ಇದು ಹೋಟೆಲ್ ಸ್ಟೈಲ್ ಬಿಳಿ ಕೊಬ್ಬರಿ ಚಟ್ನಿ.. ಈ ಒಂದು ಸೀಕ್ರೆಟ್ ಪದಾರ್ಥ ಬೆರೆಸಿದ್ರೆ ರುಚಿ ಅದ್ಭುತ!

Published : Mar 08, 2026, 04:49 PM IST

Hotel Style Coconut Chutney Recipe: ಸುಲಭವಾಗಿ ಮನೆಯಲ್ಲೇ ಹೋಟೆಲ್ ಸ್ಟೈಲ್ ಕೊಬ್ಬರಿ ಚಟ್ನಿಯನ್ನು ತಯಾರಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಅಂದಹಾಗೆ ಈ ಚಟ್ನಿಯ ಅದ್ಭುತ ರುಚಿಯ ಹಿಂದೆ ಒಂದು ಸಣ್ಣ ರಹಸ್ಯವಿದೆ. ಅದನ್ನೂ ನೋಡೋಣ..  

PREV
17
ಆ ರುಚಿ ಮರೆಯಲು ಸಾಧ್ಯವೇ?

ಬೆಳ್ಳಂಬೆಳಗ್ಗೆ ಬಿಸಿಬಿಸಿ ಇಡ್ಲಿ ಅಥವಾ ಗರಿಗರಿಯಾದ ದೋಸೆ ತಿನ್ನುವಾಗ, ಅದಕ್ಕೆ ಸರಿಯಾದ ಜೋಡಿ ಪಕ್ಕದಲ್ಲಿದ್ದರೆ ಆ ಉಪಹಾರದ ರುಚಿಯೇ ಬದಲಾಗುತ್ತದೆ. ನಾವು ಮನೆಯಲ್ಲಿ ಎಷ್ಟೇ ಬಗೆಯ ತಿಂಡಿಗಳನ್ನು ಮಾಡಿದರೂ, ಹೋಟೆಲ್‌ಗಳಲ್ಲಿ ನೀಡುವ ಆ ಬಿಳಿಯಾದ, ಮೃದುವಾದ ಮತ್ತು ಕಮ್ಮನೆಯ ಕೊಬ್ಬರಿ ಚಟ್ನಿ ರುಚಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಹೋಟೆಲ್‌ನವರು ತಮ್ಮ ಚಟ್ನಿಯನ್ನು ಅಷ್ಟು ಅದ್ಭುತವಾಗಿ ಮಾಡಲು ಬಳಸುವ ಆ ರಹಸ್ಯ ಪದಾರ್ಥ ಯಾವುದು ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ.

27
ಅಷ್ಟು ಬೆಳ್ಳಗೆ ಬರಲ್ಲ, ರುಚಿಯೂ ಇರಲ್ಲ

ಸಾಮಾನ್ಯವಾಗಿ ನಾವು ಮನೆಯಲ್ಲಿ ಕೊಬ್ಬರಿ, ಹಸಿರು ಮೆಣಸಿನಕಾಯಿ ಮತ್ತು ಹುರಿಗಡಲೆ ಬಳಸಿ ಚಟ್ನಿ ಮಾಡುತ್ತೇವೆ. ಆದರೆ, ಅದು ಹೋಟೆಲ್ ಚಟ್ನಿಯಂತೆ ಅಷ್ಟು ಬೆಳ್ಳಗೆ ಬರುವುದಿಲ್ಲ ಮತ್ತು ಆ ರುಚಿಯೂ ಇರುವುದಿಲ್ಲ. ಇದಕ್ಕೆ ಕಾರಣ ಹೋಟೆಲ್‌ನವರು ಬಳಸುವ ಒಂದು ರಹಸ್ಯ ಪದಾರ್ಥ. ಹಾಗಾದ್ರೆ ಆ ರಹಸ್ಯ ಪದಾರ್ಥ ಯಾವುದು?, ಅದನ್ನು ಬಳಸಿ ಚಟ್ನಿ ಮಾಡುವ ವಿಧಾನ ಯಾವುದು?, ನೋಡೋಣ ಬನ್ನಿ..

37
ತಯಾರಿಸಲು ಬೇಕಾಗುವ ಪದಾರ್ಥಗಳು

ತಾಜಾ ತುರಿದ ಕೊಬ್ಬರಿ - ಅರ್ಧ ಕಪ್
ಹುರಿಗಡಲೆ - 1 ಟೇಬಲ್ ಚಮಚ
ಗೋಡಂಬಿ - 6
ಹಸಿರು ಮೆಣಸಿನಕಾಯಿ - 2 ರಿಂದ 3 (ನಿಮ್ಮ ಖಾರಕ್ಕೆ ತಕ್ಕಂತೆ)
ಹುಣಸೆಹಣ್ಣು - ಒಂದು ಸಣ್ಣ ತುಣುಕು
ಉಪ್ಪು - ರುಚಿಗೆ ತಕ್ಕಷ್ಟು
ನೀರು - ಅಗತ್ಯವಿರುವಷ್ಟು
ಒಗ್ಗರಣೆಗಾಗಿ: ಎಣ್ಣೆ, ಸಾಸಿವೆ (ಅರ್ಧ ಟೀ ಚಮಚ), ಕರಿಬೇವಿನ ಸೊಪ್ಪು (ಎರಡು ಎಸಳು)

47
ತಯಾರಿಸುವ ವಿಧಾನ

ಮೊದಲಿಗೆ ಒಂದು ಸ್ವಚ್ಛವಾದ ಮಿಕ್ಸಿ ಜಾರ್ ತೆಗೆದುಕೊಳ್ಳಿ. ಅದರಲ್ಲಿ ತಾಜಾ ತುರಿದ ಕೊಬ್ಬರಿ, ಹುರಿಗಡಲೆ, ಗೋಡಂಬಿ, ಸಣ್ಣ ಹುಣಸೆಹಣ್ಣಿನ ತುಣುಕು, ಹಸಿರು ಮೆಣಸಿನಕಾಯಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ.

