ಬಿಸಿ ಬಿಸಿ ಅನ್ನ ತಿನ್ನೋಕೆ ಎಲ್ಲರಿಗೂ ಇಷ್ಟ. ಆದರೆ ಬಿಸಿ ಅನ್ನಕ್ಕಿಂತ ತಣ್ಣಗಾದ ಅನ್ನವೇ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು ಅಂತಾರೆ ತಜ್ಞರು. ಯಾಕೆ? ಇದರ ಹಿಂದಿನ ಸೀಕ್ರೆಟ್ ಏನು? ತಿಳಿಯೋಣ ಬನ್ನಿ.
ಭಾರತೀಯರಾದ ನಮ್ಮೆಲ್ಲರ ಮನೆಯಲ್ಲಿ ಅನ್ನವೇ ಪ್ರಮುಖ ಆಹಾರ. ಮೂರು ಹೊತ್ತು ಅನ್ನ ತಿಂದರಷ್ಟೇ ಊಟ ಮಾಡಿದ ಹಾಗೆ. ಅದರಲ್ಲೂ ಬಿಸಿ ಬಿಸಿ ಅನ್ನಕ್ಕೆ ತುಪ್ಪ ಹಾಕಿ ತಿಂದರೆ ಸ್ವರ್ಗ. ಆದರೆ ಆರೋಗ್ಯದ ದೃಷ್ಟಿಯಿಂದ ಬಿಸಿ ಅನ್ನ ಒಳ್ಳೆಯದಾ ಅಥವಾ ತಣ್ಣಗಾದ ಅನ್ನವೇ ಬೆಸ್ಟಾ? ತಜ್ಞರು ಏನು ಹೇಳ್ತಾರೆ ನೋಡೋಣ.
25
ತಣ್ಣಗಿನ ಅನ್ನದ ಅನುಕೂಲ
ಬಿಸಿ ಅನ್ನಕ್ಕಿಂತ, ಬೇಯಿಸಿ ತಣ್ಣಗಾಗಿಸಿದ ಅನ್ನದಲ್ಲಿ 'ರೆಸಿಸ್ಟೆಂಟ್ ಸ್ಟಾರ್ಚ್' ಎಂಬ ಪೋಷಕಾಂಶ ಹೆಚ್ಚಿರುತ್ತೆ. ಅಕ್ಕಿಯನ್ನು ಬೇಯಿಸಿದಾಗ, ಅದರಲ್ಲಿನ ಪಿಷ್ಟವು ಗ್ಲೂಕೋಸ್ ಆಗಿ ಬದಲಾಗುತ್ತೆ.
35
ತಣ್ಣಗಿನ ಅನ್ನ 'ರೆಸಿಸ್ಟೆಂಟ್ ಸ್ಟಾರ್ಚ್' ಆಗಿ ಬದಲಾಗುತ್ತದೆ
ಇದೇ ಅನ್ನವನ್ನು 12-24 ಗಂಟೆಗಳ ಕಾಲ ಫ್ರಿಜ್‌ನಲ್ಲಿಟ್ಟಾಗ, 'ರೆಟ್ರೋಗ್ರೇಡೇಶನ್' ಎಂಬ ರಾಸಾಯನಿಕ ಪ್ರಕ್ರಿಯೆ ನಡೆಯುತ್ತೆ. ಆಗ ಪಿಷ್ಟದ ಅಣುಗಳು ಒಟ್ಟಿಗೆ ಸೇರಿ 'ರೆಸಿಸ್ಟೆಂಟ್ ಸ್ಟಾರ್ಚ್' ಆಗಿ ಬದಲಾಗುತ್ತವೆ. ಇದು ಸುಲಭವಾಗಿ ಜೀರ್ಣವಾಗದೆ, ಫೈಬರ್‌ನಂತೆ ಕೆಲಸ ಮಾಡುತ್ತದೆ.
ಬಿಸಿ ಅನ್ನದಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ (GI) ಹೆಚ್ಚಿರುವುದರಿಂದ, ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಒಮ್ಮೆಲೇ ಏರಿಸುತ್ತದೆ. ಆದರೆ ತಣ್ಣನೆಯ ಅನ್ನದಲ್ಲಿರುವ ರೆಸಿಸ್ಟೆಂಟ್ ಸ್ಟಾರ್ಚ್‌ನಿಂದ GI ಕಡಿಮೆಯಾಗಿ, ಗ್ಲೂಕೋಸ್ ನಿಧಾನವಾಗಿ ಬಿಡುಗಡೆಯಾಗುತ್ತದೆ.
55
ತಣ್ಣಗಿನ ಅನ್ನ ಕರುಳಿನ ಆರೋಗ್ಯ ಸುಧಾರಿಸುತ್ತದೆ
ಇದು ಮಧುಮೇಹಿಗಳಿಗೆ ಬಹಳ ಒಳ್ಳೆಯದು. ಜೊತೆಗೆ, ಇದು ಕರುಳಿನ ಆರೋಗ್ಯವನ್ನು ಸುಧಾರಿಸಿ, 'ಬ್ಯೂಟಿರೇಟ್' ನಂತಹ ಅಂಶಗಳನ್ನು ಉತ್ಪಾದಿಸಿ, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ತೂಕ ಇಳಿಸಲು ಸಹ ಇದು ಸಹಕಾರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.