World Idli Day: ಇಲ್ಲಿವೆ 8 ವಿಧದ ನವೀನ & ಆರೋಗ್ಯಕರ ಇಡ್ಲಿ

First Published | Mar 30, 2023, 2:03 PM IST

ಇಡ್ಲಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ನಾವು ದಕ್ಷಿಣ ಭಾರತೀಯರಿಗಂತೂ ಇಡ್ಲಿ ಅಂದ್ರೆ ಪ್ರಾಣ. ಮನೆಯಲ್ಲೂ, ಹೊಟೇಲ್ ಗೆ ಹೋದ್ರೂ ಜನ ಹೆಚ್ಚಾಗಿ ಇದನ್ನೇ ತಿನ್ನುತ್ತಾರೆ. ಇಡ್ಲಿ ಪ್ರಿಯರಿಗೊಂದು ಗುಡ್ ನ್ಯೂಸ್ ಏನಂದ್ರೆ ಇವತ್ತು ವಿಶ್ವ ಇಡ್ಲಿ ದಿನವಂತೆ… ಬನ್ನಿ ಈ ದಿನ ವಿವಿಧ ಇಡ್ಲಿ ಬಗ್ಗೆ ತಿಳಿಯೋಣ.

ವಿಶ್ವ ಇಡ್ಲಿ ದಿನವನ್ನು (World Idly Day) ಮಾರ್ಚ್ 30 ರಂದು ಆಚರಿಸಲಾಗುತ್ತದೆ, ಇದು 2015 ರಲ್ಲಿ ಚೆನ್ನೈನ ಜನಪ್ರಿಯ ಇಡ್ಲಿ ಕುಕ್ ಎನಿಯವನ್ 1,328 ವಿಧದ ಇಡ್ಲಿಗಳನ್ನು ತಯಾರಿಸಿದ ನಂತರ ಪ್ರಾರಂಭವಾಯಿತು. ಈ ವರ್ಷ, ಈ 8 ನವೀನ ಮತ್ತು ಆರೋಗ್ಯಕರ ಇಡ್ಲಿಗಳೊಂದಿಗೆ ಈ ದಿನವನ್ನು ಆಚರಿಸಿ, ಅವು ಸಂಪೂರ್ಣವಾಗಿ ರುಚಿಕರವಾಗಿದೆ. ಯಾವೆಲ್ಲಾ ರುಚಿಯ ಇಡ್ಲಿಗಳಿವೆ ನೋಡೋಣ.

ರಾಮಶ್ಶೇರಿ ಇಡ್ಲಿ (Ramassery Idli​): ಇದು ನೆನೆಸಿದ ಅಕ್ಕಿ, ನೆನೆಸಿದ ಉದ್ದಿನ ಬೇಳೆಯಿಂದ ತಯಾರಿಸಿದ ಮತ್ತು ಮಸ್ಲಿನ್ ಬಟ್ಟೆಯಿಂದ ಮುಚ್ಚಿದ ಮಣ್ಣಿನ ಮಡಕೆಯ ಮೇಲೆ ಬೇಯಿಸಿ ಮಾಡಿರುವಂತಹ ಕಡಿಮೆ ಜನಪ್ರಿಯತೆ ಗಳಿಸಿರುವ ಇಡ್ಲಿಯಾಗಿದೆ. ಇದು ತಿನ್ನಲು ಟೇಸ್ಟಿ ಕೂಡ ಆಗಿರುತ್ತೆ. 

Tap to resize

ಬಾಜ್ರಾ ಇಡ್ಲಿ(Bajra Idli): ಈ ಆರೋಗ್ಯಕರ ಇಡ್ಲಿಯಲ್ಲಿ ಫೈಬರ್ ಸಮೃದ್ಧವಾಗಿದೆ. ಬಾಜ್ರಾ ಆರೋಗ್ಯಕರವಾಗಿ ಅನ್ನೋದು ಗೊತ್ತೇ ಇದೆ. ಈ ಬಾಜ್ರಾಇಡ್ಲಿಯನ್ನು, ಸ್ವಲ್ಪ ಬಾಜ್ರಾ,  ಅಕ್ಕಿ, ಉದ್ದಿನ ಬೇಳೆ, ಮೆಂತ್ಯ ಬೀಜಗಳು, ಉಪ್ಪು ಮತ್ತು ಎಣ್ಣೆಯಿಂದ ತಯಾರಿಸಲಾಗುತ್ತದೆ.

ರವೆ ಇಡ್ಲಿ (Rava Idli): ಇದು ಅತ್ಯಂತ ಜನಪ್ರಿಯ ಇಡ್ಲಿಯಾಗಿದೆ. ಹೆಚ್ಚಿನ ಮನೆಗಳಲ್ಲೂ, ಹೊಟೇಲ್ ಗಳಲ್ಲೂ ಇದನ್ನ ಮಾಡಿ ಸವಿಯುತ್ತಾರೆ. ಮೊಸರು, ಹುರಿದ ರವೆ, ತರಕಾರಿಗಳು, ಅಡಿಗೆ ಸೋಡಾ, ಉಪ್ಪು ಮತ್ತು ನೀರಿನಿಂದ ತಯಾರಿಸಲಾಗುತ್ತದೆ. ತರಕಾರಿ ಹಾಕದೇ ಕೂಡ ಇದನ್ನ ಮಾಡಲಾಗುತ್ತೆ.

