೇರಿಸಿದರೆ ಮುಗಿಯಿತೆಂದು ಅರ್ಥವಲ್ಲ. ಸರಿಯಾದ ವಿಧಾನವೂ ಸಹ ಅಗತ್ಯವಾಗಿರುತ್ತದೆ. ನೀರು, ಹಾಲು, ಟೀ ಪುಡಿ ಮತ್ತು ಮಸಾಲೆಗಳ ಸರಿಯಾದ ಬ್ಯಾಲೆನ್ಸ್ ನಿಮ್ಮ ಟೀಯನ್ನು ಪರಿಮಳಯುಕ್ತ, ರುಚಿಕರವಾಗಿರುಸುತ್ತದೆ.

PREV
18
ಸರಿಯಾದ ವಿಧಾನ ಅತ್ಯಗತ್ಯ

ಚಹಾ ನಮ್ಮ ದೇಶದಲ್ಲಿ ಎಲ್ಲರ ಪ್ರೀತಿಯ ಪಾನೀಯವಾಗಿದ್ದು, ಬೆಳಗಿನ ಉಪಾಹಾರದಿಂದ ಸಂಜೆ ವಿಶ್ರಾಂತಿಯವರೆಗೆ ಪ್ರತಿ ಕ್ಷಣದ ಭಾಗವಾಗಿದೆ. ಆದರೆ ಪರ್‌ಫೆಕ್ಟ್ ಆಗಿ ಟೀ ತಯಾರಿಸಲು ಅದಕ್ಕೆ ಬೇಕಾದ ಪದಾರ್ಥ ಸೇರಿಸಿದರೆ ಮುಗಿಯಿತೆಂದು ಅರ್ಥವಲ್ಲ. ಸರಿಯಾದ ವಿಧಾನವೂ ಸಹ ಅಗತ್ಯವಾಗಿರುತ್ತದೆ. ನೀರು, ಹಾಲು, ಟೀ ಪುಡಿ ಮತ್ತು ಮಸಾಲೆಗಳ ಸರಿಯಾದ ಬ್ಯಾಲೆನ್ಸ್ ನಿಮ್ಮ ಟೀಯನ್ನು ಪರಿಮಳಯುಕ್ತ, ರುಚಿಕರವಾಗಿರುಸುತ್ತದೆ. ನೀವು ಪ್ರತಿ ಬಾರಿಯೂ ರಿಚಿಯಾದ ಟೀ ಮಾಡಲು ಬಯಸಿದರೆ ಸರಿಯಾದ ವಿಧಾನವನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಇಂದು ಮನೆಯಲ್ಲಿಯೇ ಟೀ ಹೇಗೆ ತಯಾರಿಸಬೇಕೆಂದು ನೋಡೋಣ..

28
ನಿಮಗೆಲ್ಲ ಗೊತ್ತಿರುವಂತೆ ಟೀ ತಯಾರಿಸಲು ಬೇಕಾಗಿರುವ ಪದಾರ್ಥ

ನೀರು
ಹಾಲು
ಟೀ ಪುಡಿ
ಸಕ್ಕರೆ
ಶುಂಠಿ/ಏಲಕ್ಕಿ

48
ಟೀ ಪುಡಿ ಯಾವಾಗ ಸೇರಿಸಬೇಕು?

ನೀರು ಸ್ವಲ್ಪ ಕುದಿಯಲು ಪ್ರಾರಂಭಿಸಿದಾಗ ಟೀ ಪೌಡರ್ ಸೇರಿಸಿ ಇದರಿಂದ ಅದರ ಸುವಾಸನೆ ಚೆನ್ನಾಗಿ ಹೊರಬರುತ್ತದೆ.

58
ಟೀಗೆ ಹಾಲು ಯಾವಾಗ ಸೇರಿಸಬೇಕು?

ಟೀಪುಡಿ ಸೇರಿಸಿದ ನಂತರ 1 ನಿಮಿಷ ಕುದಿಸಿ ನಂತರ ಹಾಲು ಸೇರಿಸಿ. ಇದು ಟೀ ಬಣ್ಣ ಮತ್ತು ಸುವಾಸನೆ ಎರಡನ್ನೂ ಸುಧಾರಿಸುತ್ತದೆ.

68
ಟೀಗೆ ಸಕ್ಕರೆಯನ್ನು ಯಾವಾಗ ಸೇರಿಸಬೇಕು?

ಹಾಲು ಸೇರಿಸಿದ ನಂತರವೇ ಸಕ್ಕರೆ ಸೇರಿಸಿ. ಇದರಿಂದ ಅದು ಚೆನ್ನಾಗಿ ಕರಗಲು ಅನುವು ಮಾಡಿಕೊಡುತ್ತದೆ.

78
ಟೀ ಎಷ್ಟು ಹೊತ್ತು ಕುದಿಸಬೇಕು?

ಟೀಯನ್ನು ಗರಿಷ್ಠ 2-3 ನಿಮಿಷಗಳ ಕಾಲ ಕುದಿಸಿ. ಅತಿಯಾಗಿ ಕುದಿಸುವುದರಿಂದ ಅದು ಕಹಿಯಾಗಿ ಪರಿಣಮಿಸಬಹುದು.

88
ಪರ್‌ಫೆಕ್ಟ್ ಆಗಿ ಟೀ ಮಾಡೋದು ಹೇಗೆ?

ಪರ್‌ಫೆಕ್ಟ್ ಆಗಿ ಟೀ ಮಾಡಲು ನೀರು ಮತ್ತು ಹಾಲಿನ ಅನುಪಾತ 60:40 ಇರಿಸಿ. ಹೆಚ್ಚು ಟೀಪುಡಿ ಸೇರಿಸಬೇಡಿ. ಮಧ್ಯಮ ಉರಿಯಲ್ಲಿ ಕುದಿಸಿ. 2-3 ನಿಮಿಷಗಳಿಗಿಂತ ಹೆಚ್ಚು ಕುದಿಸಬೇಡಿ.

Read more Photos on
click me!

Recommended Stories