Google Doodle Idli: ಇದು ಇಂದಿನ ವಿಶೇಷ ಆಕರ್ಷಣೆಯಾಗಿದೆ. ವಿಶೇಷವಾಗಿ ಸೌತ್ ಇಂಡಿಯನ್ಸ್‌ಗೆ. ಸಾಫ್ಟ್ ಆದ, ಆರೋಗ್ಯಕರವಾದ, ಈ ಬೇಯಿಸಿದ ಖಾದ್ಯವನ್ನು ವಿವಿಧ ರೀತಿಯ ಚಟ್ನಿಯೊಂದಿಗೆ ತಿಂತಾರೆ ಜನ್ರು.
ನೀವು ಇಂದು ಬೆಳಗ್ಗೆ ಗೂಗಲ್ ಹೋಂಪೇಜ್ ಓಪನ್ ಮಾಡಿದಾಗ ನಿಮಗೆ ಒಂದು ಅಚ್ಚರಿ ಕಾದಿರಬಹುದು. ಹೌದು, ಇಂದಿನ ಗೂಗಲ್ ಡೂಡಲ್‌ನಲ್ಲಿ ಜನಪ್ರಿಯ ದಕ್ಷಿಣ ಭಾರತದ ಖಾದ್ಯವಾದ ಇಡ್ಲಿ ಇತ್ತು. ಇದು ಇಂದಿನ ವಿಶೇಷ ಆಕರ್ಷಣೆಯಾಗಿದೆ. ವಿಶೇಷವಾಗಿ ಸೌತ್ ಇಂಡಿಯನ್ಸ್‌ಗೆ. ಸಾಫ್ಟ್ ಆದ, ಆರೋಗ್ಯಕರವಾದ, ಈ ಬೇಯಿಸಿದ ಖಾದ್ಯವನ್ನು ವಿವಿಧ ರೀತಿಯ ಚಟ್ನಿಯೊಂದಿಗೆ ತಿಂತಾರೆ ಜನ್ರು.
25
ಇಡ್ಲಿಯ ದಿನ
ನೀವು ಗೂಗಲ್ ಬ್ರೌಸರ್ ತೆರೆದು ಡೂಡಲ್ ಮೇಲೆ ಕ್ಲಿಕ್ ಮಾಡಿದಾಗ, ಖಾದ್ಯದ ಬಗ್ಗೆ ಒಂದು ಸಣ್ಣ ಟಿಪ್ಪಣಿ ಕಾಣಿಸಿಕೊಳ್ಳುತ್ತದೆ. ಅದರಲ್ಲಿ "ಇಂದು ಇಡ್ಲಿಯ ದಿನ ಆಚರಿಸಲಾಗುತ್ತಿದೆ. ಇಡ್ಲಿಯು ಅನ್ನ ಮತ್ತು ಉದ್ದಿನ ಬೇಳೆಯಿಂದ ಹಿಟ್ಟು ಮಾಡಿ ತಯಾರಿಸಿದ ರುಚಿಕರವಾದ, ಆವಿಯಲ್ಲಿ ಬೇಯಿಸಿದ ದಕ್ಷಿಣ ಭಾರತೀಯ ಖಾದ್ಯ" ಎಂದು ಬರೆಯಲಾಗಿದೆ.
35
ಏನನ್ನು ತೋರಿಸಲಾಗಿದೆ?
