ಬೇಸಿಗೆಯ ತರಕಾರಿಗಳು ತಿನ್ನಲು ಹೆಚ್ಚು ಶ್ರಮ ಬೇಡುವುದಿಲ್ಲ. ಉದಾಹರಣೆಗೆ ಬಿಸಿಲಿನಲ್ಲಿ ಹಣ್ಣಾದ ಟೊಮೆಟೊವನ್ನು ಒರೆಸಿ ಹಾಗೆಯೇ ಸವಿಯಬಹುದು.
life Mar 06 2026
Author: Ashwini HR Image Credits:our own
Kannada
ಹುರಿಯುವುದು
ಶರತ್ಕಾಲದ ತರಕಾರಿಯಾದ ಕ್ಯಾರೆಟ್, ಬ್ರೊಕೋಲಿ, ಹೂಕೋಸು ಮತ್ತು ಕುಂಬಳಕಾಯಿಗಳನ್ನು ರುಚಿಕರವಾಗಿ ತಯಾರಿಸಲು ಸ್ವಲ್ಪ ಹೆಚ್ಚಿನ ಶ್ರಮ ಬೇಕು. ಇದಕ್ಕೆ ಅತ್ಯುತ್ತಮ ಮಾರ್ಗವೆಂದರೆ ಅವುಗಳನ್ನು ಹುರಿಯುವುದು (Roasting).
Image credits: our own
Kannada
ಎಲ್ಲರ ಮಾತು ಒಂದೇ
ತರಕಾರಿ ಹುರಿಯುವುದರಿಂದ ಅವುಗಳ ನೈಸರ್ಗಿಕ ಸಿಹಿ ಹೊರಬರುತ್ತದೆ ಮತ್ತು ರುಚಿ ಇಮ್ಮಡಿಯಾಗುತ್ತದೆ. ಅಂದಹಾಗೆ ತರಕಾರಿಗಳನ್ನು ಹುರಿಯುವ ಬಗ್ಗೆ ಪ್ರಸಿದ್ಧ ಬಾಣಸಿಗರೊಂದಿಗೆ ಚರ್ಚಿಸಿದಾಗ ಅವರೆಲ್ಲರೂ ಹೇಳಿದ ಒಂದೇ ಮಾತು.
Image credits: our own
Kannada
ಹೈ ಫ್ಲೇಮ್
ಬಾಣಸಿಗರ ಪ್ರಕಾರ, 425°F ತಾಪಮಾನವೇ ಇದಕ್ಕೆ ಸರಿಯಾದ ಆಯ್ಕೆ. ಅಂದರೆ ಹೈ ಫ್ಲೇಮ್. ತರಕಾರಿಗಳ ಹೊರಪದರ ಗರಿಗರಿಯಾಗಲು ಈ ತೀವ್ರ ಉಷ್ಣತೆ ಅಗತ್ಯ. ತರಕಾರಿಗಳನ್ನು ಹುರಿಯಲು ಬೇಕಾದ ನಿರ್ದಿಷ್ಟ ತಾಪಮಾನ ಇದಾಗಿದೆ.
Image credits: our own
Kannada
ಬಣ್ಣ ಹಾಗೂ ರುಚಿ ನೀಡುತ್ತೆ
ಶೆಫ್‌ಗಳ ಪ್ರಕಾರ, ಬದನೆಕಾಯಿ, ಬ್ರಸೆಲ್ಸ್ ಮೊಗ್ಗು, ದಪ್ಪ ಮೆಣಸಿನಕಾಯಿ ಯಾವುದೇ ಇರಲಿ ಇದೇ ತಾಪಮಾನ ಬಳಸಲಾಗುತ್ತದೆ. ಇದು ತರಕಾರಿಗಳು ಸೀದುಹೋಗದಂತೆ ತಡೆಯುತ್ತದೆ. ಅವುಗಳಿಗೆ ಬೇಕಾದ ಕಂದು ಬಣ್ಣ, ರುಚಿ ನೀಡುತ್ತದೆ.
Image credits: pinterest
Kannada
ಹುರಿಯುವ ಸರಿಯಾದ ವಿಧಾನ
ತರಕಾರಿಗಳಿಗೆ ಮೊದಲು ಆಲಿವ್ ಎಣ್ಣೆ, ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಲೇಪಿಸಿ. ಅಲ್ಯೂಮಿನಿಯಂ ಫಾಯಿಲ್ ಅಥವಾ ಪಾರ್ಚ್‌ಮೆಂಟ್ ಪೇಪರ್ ಹರಡಿದ ಟ್ರೇನಲ್ಲಿ ತರಕಾರಿಗಳನ್ನು ಒಂದೇ ಪದರದಲ್ಲಿ ಜೋಡಿಸಿ.
Image credits: social media
Kannada
ಮೃದುವಾಗುವವರೆಗೆ
ಕಂದು ಬಣ್ಣಕ್ಕೆ ತಿರುಗುವವರೆಗೆ 425°F ತಾಪಮಾನದ ಓವನ್‌ನಲ್ಲಿ ಇಡಿ. ನಂತರ, ಓವನ್ ತಾಪಮಾನವನ್ನು 300°F ಗೆ ಇಳಿಸಿ, ತರಕಾರಿಗಳು ಮೃದುವಾಗುವವರೆಗೆ ಬೇಯಿಸಿ.
Image credits: Freepik
Kannada
ಮುದ್ದೆಯಾಗುವುದಿಲ್ಲ
ಈ ವಿಧಾನದಿಂದ ತರಕಾರಿಗಳು ಮುದ್ದೆಯಾಗುವುದಿಲ್ಲ (Mushy), ಬದಲಿಗೆ ಹೊರಭಾಗದಲ್ಲಿ ಸ್ವಲ್ಪ ಗರಿಗರಿಯಾಗಿ ಮತ್ತು ಒಳಭಾಗದಲ್ಲಿ ಮೃದುವಾಗಿರುತ್ತವೆ ಎಂದು ವಿವರಿಸುತ್ತಾರೆ ತಜ್ಞರು.