ನೀವು ನಿಯಮಿತವಾಗಿ ಕಲ್ಲಂಗಡಿ ಹಣ್ಣು ತಿನ್ನಬಹುದು. ಪ್ರತಿ 100 ಗ್ರಾಂ ಕಲ್ಲಂಗಡಿ ಹಣ್ಣಿನಲ್ಲಿ ಕೇವಲ 30 ಕ್ಯಾಲೊರಿಗಳಿರುತ್ತವೆ. ಇದು ತೂಕ ಹೆಚ್ಚಾಗಲು ಬಿಡುವುದಿಲ್ಲ ಬದಲಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಕಲ್ಲಂಗಡಿ ಹಣ್ಣು ತಿನ್ನಿರಿ. ಇದು ಪ್ರಯೋಜನಕಾರಿಯಾಗಲಿದೆ. ನೀವು ನೇರಳೆ ಹಣ್ಣನ್ನು ಕೂಡ ತಿನ್ನಬಹುದು. ನೇರಳೆ ಹಣ್ಣು ತೂಕ ನಷ್ಟಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಅದೇ ರೀತಿ, ಇದು ಚಯಾಪಚಯ ಕ್ರಮವನ್ನೂ ಹೆಚ್ಚಿಸುತ್ತದೆ. ದೇಹದಲ್ಲಿ ಕೊಬ್ಬು ಸಂಗ್ರಹವಾಗಲು ಬಿಡೋದಿಲ್ಲ.