ಮೊಸರು ಆರೋಗ್ಯಕರ ಆಹಾರಗಳಲ್ಲಿ ಒಂದು. ಊಟದ ಕೊನೆಯಲ್ಲಿ ಮೊಸರನ್ನ ಸೇವನೆ ಮಾಡುವ ಅಭ್ಯಾಸ ಅನೇಕರಿಗಿದೆ. ಆದ್ರೆ ಮೊಸರಿಗೆ ಸ್ವಲ್ಪ ನೀರು ಸೇರಿಸಿ ಕುಡಿದ್ರೆ ಅದರ ಪ್ರಯೋಜನ ಡಬಲ್ ಆಗುತ್ತೆ.
ಮೊಸರಿನಲ್ಲಿ ಇರುವ ಉತ್ತಮ ಬ್ಯಾಕ್ಟೀರಿಯಾಗಳು (ಪ್ರೊಬಯೋಟಿಕ್ಸ್) ಕರುಳಿನ ಆರೋಗ್ಯವನ್ನು ಕಾಪಾಡುತ್ತವೆ. ಮೊಸರಿಗೆ ನೀರು ಸೇರಿಸಿ ಕುಡಿಯುವುದರಿಂದ ಅಜೀರ್ಣ, ಗ್ಯಾಸ್, ಹೊಟ್ಟೆ ಉಬ್ಬರ ಹಾಗೂ ಮಲಬದ್ಧತೆ ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತದೆ.
25
ದೇಹಕ್ಕೆ ನೀರಿನ ಪೂರೈಕೆ
ಮೊಸರಿಗೆ ನೀರು ಸೇರಿಸಿ ಕುಡಿಯುವುದರಿಂದ ದೇಹದಲ್ಲಿ ನೀರಿನ ಪ್ರಮಾಣ ಸಮತೋಲನದಲ್ಲಿರಲು ಸಹಾಯಕ. ದೇಹವು ಚೈತನ್ಯದಿಂದಿರಲು ಇದು ಉತ್ತಮ ಪಾನೀಯವಾಗಿದೆ.
35
ರೋಗನಿರೋಧಕ ಶಕ್ತಿ ಹೆಚ್ಚಳ
ಮೊಸರಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಬಿ ಹಾಗೂ ಉತ್ತಮ ಬ್ಯಾಕ್ಟೀರಿಯಾಗಳು ಸಮೃದ್ಧವಾಗಿವೆ. ಇವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ.
ಮೊಸರಿಗೆ ನೀರು ಸೇರಿಸಿ ತಯಾರಿಸಿದ ಮಜ್ಜಿಗೆ ಕಡಿಮೆ ಕ್ಯಾಲೊರಿಯನ್ನು ಹೊಂದಿರುತ್ತದೆ. ಇದನ್ನು ಸೇವಿಸಿದರೆ ಹೊಟ್ಟೆ ಹೆಚ್ಚು ಸಮಯ ತುಂಬಿದ ಅನುಭವವಾಗುವುದರಿಂದ ಅನಗತ್ಯವಾಗಿ ಮತ್ತೆ ಮತ್ತೆ ತಿನ್ನುವ ಅಭ್ಯಾಸ ಕಡಿಮೆಯಾಗುತ್ತದೆ.
55
ಸರಿಯಾದ ವಿಧಾನ ಯಾವುದು?
ಒಂದು ಕಪ್ ಮೊಸರನ್ನು ಚೆನ್ನಾಗಿ ಕಲೆಸಿ ಅದಕ್ಕೆ ಅಗತ್ಯವಿರುವಷ್ಟು ನೀರು ಸೇರಿಸಿ. ನಂತರ ಸ್ವಲ್ಪ ಹುರಿದ ಜೀರಿಗೆ ಪುಡಿ, ಕಪ್ಪು ಉಪ್ಪು ಹಾಗೂ ಪುದೀನ ಸೊಪ್ಪು ಸೇರಿಸಿದರೆ ರುಚಿಯೂ ಹೆಚ್ಚುತ್ತದೆ, ಆರೋಗ್ಯಕ್ಕೂ ಒಳ್ಳೆಯದು. ಆದರೆ ಹೆಚ್ಚು ಉಪ್ಪು ಅಥವಾ ಸಕ್ಕರೆ ಸೇರಿಸುವುದನ್ನು ತಪ್ಪಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.