ನೇರಳೆ ಎಲೆಕೋಸು ನೋಡಿದವರು ಬಹಳ ಕಡಿಮೆ. ಆದರೆ ಅಪರೂಪಕ್ಕಾಗಿ ಸಿಗೋ ಈ ತರಕಾರಿ (Vegetable) ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ನೇರಳೆ ಎಲೆಕೋಸು 'ಬ್ರಾಸಿಕೇಸಿ' ಕುಟುಂಬಕ್ಕೆ ಸೇರಿದೆ. ಒಂದು ಕಪ್ (89 ಗ್ರಾಂ) ನೇರಳೆ ಎಲೆಕೋಸು ಕೇವಲ 28 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದನ್ನು ತಿಂದರೆ ತೂಕ (Weight) ನಿಯಂತ್ರಣಕ್ಕೆ ಬರುತ್ತದೆ ಎಂದರ್ಥ.
ತೂಕ ಇಳಿಸಿಕೊಳ್ಳಲು ಬಯಸುವವರಿಗೆ ನೇರಳೆ ಎಲೆಕೋಸು ಅತ್ಯುತ್ತಮ ತರಕಾರಿ ಎಂದು ಹೇಳಬಹುದು. 89 ಗ್ರಾಂ ನೇರಳೆ ಎಲೆಕೋಸು 7 ಗ್ರಾಂ ಕಾರ್ಬೋಹೈಡ್ರೇಟ್‌ಗಳು, 2 ಗ್ರಾಂ ಆಹಾರದ ಫೈಬರ್, 1 ಗ್ರಾಂ ಪ್ರೋಟೀನ್, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮ್ಯಾಂಗನೀಸ್, ಫೋಲೇಟ್, ಕಬ್ಬಿಣ ಮತ್ತು ಮೆಗ್ನೀಸಿಯಮ್‌ಗಳಲ್ಲಿ ಸಮೃದ್ಧವಾಗಿದೆ. ಇದರ ಪ್ರಯೋಜನಗಳನ್ನು ತಿಳಿಯೋಣ.
ವಿಟಮಿನ್ ಎ
ನೇರಳೆ ಬಣ್ಣದ ಈ ಎಲೆಕೋಸಿನಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದನ್ನು ತಿನ್ನುವುದು ಕಣ್ಣಿನ (Eyes) ಆರೋಗ್ಯಕ್ಕೆ ಒಳ್ಳೆಯದು. ಇದು ಕಣ್ಣಿನ ಪೊರೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ದೃಷ್ಟಿ (Vision) ಸುಧಾರಿಸುತ್ತದೆ. ಈ ಎಲೆಕೋಸಿನಲ್ಲಿರುವ ಪೋಷಕಾಂಶಗಳು ನೀವು ವಯಸ್ಸಾದಂತೆ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಆದ್ದರಿಂದ ಸಲಾಡ್‌ಗಳ ಜೊತೆಗೆ ಅವುಗಳನ್ನು ಹಸಿಯಾಗಿ ಸೇವಿಸಿ. ಈ ನೇರಳೆ ಎಲೆಕೋಸಿನಲ್ಲಿ ವಿಟಮಿನ್ ಸಿ ಕೂಡ ಅಧಿಕವಾಗಿದೆ. ಇದನ್ನು ಆಗಾಗ್ಗೆ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಫೈಬರ್ ಅಂಶ
ಈ ಎಲೆಕೋಸು ಫೈಬರ್ ಅಂಶದಿಂದ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ವಿಟಮಿನ್ ಗಳಿಂದ ಸಮೃದ್ಧವಾಗಿರುವ ನೇರಳೆ ಎಲೆಕೋಸಿನ ನಿಯಮಿತ ಸೇವನೆಯು ಮೂಳೆಗಳನ್ನು (Bone) ಆರೋಗ್ಯಕರವಾಗಿಡುತ್ತದೆ. ಇದರಲ್ಲಿರುವ ಮೆಗ್ನೀಸಿಯಮ್, ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ಇತರ ಖನಿಜಗಳು ಮೂಳೆಗಳ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಅಮೈನೋ ಆಮ್ಲ
ನೇರಳೆ ಎಲೆಕೋಸು ಹುಣ್ಣುಗಳನ್ನು ತಡೆಯಲು ಸಹ ಸಹಾಯ ಮಾಡುತ್ತದೆ. ಇದರಲ್ಲಿ ಗ್ಲುಟಾಮಿನ್ ಎಂಬ ಅಮೈನೋ ಆಮ್ಲ ಸಮೃದ್ಧವಾಗಿದೆ. ಇದು ಹೊಟ್ಟೆಯ ಹುಣ್ಣುಗಳಿಂದ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಎಲೆಕೋಸನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ಅಲ್ಸರ್ ಕಡಿಮೆಯಾಗುತ್ತದೆ. ಈ ಎಲೆಕೋಸು ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು. ಇದು ನಿಮ್ಮ ಹೃದಯದ (Heart) ಆರೋಗ್ಯವನ್ನೂ ಕಾಪಾಡುತ್ತದೆ.
ವಿಟಮಿನ್ ಬಿ
ನೇರಳೆ ಬಣ್ಣದ ಎಲೆಕೋಸು ವಿಟಮಿನ್ ಬಿ ಕಾಂಪ್ಲೆಕ್ಸ್ ಅನ್ನು ಸಹ ಹೊಂದಿದೆ. ಇದು ಜೀವಕೋಶಗಳಲ್ಲಿ ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಚಯಾಪಚಯವು ಸುಧಾರಿಸುತ್ತದೆ. ಈ ಎಲೆಕೋಸು ಕ್ಯಾಲೋರಿಗಳಲ್ಲಿ ತುಂಬಾ ಕಡಿಮೆಯಾಗಿದೆ. ಇದು ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಈ ಎಲೆಕೋಸನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.
ನೇರಳೆ ಎಲೆಕೋಸು ತ್ವಚೆಯನ್ನು ಆರೋಗ್ಯವಾಗಿರಿಸುತ್ತದೆ. ಇವುಗಳಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ತ್ವಚೆಯನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತದೆ. ಇದು ಚರ್ಮವನ್ನು ISkin) ತಾಜಾವಾಗಿಡಲು ಸಹ ಸಹಾಯ ಮಾಡುತ್ತದೆ. ಹೀಗಾಗಿ ಮೊಡವೆ, ಕಲೆಗಳ ಸಮಸ್ಯೆ ಕಾಡುವುದಿಲ್ಲ. ಇನ್ಯಾಕೆ ತಡ ನಿಮ್ಮ ಆಹಾರಲ್ಲಿ ನೇರಳೆ ಕ್ಯಾಬೇಜ್ ಸೇರಿಸಿಕೊಳ್ಳಿ.