ಇಲ್ಲೊಂದು ಸಣ್ಣ ಟ್ರಿಕ್ ಇದೆ: ಆರಂಭದಲ್ಲೇ ನೀರು ಹಾಕಬೇಡಿ. ಮೊದಲು ಈ ಎಲ್ಲಾ ಪದಾರ್ಥಗಳನ್ನು ನೀರಿಲ್ಲದೆ ತರಿತರಿಯಾಗಿ ರುಬ್ಬಿಕೊಳ್ಳಿ. ಹೀಗೆ ಮಾಡುವುದರಿಂದ ಎಲ್ಲವೂ ಸಮನಾಗಿ ನುಣ್ಣಗೆ ಆಗುತ್ತದೆ ಮತ್ತು ಚಟ್ನಿ ತುಂಬಾ ಮೃದುವಾಗಿ ಬರುತ್ತದೆ.

57
ಆ ಸೀಕ್ರೆಟ್ ಪದಾರ್ಥ ಯಾವುದು ಗೊತ್ತಾಯ್ತಾ?

ಆ ನಂತರ, ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಮೆತ್ತನೆಯ ಪೇಸ್ಟ್‌ನಂತೆ ರುಬ್ಬಿಕೊಳ್ಳಿ. ಹೋಟೆಲ್ ಸ್ಟೈಲ್ ಚಟ್ನಿ ಅತಿಯಾಗಿ ನೀರಾಗದೆ, ಸ್ವಲ್ಪ ಗಟ್ಟಿಯಾಗಿದ್ದರೆ ರುಚಿ ಹೆಚ್ಚು. ಆದ್ದರಿಂದ ನೀರನ್ನು ನೋಡಿಕೊಂಡು ಹಾಕಿಕೊಳ್ಳಿ. ಚಟ್ನಿ ಸಿದ್ಧವಾದ ಮೇಲೆ, ಒಂದು ಸಣ್ಣ ಒಗ್ಗರಣೆ ಸೌಟಿನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಮತ್ತು ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಕೊಡಿ. ಸಾಸಿವೆ ಸಿಡಿದ ನಂತರ ಈ ಒಗ್ಗರಣೆಯನ್ನು ಚಟ್ನಿಗೆ ಸೇರಿಸಿ ಚೆನ್ನಾಗಿ ಕಲಸಿ. ಈಗ ಬಾಯಲ್ಲಿ ನೀರೂರಿಸುವ ರಾಯಲ್' ಕೊಬ್ಬರಿ ಚಟ್ನಿ ಸಿದ್ಧ! ಹಾಗಾದ್ರೆ ನಾವು ಸೇರಿಸಿದ ಆ ಸೀಕ್ರೆಟ್ ಪದಾರ್ಥ ಯಾವುದು ಎಂದು ಗೊತ್ತಾಯ್ತಾ?

67
ಬಳಸಿದ್ರೇನೇ ರುಚಿ

ಅದೇ ಗೋಡಂಬಿ! ಹುರಿಗಡಲೆಯನ್ನು ಸ್ವಲ್ಪ ಕಡಿಮೆ ಮಾಡಿ, ಕೆಲವು ಗೋಡಂಬಿಗಳನ್ನು ಸೇರಿಸುವುದರಿಂದ ಚಟ್ನಿಗೆ ಆ 'ರಾಯಲ್ ಲುಕ್' ಮತ್ತು ಕಮ್ಮನೆಯ ರುಚಿ ಬರುತ್ತದೆ. ಗೋಡಂಬಿ ಬಳಸುವುದರಿಂದ ಚಟ್ನಿಗೆ ಉತ್ತಮವಾದ ಕ್ರೀಮಿ ವಿನ್ಯಾಸ (Texture) ಬರುತ್ತದೆ.

77
ಇತರೆ ಟಿಪ್ಸ್

ನಿಮ್ಮ ಚಟ್ನಿ ಹೋಟೆಲ್‌ನಲ್ಲಿ ಕೊಡುವಂತೆ ಮಲ್ಲಿಗೆ ಹೂವಿನಂತೆ ಬೆಳ್ಳಗೆ ಬರಬೇಕೆಂದರೆ, ಹಸಿರು ಮೆಣಸಿನಕಾಯಿಯನ್ನು ಮಧ್ಯಕ್ಕೆ ಸೀಳಿ ಅದರೊಳಗಿನ ಬೀಜಗಳನ್ನು ತೆಗೆದು ಬಳಸಿ.
ಇದರಲ್ಲಿ ಹಾಕುವ ಸಣ್ಣ ಹುಣಸೆಹಣ್ಣಿನ ತುಣುಕು ಚಟ್ನಿಗೆ ಅದ್ಭುತವಾದ ಹುಳಿ-ಸಿಹಿ ರುಚಿಯನ್ನು ನೀಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories