ಫುಡ್ಡೀಸ್‌ಗೆ ಗುಡ್‌ನ್ಯೂಸ್‌..ಬೆಂಗಳೂರಲ್ಲಿ ಆರಂಭವಾಗಲಿದೆ 2ನೇ ಫುಡ್ ಸ್ಟ್ರೀಟ್, ಎಲ್ಲಿ..ಯಾವಾಗ?

First Published | Mar 29, 2023, 11:36 AM IST

ವೆರೈಟಿ ವೆರೈಟಿ ಫುಡ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹೇಳ್ತಾ ಇದ್ರೇನೆ ಬಾಯಲ್ಲಿ ನೀರೂರುತ್ತೆ. ಬೆಂಗಳೂರಿನ ಫುಡ್ಡೀಗಳು ಮಿಸ್ ಮಾಡ್ದೆ ವಿಸಿಟ್ ಮಾಡೋ ಒಂದು ಜಾಗ ಅಂದ್ರೆ ವಿವಿ ಪುರಂ ಫುಡ್ ಸ್ಟ್ರೀಟ್. ಆದ್ರೆ ದೂರ ದೂರದ ಏರಿಯಾದವ್ರು ಇಲ್ಲಿಗೆ ಬರೋಕೆ ಕಷ್ಟ ಆಗ್ತಿತ್ತು. ಅಂಥಾ ಫುಡ್ ಪ್ರಿಯರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್. ಬೆಂಗಳೂರಿನಲ್ಲಿ 2ನೇ ಫುಡ್ ಸ್ಟ್ರೀಟ್ ಆರಂಭವಾಗಲಿದೆ. ಅದೆಲ್ಲಿ?

ಬೆಂಗಳೂರು ಐಟಿ-ಬಿಟಿ ನಗರ ಆಗಿರೋ ಹಾಗೇನೆ ವೆರೈಟಿ ಫುಡ್‌ಗಳ ಆಗರ. ಇಲ್ಲಿ ಸೌತ್‌ ಇಂಡಿಯಾ, ನಾರ್ತ್‌ ಇಂಡಿಯಾ, ಚೈನೀಸ್‌, ಮೆಕ್ಸಿಕನ್ ಹೀಗೆ ಎಲ್ಲಾ ರಾಜ್ಯದ, ದೇಶದ ಆಹಾರಗಳು ಸಿಗುತ್ತವೆ. ಹೀಗಾಗಿ ಫುಡ್ಡೀಗಳಿಗೆ ಬೆಂಗಳೂರು ಫೇವರಿಟ್‌ ಪ್ಲೇಸ್. ಅದರಲ್ಲೂ ಬೆಂಗಳೂರಿನ  ವಿವಿ ಪುರಂ ಫುಡ್ ಸ್ಟ್ರೀಟ್ ಅಥವಾ ವಿಶ್ವೇಶ್ವರ ಪುರಂ ಫುಡ್ ಸ್ಟ್ರೀಟ್‌ ಪುಡ್ಡೀಗಳ ಅಡ್ಡಾ.

ವಿವಿ ಪುರಂ ಫುಡ್ ಸ್ಟ್ರೀಟ್‌ನಲ್ಲಿ ಗೋಲ್‌ಗಪ್ಪಾ, ಮಸಾಲೆಪುರಿಯಿಂದ ಆರಂಭಗೊಂಡು ವೆರೈಟಿ ದೋಸೆ, ರೋಟಿ, ಮೊಮೋಸ್, ಕಾಕ್‌ಟೈಲ್ಸ್, ಸ್ನ್ಯಾಕ್ಸ್‌, ಕ್ಯಾಂಡಿ, ವೆರೈಟಿ ವಡಾ ಪಾವ್‌ ಎಲ್ಲವೂ ಇಲ್ಲಿ ಲಭ್ಯವಿದೆ. ವೆರೈಟಿ ಐಸ್‌ಕ್ರೀಂನ್ನು ಸಹ ಟೇಸ್ಟ್ ಮಾಡಬಹುದು. ಎಲ್ಲಾ ರೀತಿಯ ಫುಡ್ ಒಂದೇ ಕಡೆ ಸಿಗುವ ಕಾರಣ ಹೆಚ್ಚಿನವರು ವಿವಿ ಪುರಂ ಫುಡ್ ಸ್ಟ್ರೀಟ್‌ನಲ್ಲಿ ಸಮಯ ಕಳೆಯುತ್ತಾರೆ.

Latest Videos


ಆದ್ರೆ ಬಸವನಗುಡಿ, ಟೌನ್‌ಹಾಲ್‌ ಹೀಗೆ ಆಸುಪಾಸಿನಲ್ಲಿ ಇರುವವರಿಗಷ್ಟೇ ಇದು ಹತ್ತಿರ. ಉಳಿದಂತೆ ಬೆಂಗಳೂರಿನ ಇತರ ಕಡೆಗಳಲ್ಲಿ ವಾಸಿಸುವವರು ಫುಡ್‌ ಸ್ಟ್ರೀಟ್‌ಗ ಅಷ್ಟು ದೂರ ಹೋಗ್ಬೇಕಲ್ಲಾ ಎಂದು ಅಂದುಕೊಳ್ಳುತ್ತಾರೆ. ಇನ್ಮುಂದೆ ಆ ಬೇಜಾರು ಬೇಕಿಲ್ಲ. ಯಾಕಂದ್ರೆ ಬೆಂಗಳೂರಿನ ಯಲಹಂಕದಲ್ಲಿ 2ನೇ ಫುಡ್ ಸ್ಟ್ರೀಟ್ ಓಪನ್ ಆಗಲಿದೆ.

ಇಲ್ಲಿನ ದೊಡ್ಡಬಳ್ಳಾಪುರ ರಸ್ತೆ ಮತ್ತು ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯ ಮಧ್ಯೆ ಇರುವ 500 ಮೀಟರ್ ಸ್ಥಳದಲ್ಲಿ ತಿಂಡಿ ಬೀದಿ ಅನಾವರಣಗೊಳ್ಳಲಿದೆ. ಈ ಹೊಸ ತಿಂಡಿ ಬೀದಿ ಇನ್ನೇನು 3 ರಿಂದ 4 ತಿಂಗಳಿನಲ್ಲಿ ಅಧಿಕೃತವಾಗಿ ಆರಂಭವಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಇದುವರೆಗೆ ತ್ಯಾಜ್ಯದಿಂದಲೇ ತುಂಬಿರುತ್ತಿದ್ದ ಸ್ಥಳ ಇನ್ಮೇಲೆ ಬೆಂಗಳೂರಿನ 2ನೇ ಅಧಿಕೃತ ಫುಡ್ ಸ್ಟ್ರೀಟ್ ಆಗಿ ಬದಲಾಗಲಿದೆ. ಇದಕ್ಕಾಗಿ ಬಿಬಿಎಂಪಿ  3 ಕೋಟಿ ರೂ. ವ್ಯಯಿಸಿ ಬೀದಿ ವ್ಯಾಪಾರಿ ವಲಯವನ್ನಾಗಿ ಮಾಡಿದೆ. ಈ ಆಹಾರ ಬೀದಿಯಲ್ಲಿ, ನೀವು ಎಲ್ಲಾ ರೀತಿಯ ದೇಸಿ ಆಹಾರ ಪದಾರ್ಥಗಳನ್ನು ನಿರೀಕ್ಷಿಸಬಹುದು. 

ಮತ್ತೊಂದೆಡೆ ವಿವಿ ಪುರಂ ಫುಡ್ ಸ್ಟ್ರೀಟ್ ಪುನರಾಭಿವೃದ್ಧಿ ಆಗಲಿದೆ ಎಂದು ತಿಳಿದುಬಂದಿದೆ. ನೆಲಹಾಸಿಗೆ ಪಾಲಿಶ್ ಮಾಡಿದ ಗ್ರಾನೈಟ್ ಕಲ್ಲುಗಳನ್ನು ಹಾಕಲಾಗುತ್ತದೆ. ಆದ್ದರಿಂದ ಗ್ರಾಹಕರು ಆರಾಮವಾಗಿ ನಡೆಯಬಹುದು. ರಸ್ತೆಯಲ್ಲಿನ ಎಲ್ ಇಡಿ ಬೀದಿದೀಪಗಳು ಪ್ರಕಾಶಮಾನವಾಗಿ ಬೆಳಗಲಿವೆ. ಅಲ್ಲದೆ, ಮರು-ಪೇಂಟಿಂಗ್ ಮಾಡುವುದರಿಂದ ಫುಡ್‌ಸ್ಟ್ರೀಟ್ ಮತ್ತಷ್ಟು ಬೆಳಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾಗಾದರೆ, ನೀವು ಇನ್ನೂ ವಿವಿ ಪುರಂ ಫುಡ್ ಸ್ಟ್ರೀಟ್‌ಗೆ ಭೇಟಿ ನೀಡಿದ್ದೀರಾ? ಹೆಚ್ಚು ಮುಖ್ಯವಾಗಿ, ಯಲಹಂಕದಲ್ಲಿ ಹೊಸ ಆಹಾರ ಬೀದಿಗಾಗಿ ನೀವು 10 ರ ಪ್ರಮಾಣದಲ್ಲಿ ಎಷ್ಟು ಉತ್ಸುಕರಾಗಿದ್ದೀರಿ? ನಾವು ಖಂಡಿತವಾಗಿಯೂ! ಮತ್ತು ಯಲಹಂಕದ ಹೊಸ ಫುಡ್ ಸ್ಟ್ರೀಟ್‌ನಲ್ಲಿ ಮೊಸುರು ಕೊಡ್ಬಲೆಯನ್ನು ಪ್ರಯತ್ನಿಸಲು ಕಾಯಲು ಸಾಧ್ಯವಿಲ್ಲ.

click me!