Jaggery Milk Benefits: ಬೆಲ್ಲದ ಟೀ ಮಾಡುವಾಗ ಉದ್ಭವಿಸುವ ಏಕೈಕ ಸಮಸ್ಯೆ ಎಂದರೆ ಟೀ ಮೊಸರಾಗುವುದು. ಜನರು ಇದಕ್ಕೆ ಬೆಲ್ಲ ಕಾರಣ ಎಂದು ಭಾವಿಸುತ್ತಾರೆ. ಆದರೆ ಯೂಟ್ಯೂಬರ್ ಶ್ರೀ ಸಿಂಗ್ ಇದರ ಹಿಂದೆ ಎರಡು ಪ್ರಮುಖ ತಪ್ಪುಗಳಿವೆ ಎಂದು ಹೇಳಿದ್ದಾರೆ.
ಚಳಿಗಾಲದಲ್ಲಿ ಬೆಲ್ಲದ ಟೀ ಕುಡಿಯುವುದೆಂದರೆ ಒಂಥರಾ ಮಜಾ. ಇದು ರುಚಿಕರವಾಗಿರುವುದರ ಜೊತೆಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಆದರೆ ಬೆಲ್ಲದ ಟೀ ಮಾಡುವಾಗ ಉದ್ಭವಿಸುವ ಏಕೈಕ ಸಮಸ್ಯೆ ಎಂದರೆ ಟೀ ಮೊಸರಾಗುವುದು. ಜನರು ಇದಕ್ಕೆ ಬೆಲ್ಲ ಕಾರಣ ಎಂದು ಭಾವಿಸುತ್ತಾರೆ. ಆದರೆ ಯೂಟ್ಯೂಬರ್ ಶ್ರೀ ಸಿಂಗ್ ಇದರ ಹಿಂದೆ ಎರಡು ಪ್ರಮುಖ ತಪ್ಪುಗಳಿವೆ ಎಂದು ಹೇಳಿದ್ದಾರೆ.
ಹೌದು, ಬೆಲ್ಲದ ಟೀ ಪರ್‌ಫೆಕ್ಟ್ ಆಗಿ ಮಾಡಲು ಸಿಂಗ್ ಸಾಹೇಬ್ ಸರಿಯಾದ ಸಲಹೆಯನ್ನು ನೀಡಿದ್ದಾರೆ. ನೀವು ಅವರು ಹೇಳಿದಂತೆ ಬೆಲ್ಲದ ಟೀ ಮಾಡಿದರೆ ಅದು ಎಂದಿಗೂ ಹಾಳಾಗುವುದಿಲ್ಲ ಎಂದು ಅವರು ಗ್ಯಾರಂಟಿ ನೀಡಿದ್ದಾರೆ.
26
ಬೇಕಾಗುವ ಪದಾರ್ಥಗಳು
ಒಂದು ಚಮಚ ಬೆಲ್ಲ ಮತ್ತು ಟೀ ಪೌಡರ್. 2 ತುಳಸಿ ಎಲೆ. 3 ಕರಿಮೆಣಸು. 2 ಹಸಿರು ಏಲಕ್ಕಿ. ಶುಂಠಿ ತುಂಡು. ಒಂದು ಕಪ್ ಹಾಲು.
36
ಉಂಡೆ ಬೆಲ್ಲ
ಸಿಂಗ್ ಸಾಹಿಬ್, ಟೀ ಮಾಡಲು ಉಂಡೆ ಬೆಲ್ಲವನ್ನು ಬಳಸಿದ್ದಾರೆ. ನೀವು ಬಯಸಿದರೆ ಯಾವುದೇ ರೀತಿಯ ಬೆಲ್ಲವನ್ನು ಬಳಸಬಹುದು. ಕಲಬೆರೆಕೆ ಅಥವಾ ರಾಸಾಯನಿಕಯುಕ್ತ ಬೆಲ್ಲ ಬಳಸಬಾರದು. ಏಕೆಂದರೆ ಅದರಲ್ಲಿರುವ ಪದಾರ್ಥಗಳು ಹಾಲಿನೊಂದಿಗೆ ಪ್ರತಿಕ್ರಿಯಿಸಬಹುದು, ಟೀಯನ್ನ ಮೊಸರು ಮಾಡಬಹುದು.
ನೀವು ಮೊದಲು ನೀರನ್ನು ಕುದಿಸಬೇಕು. ಒಂದು ಪಾತ್ರೆಯಲ್ಲಿ ಒಂದು ಕಪ್ ನೀರನ್ನು ಇರಿಸಿ ಕುದಿಸಿ. ನೀರು ಕುದಿಯುತ್ತಿರುವಾಗ, ಮಸಾಲೆಗಳನ್ನು ತಯಾರಿಸಿಕೊಳ್ಳಿ. ಮಸಾಲೆಗೆ ತುಳಸಿ ಎಲೆ, ಕರಿಮೆಣಸು, ಹಸಿರು ಏಲಕ್ಕಿ ಮತ್ತು ಶುಂಠಿಯ ತುಂಡನ್ನು ಕುಟ್ಟಾಣಿಯಲ್ಲಿ ಕುಟ್ಟಿ. ಈ ಮಸಾಲೆ ಟೀಗೆ ಅದ್ಭುತ ಪರಿಮಳ, ರುಚಿ ನೀಡುತ್ತದೆ.
56
ಬೆಲ್ಲ ಕರಗಲು ಬಿಡಿ
ನೀರು ಕುದಿಯಲು ಪ್ರಾರಂಭಿಸಿದ ನಂತರ ಈಗ ಎಲ್ಲಾ ಪದಾರ್ಥಗಳನ್ನು ಸೇರಿಸುವ ಸಮಯ. ನೀವು ಬೆಲ್ಲ, ಟೀ ಪುಡಿ ಮತ್ತು ಜಜ್ಜಿಟ್ಟುಕೊಂಡ ಮಸಾಲೆಗಳನ್ನು ಸೇರಿಸಬೇಕಾಗುತ್ತದೆ. ಸಾಮಾನ್ಯವಾಗಿ ಜನರು ಮಾಡುವುದೇನೆಂದರೆ ತಕ್ಷಣ ಹಾಲನ್ನು ಸೇರಿಸಿ ಬೆಲ್ಲವನ್ನೂ ಬೇಯಲು ಬಿಡದೆ ತಪ್ಪನ್ನು ಮಾಡುತ್ತಾರೆ. ಬೆಲ್ಲವನ್ನು ಚೆನ್ನಾಗಿ ಕರಗಿಸಿ ಕುದಿಯಲು ಬಿಡುವುದು ಬಹಳ ಮುಖ್ಯ.
66
ಇನ್ನೊಂದು ಪಾತ್ರೆಯಲ್ಲಿ ಹಾಲು ಕಾಯಿಸಿ
ಅಷ್ಟೇ ಅಲ್ಲ, ತಣ್ಣನೆಯ ಹಾಲು ಸೇರಿಸುವುದರಿಂದ ತಕ್ಷಣ ತಾಪಮಾನ ಕಡಿಮೆಯಾಗುತ್ತದೆ ಮತ್ತು ಟೀ ಮೊಸರಾಗುತ್ತದೆ. ಆದ್ದರಿಂದಲೇ ಇನ್ನೊಂದು ಗ್ಯಾಸ್ ಸ್ಟೌವ್ ಮೇಲೆ ಒಂದು ಪಾತ್ರೆಯನ್ನು ಇರಿಸಿ. ಒಂದು ಕಪ್ ಹಾಲನ್ನು ಬಿಸಿ ಮಾಡಿ. ಹಾಲು ಕುದಿಯುವವರೆಗೆ ಬಿಸಿ ಮಾಡಿ, ನಂತರ ಅದನ್ನು ಟೀಗೆ ಸೇರಿಸಿ. ಬಿಸಿ ಹಾಲು ಸೇರಿಸುವುದರಿಂದ ಅದು ತಕ್ಷಣವೇ ಕುದಿಯುತ್ತದೆ. ಟೀಯನ್ನು 2 ನಿಮಿಷಗಳ ಕಾಲ ಕುದಿಸಿ ನಂತರ ಅದನ್ನು ಸೋಸಿ. ನೀವು ಸ್ಟ್ರಾಂಗ್ ಟೀ ಬಯಸಿದರೆ ಅದನ್ನು 3 ರಿಂದ 4 ನಿಮಿಷಗಳ ಕಾಲ ಕುದಿಸಬಹುದು. ಇಷ್ಟು ಹೊತ್ತು ಕುದಿಸಿದ ನಂತರ ಟೀ ಮೊಸರಾಗುವುದಿಲ್ಲ.