'ಗೂಗಲ್' ಪದದ ಪ್ರತಿಯೊಂದು ಅಕ್ಷರವು ಖಾದ್ಯದದಲ್ಲಿರುವ ಪದಾರ್ಥಗಳನ್ನ ಪ್ರತಿನಿಧಿಸುತ್ತದೆ. ಮೊದಲ ಅಕ್ಷರ 'G'ನಲ್ಲಿ ಬಿಳಿ ಧಾನ್ಯದಂತಹ ಪದಾರ್ಥ ಪ್ರತಿನಿಧಿಸುತ್ತದೆ. ಇದು ಅಕ್ಕಿ . ಇಡ್ಲಿ ತಯಾರಿಸುವಲ್ಲಿ ಅಕ್ಕಿ ಮುಖ್ಯ ಪದಾರ್ಥವಾಗಿದೆ. 'o' ಒಂದು ಬಟ್ಟಲಿನಲ್ಲಿ ಇರಿಸಲಾಗಿರುವ ಬಿಳಿ ಪದಾರ್ಥವನ್ನು ಪ್ರತಿನಿಧಿಸುತ್ತದೆ. ಆದರೆ ಎರಡನೇ 'o' ಇಡ್ಲಿ ಸ್ಟ್ಯಾಂಡ್‌ನಲ್ಲಿ ತುಂಬಿದ ಇಡ್ಲಿ ಹಿಟ್ಟನ್ನು ಪ್ರತಿನಿಧಿಸುತ್ತದೆ. ಮುಂದಿನ 'G' ಬಹು ಇಡ್ಲಿಗಳನ್ನು ಪ್ರತಿನಿಧಿಸುತ್ತದೆ. 'ಎಲ್' ವಿಭಿನ್ನ ಚಟ್ನಿಗಳನ್ನು ಪ್ರತಿನಿಧಿಸುತ್ತದೆ ಮತ್ತು ಕೊನೆಯ ಅಕ್ಷರ 'e' ಸಹ ಇಡ್ಲಿ ರೀತಿಯ ಒಂದು ಭಕ್ಷ್ಯವನ್ನು ಪ್ರತಿನಿಧಿಸುತ್ತದೆ. ಸಂಪೂರ್ಣ ವಿನ್ಯಾಸವನ್ನು ಬಾಳೆ ಎಲೆಯ ಮೇಲೆ ಅಲಂಕರಿಸಲಾಗಿದೆ.
ಮಾರ್ಚ್ 30ನ್ನು ಅಧಿಕೃತವಾಗಿ ವಿಶ್ವ ಇಡ್ಲಿ ದಿನವೆಂದು ಆಚರಿಸಲಾಗುತ್ತದೆ. ಅಕ್ಟೋಬರ್ 11 ಯಾವುದೇ ನಿರ್ದಿಷ್ಟ ಹಬ್ಬ ಅಥವಾ ವಾರ್ಷಿಕೋತ್ಸವದೊಂದಿಗೆ ಸಂಬಂಧ ಹೊಂದಿಲ್ಲ. ಗೂಗಲ್ ಆಗಾಗ್ಗೆ ವಿವಿಧ ಸ್ಥಳಗಳ ಜನರನ್ನು ಒಂದುಗೂಡಿಸುವ ಡೂಡಲ್‌ಗಳ ಮೂಲಕ ಆಹಾರ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳನ್ನು ಆಚರಿಸುತ್ತದೆ.
55
ಇಡ್ಲಿ ಮಾಡುವುದು ಹೇಗೆ?
*ನಾಲ್ಕು ಭಾಗ ಅಕ್ಕಿ ತೆಗೆದುಕೊಂಡರೆ, ಒಂದು ಭಾಗ ಬಿಳಿ ಉದ್ದಿನ ಬೇಳೆಯನ್ನು ಪ್ರತ್ಯೇಕವಾಗಿ 4 ರಿಂದ 6 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ನೆನೆಸಿಡಿ. *ನಂತರ, ಎರಡನ್ನೂ ರುಬ್ಬಿ ದಪ್ಪ ಹಿಟ್ಟು ತಯಾರಿಸಿ ಚೆನ್ನಾಗಿ ಮಿಶ್ರಣ ಮಾಡಿ. *ಈಗ ಈ ಹಿಟ್ಟು ಹುದುಗಲು ರಾತ್ರಿಯಿಡೀ ಇರಿಸಿ. *ಬೆಳಗ್ಗೆ ಎದ್ದು, ತಯಾರಾದ ಹಿಟ್ಟನ್ನು ಎಣ್ಣೆ ಸವರಿದ ಇಡ್ಲಿ ಅಚ್ಚಿನಲ್ಲಿ ಹಾಕಿ. ಇಡ್ಲಿ ಉಬ್ಬುವವರೆಗೆ 10 ನಿಮಿಷಗಳ ಕಾಲ ಅದನ್ನು ಆವಿಯಲ್ಲಿ ಬೇಯಿಸಿ. *ಬೇಯಿಸಿದ ಇಡ್ಲಿಯನ್ನ ಸಾಂಪ್ರದಾಯಿಕವಾಗಿ ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಲಾಗುತ್ತದೆ.