ನಯನತಾರಾ ದಕ್ಷಿಣಭಾರತ ಚಿತ್ರರಂಗದ ಸೂಪರ್‌ಸ್ಟಾರ್. ಕನ್ನಡ, ಮಲಯಾಳಂ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿ ತನ್ನದೇ ಆದ ಸ್ಥಾನವನ್ನು ಗಳಿಸಿದ್ದಾರೆ. ಸೌತ್ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಸಿಕೊಂಡವರು, ಜವಾನ್ ಚಿತ್ರದ ನಂತರ ಬಾಲಿವುಡ್‌ನಲ್ಲಿಯೂ ಮಿಂಚುತ್ತಿದ್ದಾರೆ. ನಿರ್ದೇಶಕ ವಿಘ್ನೇಶ್ ಅವರನ್ನು ಪ್ರೀತಿಸಿ ಮದುವೆಯಾದ ನಯನತಾರಾಗೆ ಅವಳಿ ಮಕ್ಕಳೂ ಇದ್ದಾರೆ.
ಆದರೆ ವಯಸ್ಸಾದಂತೆ ನಯನತಾರಾ ಸೌಂದರ್ಯವೂ ಹೆಚ್ಚುತ್ತಿದೆ. ವಯಸ್ಸು 38 ಆದರೂ ನಟಿಯಿನ್ನೂ 20ರ ತರುಣಿಯಂತೆ ಮಿಂಚುತ್ತಿದ್ದಾರೆ. ಆದರೆ ನಯನ್ ಇಷ್ಟು ಸುಂದರವಾಗಿ ಆರೋಗ್ಯವಾಗಿರಲು ಏನು ಮಾಡುತ್ತಾರೆ..? ಯಾವ ರೀತಿಯ ಆಹಾರ ತೆಗೆದುಕೊಳ್ಳುತ್ತಾರೆ.
ನಯನತಾರ ಫಿಟ್ನೆಸ್ ಮತ್ತು ಸೌಂದರ್ಯವನ್ನು ನೋಡಿದರೆ, ಅವರಿಗೆ 38 ವರ್ಷ ವಯಸ್ಸಾಗಿದೆ ಮತ್ತು ಇಬ್ಬರು ಮಕ್ಕಳ ತಾಯಿ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಈ ವಯಸ್ಸಿನಲ್ಲಿ, ನಯನತಾರಾ ಟೀನೇಜ್ ಹುಡುಗಿಯರಿಗೆ ಟಕ್ಕರ್ ಕೊಡುವಂತಹ, ಸೌಂದರ್ಯ ಮತ್ತು ಫಿಟ್ನೆಸ್ ಹೊಂದಿದ್ದಾರೆ. ಅದಕ್ಕಾಗಿ ಅವರು ನಿರ್ಧಿಷ್ಟ ಆಹಾರಕ್ರಮವನ್ನೂ ಹೊಂದಿದ್ದಾರೆ.
ನಯನ ಹೆಚ್ಚಿನ ಪೋಷಕಾಂಶಗಳಿರುವ ಆಹಾರವನ್ನು ಸೇವಿಸುತ್ತಾರೆ. ಹೆಚ್ಚಿನ ಫೈಬರ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರವನ್ನು ಆರಿಸಿಕೊಳ್ಳುತ್ತಾರೆ. ನಯನತಾರಾ ತೆಂಗಿನಕಾಯಿ ಸ್ಮೂತಿಯನ್ನು ಇಷ್ಟಪಡುತ್ತಾರೆ. ನಯನ ಪ್ರತಿದಿನ ಬೆಳಿಗ್ಗೆ ಈ ಸ್ಮೂಥಿ ಸೇವಿಸುತ್ತಾರೆ. ಅದನ್ನು ಹೇಗೆ ಮಾಡಬೇಕೆಂದು ನೋಡೋಣ.
ಬೇಕಾದ ಪದಾರ್ಥಗಳು
ಎರಡು ಕಪ್ ತೆಂಗಿನ ನೀರು, ಒಂದು ಲೋಟ ತೆಂಗಿನಕಾಯಿ, ಅರ್ಧ ಕಪ್ ತೆಂಗಿನ ಹಾಲು, ರುಚಿಗೆ ಸಕ್ಕರೆ, ಚಿಟಿಕೆ ದಾಲ್ಚಿನ್ನಿ ಪುಡಿ, ಚಿಟಿಕೆ ಏಲಕ್ಕಿ ಪುಡಿ.
ತಯಾರಿಸುವ ವಿಧಾನ
ಬ್ಲೆಂಡರ್ ಜಾರ್‌ನಲ್ಲಿ ತೆಂಗಿನ ನೀರು ಮತ್ತು ತೆಂಗಿನಕಾಯಿ ತುರಿ ಸೇರಿಸಿ. ಅದಕ್ಕೆ ತೆಂಗಿನ ಹಾಲು ಮತ್ತು ಸಕ್ಕರೆ ಸೇರಿಸಿ ಮತ್ತೆ ಬ್ಲೆಂಡ್ ಮಾಡಿ. ಅದಕ್ಕೆ ಏಲಕ್ಕಿ ಪುಡಿ, ದಾಲ್ಚಿನ್ನಿ ಪುಡಿ, ಐಸ್ ತುಂಡುಗಳನ್ನು ಹಾಕಿದರೆ ಚೆನ್ನಾಗಿ ಕಲಸಿಕೊಂಡರೆ ಸಾಕು. ಇದರ ರುಚಿ ತುಂಬಾ ಚೆನ್ನಾಗಿರುತ್ತದೆ. ಹೆಲ್ದೀ ಕೂಡಾ ಹೌದು,
ತೆಂಗಿನಕಾಯಿಯಲ್ಲಿ ನಾರಿನಂಶ ಬಹಳ ಹೆಚ್ಚಾಗಿರುತ್ತದೆ. ಕಾರ್ಬೋಹೈಡ್ರೇಟ್‌ಗಳು ತುಂಬಾ ಕಡಿಮೆ. ಇದು ಉತ್ಕರ್ಷಣ ನಿರೋಧಕಗಳಲ್ಲಿಯೂ ಸಮೃದ್ಧವಾಗಿದೆ. ಇದು ಯಂಗ್ ಆಗಿ ಕಾಣಲು ಸಹ ಸಹಾಯ ಮಾಡುತ್ತದೆ. ತೆಂಗಿನಕಾಯಿ ನೀರು ಕುಡಿಯುವುದರಿಂದ ದೇಹವು ಹೈಡ್ರೇಟೆಡ್ ಆಗಿರಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಕೂಡಾ ಇದರಲ್ಲಿ ಲಭ್ಯವಿದೆ.