ಬೀಟ್ರೂಟ್ ಇಡ್ಲಿ (Beetroot Idli): ಇದು ತೂಕ ಇಳಿಸುವ ಸ್ನೇಹಿ ಇಡ್ಲಿ. ಇದನ್ನು ರವೆ, ಮೊಸರು, ಬೀಟ್ರೂಟ್ ಪ್ಯೂರಿ ಮತ್ತು ಉಪ್ಪನ್ನು ಬಳಸಿ ತಯಾರಿಸಲಾಗುತ್ತೆ. ಮಕ್ಕಳು ಬೀಟ್ ರೂಟ್ ತಿನ್ನಲು ಇಷ್ಟಪಡದಿದ್ರೆ ಮಕ್ಕಳಿಗೆ ಇಡ್ಲಿ ಜೊತೆ ಬೀಟ್ ರೂಟ್ ಮಿಕ್ಸ್ ಮಾಡಿ ನೀಡಬಹುದು. ಅವರು ಇಷ್ಟಪಟ್ಟು ಸೇವಿಸ್ತಾರೆ

ರೈಸ್ ಇಡ್ಲಿ (Rice Idli): ಈ ಸಾಂಪ್ರದಾಯಿಕ ಇಡ್ಲಿ ಪಾಕವಿಧಾನವನ್ನು ಇಡ್ಲಿ ಅಕ್ಕಿ, ಉದ್ದಿನ ಬೇಳೆ, ಉಪ್ಪು, ಮೊಸರು ಮತ್ತು ನೀರಿನಿಂದ ತಯಾರಿಸಲಾಗುತ್ತದೆ. ಇದನ್ನು ಹಿಂದಿನ ಕಾಲದಿಂದಲೂ ಜನರು ಸಾಮಾನ್ಯವಾಗಿ ಮನೆಯಲ್ಲಿ ಮಾಡಿಕೊಂಡು ಬರುತ್ತಿದ್ದ ಇಡ್ಲಿಯಾಗಿದೆ. ಸಾಂಬಾರ್ ಜೊತೆ ತಿಂದರೆ ಇದರೆ ರುಚಿ ದುಪ್ಪಟ್ಟಾಗುತ್ತೆ.

ಪೋಹಾ ಇಡ್ಲಿ (Poha Idli): ಈ ಇಡ್ಲಿಯನ್ನು ನೆನೆಸಿದ ಪೋಹಾ, ಹುರಿದ ರವೆ, ಉಪ್ಪು, ನೀರು ಮತ್ತು ಹುಳಿ ಮೊಸರಿನೊಂದಿಗೆ ತಯಾರಿಸಲಾಗುತ್ತದೆ. ಇದು ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ ಮತ್ತು ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. 

ಓಟ್ಸ್ ಇಡ್ಲಿ(Oats Idli): ನೀವು ತೂಕ ಇಳಿಸಲು ಇಷ್ಟಪಡ್ತಿದ್ರೆ, ಖಂಡಿತವಾಗಿಯೂ ಓಟ್ಸ್ ಇಡ್ಲಿ ಟ್ರೈ ಮಾಡಬಹುದು. ಇದನ್ನು ರೋಲ್ಡ್ ಓಟ್ಸ್, ರವೆ, ಮೊಸರು, ನೀರು, ಉಪ್ಪು, ಅಡಿಗೆ ಸೋಡಾ ಮತ್ತು ತುರಿದ ತರಕಾರಿಗಳೊಂದಿಗೆ ತಯಾರಿಸಲಾಗುತ್ತದೆ.ತಿನ್ನಲು ತುಂಬಾನೆ ರುಚಿಕರವಾದ ಇಡ್ಲಿ ಇದಾಗಿದೆ.

ಕ್ವಿನೋವಾ ಇಡ್ಲಿ (Quinoa Idli): ಇದು ಕಡಿಮೆ ಕಾರ್ಬ್, ಹೆಚ್ಚಿನ ಪ್ರೋಟೀನ್ ಹೊಂದಿರುವ ಇಡ್ಲಿಯಾಗಿದೆ., ನೆನೆಸಿದ ಕ್ವಿನೋವಾ, ಉದ್ದಿನ ಬೇಳೆ, ಚಪ್ಪಟೆಯಾದ ಅಕ್ಕಿ, ಮೆಂತ್ಯ ಬೀಜಗಳು, ಎಣ್ಣೆ, ನೀರು ಮತ್ತು ಉಪ್ಪಿನೊಂದಿಗೆ ತಯಾರಿಸಲಾಗುತ್ತದೆ.

Latest Videos

click me!