ಫ್ರಿಜ್ ಬದಲು ಟೊಮೆಟೊವನ್ನು ಹೀಗೆ ಇಟ್ನೋಡಿ, ರುಚಿ ಹಾಳಾಗೋದಿಲ್ಲ- ಬೇಗ ಕೊಳೆಯೋದಿಲ್ಲ

Published : Jun 29, 2026, 07:05 PM IST

fresh tomatoes tips: ತರಕಾರಿ ಏನೂ ಇಲ್ಲ ಎಂದಾಗ ನೆನಪಾಗೋದೇ ಟೊಮೆಟೊ. ಫಟಾ ಫಟ್ ಅಂತ ಟೊಮೆಟೊ ರಸಂ ಮಾಡಿದ್ರೆ ಮುಗೀತು. ಮಾರ್ಕೆಟ್ ನಿಂದ ತಂದ ಟೊಮೆಟೊ ಬೇಗ ಹಾಳಾಗ್ಬಾರದು ಅಂದ್ರೆ ಈ ಟ್ರಿಕ್ಸ್ ಫಾಲೋ ಮಾಡಿ.

PREV
14
ಅಡುಗೆ ಮನೆ ರಾಜ ಟೊಮೆಟೊ

ಟೊಮೆಟೊ ಬಹುತೇಕ ಎಲ್ಲಾ ಭಾರತೀಯ ಅಡುಗೆಮನೆಯ ಅತ್ಯಗತ್ಯ ತರಕಾರಿ. ಸಲಾಡ್ ನಿಂದ ಹಿಡಿದು ಚಟ್ನಿ ಸೇರಿದಂತೆ ನಾನಾ ಭಕ್ಷ್ಯ ತಯಾರಿಸೋಕೆ ಟೊಮೆಟೊ ಇರ್ಲೇಬೇಕು. ಟೊಮೆಟೊ ಖರೀದಿಸಿ ಮನೆಗೆ ತಂದ್ರೆ ಒಂದು ವಾರ ಕೂಡ ಟೊಮೆಟೊ ಚೆನ್ನಾಗಿರೋದಿಲ್ಲ. ಬೇಗ ಹಾಳಾಗೋಕೆ ಶುರುವಾಗುತ್ತೆ. ಟೊಮೆಟೊ ಹಾಳಾಗ್ಬಾರದು ಅಂತ ನಾವು ಫ್ರಿಜ್ ನಲ್ಲಿ ಅದನ್ನಿಟ್ತೇವೆ.

24
ಫ್ರಿಜ್ ನಲ್ಲಿ ಟೊಮೆಟೊ ಇಡ್ಬೇಡಿ

ತಜ್ಞರ ಪ್ರಕಾರ, ಟೊಮೆಟೊ ಫ್ರಿಜ್ ನಲ್ಲಿ ಇಡುವಂತ ತರಕಾರಿ ಅಲ್ಲ. ನೀವು ತುಂಬಾ ದಿನ ಟೊಮೆಟೊ ಹಾಳಾಗ್ದೆ ಇರಲಿ ಎನ್ನುವ ಉದ್ದೇಶಕ್ಕೆ ಅದನ್ನು ಫ್ರಿಜ್ ನಲ್ಲಿ ಇಡ್ತೀರಿ. ಆದ್ರೆ ನೈಸರ್ಗಿಕ ಸುವಾಸನೆ ಮತ್ತು ಟೊಮೆಟೊ ಆಕಾರದ ಮೇಲೆ ಪರಿಣಾಮ ಬೀರುತ್ತೆ. ಫ್ರಿಜ್ ವಾತಾವರಣ ಟೊಮೆಟೊ ಹಣ್ಣಾಗುವ ಪ್ರಕ್ರಿಯೆಯನ್ನು ನಿಲ್ಲಿಸುತ್ತೆ. ಇದರಿಂದ ಟೊಮೆಟೊ ಪರಿಮಳ ಕಳೆದುಕೊಳ್ಳುತ್ತೆ. ಟೊಮೆಟೊ ಪೂರ್ತಿ ಹಣ್ಣಾಗಿಲ್ಲ ಅಂದ್ರೆ ನೀವದನ್ನು ರೂಮ್ ಉಷ್ಣಾಂಶದಲ್ಲಿ ಇಡ್ಬಹುದು. ಟೊಮೆಟೊ ತುಂಬಾ ಹಣ್ಣಾಗಿದ್ದಲ್ಲಿ ಮಾತ್ರ ಅದನ್ನು ಫ್ರಿಜ್ ನಲ್ಲಿಡಿ.

34
ಹೀಗೆ ಮಾಡಿ

ದೀರ್ಘಕಾಲದವರೆಗೆ ಟೊಮೆಟೊಗಳನ್ನು ತಾಜಾವಾಗಿಡಲು ಸುಲಭವಾದ ಮಾರ್ಗವೆಂದರೆ ಕಾಂಡದ ಬದಿಯನ್ನು ಕೆಳಗೆ ಇಡುವುದು. ಟೊಮೆಟೊಗಳಲ್ಲಿನ ಹೆಚ್ಚಿನ ತೇವಾಂಶವು ಕಾಂಡದಿಂದ ಆವಿಯಾಗುತ್ತದೆ. ಕಾಂಡವನ್ನು ಕೆಳಗೆ ಇಟ್ಟಾಗ ತೇವಾಂಶ ನಷ್ಟ ಕಡಿಮೆಯಾಗುತ್ತದೆ ಮತ್ತು ಟೊಮೆಟೊಗಳು ಹೆಚ್ಚು ಕಾಲ ಹಾಳಾಗದೆ ಉಳಿಯುತ್ತದೆ.

44
ಇದು ನೆನಪಿರಲಿ

ಟೊಮೆಟೊಗಳನ್ನು ಸಂಗ್ರಹಿಸುವಾಗ, ಅವುಗಳನ್ನು ನೇರ ಸೂರ್ಯನ ಬೆಳಕಿನಿಂದ ದೂರವಿಡಿ. ಅತಿಯಾದ ಶಾಖ ಅಥವಾ ಸೂರ್ಯನ ಬೆಳಕು ಅವುಗಳನ್ನು ತ್ವರಿತವಾಗಿ ಮೃದುಗೊಳಿಸುತ್ತದೆ. ಬಾಳೆಹಣ್ಣು ಮತ್ತು ಸೇಬಿನಂತಹ ಹಣ್ಣುಗಳ ಜೊತೆ ಟೊಮೆಟೊಗಳನ್ನು ಇಡಬೇಡಿ. ಈ ಹಣ್ಣುಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತವೆ, ಇದು ಹಣ್ಣಾಗುವಿಕೆ ಮತ್ತು ಹಾಳಾಗುವಿಕೆಯನ್ನು ವೇಗಗೊಳಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories