ಬೇಸಿಗೆಯಲ್ಲಿ ಮೊಸರನ್ನ ತಪ್ಪದೇ ತಿನ್ನಿ ಮತ್ತು ಈ ಪ್ರೋಜನಗಳನ್ನ ಪಡೆಯಿರಿ

First Published | May 5, 2024, 4:08 PM IST

ಮೊಸರನ್ನ ದಿನನಿತ್ಯದ  ಆಹಾರದಲ್ಲಿ   ಉಪಯುಕ್ತವಾದ ಸಪ್ಲಿಮೆಂಟ್‌ ಆಗಿದೆ. ಇದು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಪ್ರೋಟೀನ್‌ ಸಮೃದ್ಧವಾಗಿರುವ ಮೊಸರನ್ನವು  ಬೇಸಿಗೆಗೆ ಬೆಸ್ಟ್‌ ಆಹಾರವಾಗಿದೆ. ಮೊಸರು ಅನ್ನ ತಿನ್ನುವುದರಿಂದ ಆಗುವ  ಪ್ರಯೋಜನಗಳು.
.
 

ಮೊಸರನ್ನವು ದೇಹವನ್ನು ತಂಪಾಗಿಸುವ ಪರಿಣಾಮವನ್ನು ಹೊಂದಿದೆ. ಏಕೆಂದರೆ ಇದು ಮೊಸರು ಮತ್ತು ಅನ್ನದ ಸಂಯೋಜನೆಯನ್ನು ಹೊಂದಿದ್ದು ಅದು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Curd Rice

ಪ್ರೋಬಯಾಟಿಕ್: ಮೊಸರನ್ನದಲ್ಲಿನ ಪ್ರಮುಖ ಅಂಶವಾಗಿರುವ ಮೊಸರು ಕರುಳಿನ ಆರೋಗ್ಯವನ್ನು ಉತ್ತೇಜಿಸುವ ಪ್ರೋಬಯಾಟಿಕ್‌ಗಳನ್ನು ಒಳಗೊಂಡಿದೆ.
 

Tap to resize

Curd Rice

ಹೈಡ್ರೇಟಿಂಗ್: ಮೊಸರು ಅನ್ನವು ದೇಹದಲ್ಲಿ  ನೀರಿನ  ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮೊಸರಿನಲ್ಲಿರುವ ನೀರು  ಅಂಶ  ಮತ್ತು ಅಕ್ಕಿಯ ತೇವಾಂಶವನ್ನು ಉಳಿಸಿಕೊಳ್ಳುವ ಗುಣಗಳು ದೇಹ  ಹೈಡ್ರೇಟ್‌ ಆಗಿದೆ ಎಂದು ಖಚಿತಪಡಿಸುತ್ತದೆ.

ಪೌಷ್ಟಿಕಾಂಶ ಭರಿತ: ಮೊಸರು ಅನ್ನವು ಪೌಷ್ಟಿಕಾಂಶದ ಸಮೃದ್ಧವಾಗಿದೆ. ಮೊಸರು ಕ್ಯಾಲ್ಸಿಯಂ ಮತ್ತು  ಪ್ರೋಟೀನ್‌ನ ಉತ್ತಮ ಮೂಲವಾಗಿದೆ.
 

Curd rice
ಜೀರ್ಣಿಸಿಕೊಳ್ಳಲು ಸುಲಭ: ಬಿಸಿ ವಾತಾವರಣದಲ್ಲಿ ದೇಹದ ಜೀರ್ಣಾಂಗ ವ್ಯವಸ್ಥೆಯು ನಿಧಾನವಾಗಬಹುದು. ಮೊಸರನ್ನವು ಹೊಟ್ಟೆಗೆ ಹಗುರವಾಗಿರುತ್ತದೆ ಮತ್ತು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ
 

Latest Videos

click me!