ಫ್ರೆಂಚ್ ಫ್ರೈಸ್
ಫ್ರೈಂಚ್ ಫ್ರೈಸ್ ತಿನ್ನಲು ಬಹುತೇಕ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಇದನ್ನು ಫ್ರೆಶ್ ಆಗಿದ್ದಾಗಲಷ್ಟೇ ತಿನ್ನಲು ಚೆಂದ. ಫ್ರೆಂಚ್ ಫ್ರೈಸ್ ತಣ್ಣಗಾದರೆ ರುಚಿ ಹಾಳಾಗುತ್ತದೆ. ಹೀಗಾಗಿ ಇದನ್ನು ಯಾವಾಗಲೂ ಆನ್‌ಲೈನ್‌ನಲ್ಲಿ ಆರ್ಡರ್ ಮಾಡದಿರಿ.
ಮೊಟ್ಟೆ
ಬರೀ ಮೊಟ್ಟೆಯನ್ನು ದಿನಸಿ ಪಟ್ಟಿಯಲ್ಲಿ ಆರ್ಡರ್ ಮಾಡುವ ತಪ್ಪು ಮಾಡದಿರಿ. ಇದು ಹೇಗೇಗೋ ಆಗಿ ನಿಮ್ಮ ಮನೆ ಸೇರೋ ಸಾಧ್ಯತೆಯೇ ಹೆಚ್ಚು. ಇನ್ನು ಬೇಯಿಸಿದ ಮೊಟ್ಟೆ, ಆಮ್ಲೆಟ್ ಎಲ್ಲವೂ ಬಿಸಿಯಾಗಿದ್ದಾಗಲಷ್ಟೇ ತಿನ್ನಲು ಚೆಂದ ಅನ್ನೋದು ಎಲ್ಲರಿಗೂ ಗೊತ್ತಿದೆ.
ನಾಚೋಸ್
ನಾಚೋಸ್ ಮೂವಿ ಟೈಂನ ಬೆಸ್ಟ್ ಸ್ನ್ಯಾಕ್ಸ್. ಆದರೂ ಇದನ್ನು ಟೈಂ ಪಾಸ್‌ಗೆ ಎಂದು ಇದನ್ನು ತರಿಸಿಕೊಂಡು ತಿನ್ನುವವರಿದ್ದಾರೆ. ಆದರೆ ಇದನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತಿನ್ನೋ ಅಭ್ಯಾಸ ಒಳ್ಳೆಯದಲ್ಲ. ನಾಚೋಸ್ ಕ್ರಿಸ್ಪಿನೆಸ್ ಹೋಗಿ ಬಿಡುತ್ತದೆ. ಹಾಗಾಗಿ ತಿನ್ನಲು ಟೇಸ್ಟೀಯಾಗಿರುವುದಿಲ್ಲ.
ಸ್ಮೂಥೀಸ್
ಸ್ಮೂಥೀಸ್ ತಣ್ಣಗಿದ್ದರಷ್ಟೇ ಕುಡಿಯಲು ಚೆನ್ನಾಗಿರುತ್ತದೆ. ಸ್ಪಲ್ಪ ಹೊತ್ತು ಕಳೆದರೆ ಬಿಸಿಯಾಗುತ್ತದೆ. ಆಗ ರುಚಿಕರವಾಗಿರುವುದಿಲ್ಲ. ಹೀಗಾಗಿ ಆನ್‌ಲೈನ್‌ನಲ್ಲಿ ಯಾವತ್ತೂ ಸ್ಮೂಥೀಸ್ ಆರ್ಡರ್ ಮಾಡಬೇಡಿ.
ಐಸ್‌ಕ್ರೀಂ
ಊಟದ ನಂತರ, ಜೋರು ಮಳೆ ಬರುವಾಗ, ಸೆಖೆಯಾಗುವಾಗ ಐಸ್‌ಕ್ರೀಂ ಇದ್ದರೆ ಚೆನ್ನಾಗಿರುತ್ತದೆ ಎಂದು ಎಲ್ಲರಿಗೂ ಅನಿಸುತ್ತದೆ. ಆದರೆ ಆನ್‌ಲೈನ್‌ನಲ್ಲಿ ಐಸ್‌ಕ್ರೀಂ ಆರ್ಡರ್ ಮಾಡುವುದು ಬೆಸ್ಟ್ ಆಪ್ಶನ್ ಅಲ್ಲ. ಯಾಕೆಂದರೆ ಇದು ಮನೆ ತಲುಪುವ ಹೊತ್ತಿಗೆ ಕರಗಿ ಹೋಗಬಹುದು. ಹೀಗಾಗಿ ಸ್ವತಃ ಅಂಗಡಿಗೆ ಹೋಗಿ ಖರೀದಿಸುವುದು ಒಳ್ಳೆಯದು.
ಡೀಪ್ ಫ್ರೈಡ್ ಫುಡ್
ಯಾವುದೇ ಡೀಫ್ ಫ್ರೈಡ್ ಆಹಾರ ತಾಜಾ ಆಗಿದ್ದಾಗಲಷ್ಟೇ ತಿನ್ನಲು ಕ್ರಂಚೀ ಆಗಿರುತ್ತದೆ. ಸ್ಪಲ್ಪ ಹೊತ್ತಿನ ನಂತರ ಅದರ ಕ್ರಿಸ್ಪೀನೆಸ್ ಹೋಗಲು ಆರಂಭವಾಗುತ್ತದೆ. ಇದು ಆಹಾರದ ರುಚಿ ಹಾಳಾಗಲು ಕಾರಣವಾಗುತ್ತದೆ.
ಚೀಸ್ ಸ್ಯಾಂಡ್‌ವಿಚ್
ಹಸಿವಾದಾಗ ಹಾಗೇ ಸುಮ್ನೆ ಸ್ಯಾಂಡ್‌ವಿಚ್ ತಿನ್ನೋಕೆ ಆಸೆಯಾಗುತ್ತೆ. ಹಾಗಂತ ಥಟ್ಟಂತ ಆನ್‌ಲೈನ್ ಆರ್ಡರ್ ಮಾಡದಿರಿ. ತರಕಾರಿ, ಚೀಸ್ ಮೊದಲಾದವುಗಳನ್ನು ಸೇರಿಸಿರುವ ಸ್ಯಾಂಡ್‌ವಿಚ್ ಡೆಲಿವರಿ ಆಗೋ ಹೊತ್ತಿಗೆ ಮೆತ್ತಗಾಗಿ ರುಚಿ ಕೆಟ್ಟಿರುತ್ತದೆ.