ಹೃದಯದ ಆರೋಗ್ಯಕ್ಕಾಗಿ ಈ ಎಣ್ಣೆ ಅಡುಗೆಯಲ್ಲಿ ಬಳಸುವುದನ್ನ ತಪ್ಪಿಸಿ

First Published | May 5, 2024, 4:03 PM IST

ಆಹಾರದಲ್ಲಿನ ಕೊಬ್ಬುಗಳು ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆರೋಗ್ಯಕರ ಕೊಬ್ಬನ್ನು ಊಟ ಮತ್ತು ತಿಂಡಿಗಳಲ್ಲಿ ಸೇರಿಸುವುದರಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸಬಹುದು, ಹೃದಯದ ಆರೋಗ್ಯವನ್ನು ಉತ್ತೇಜಿಸಬಹುದು ಜೊತಗೆ   ಆಹಾರದ ಸುವಾಸನೆ  ಅಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಕೊಬ್ಬುಗಳು ಅಡುಗೆ ಎಣ್ಣೆಗಳು ಮುಖ್ಯವಾದವು.. ಕೆಲವು ಎಣ್ಣೆಗಳು   ಅಡುಗೆಗೆ ಹೆಚ್ಚು ಸೂಕ್ತವಾದವು ಮತ್ತು ಆರೋಗ್ಯಕ್ಕೆ  ಪ್ರಯೋಜನಕಾರಿ . ಅದೇ ಸಮಯದಲ್ಲಿ ಕೆಲವು ಎಣ್ಣೆಗಳನ್ನು ಅಡುಗೆಯಲ್ಲಿ ಬಳಸುವುದರಿಂದ  ಆರೋಗ್ಯಕ್ಕೆ ಹಾನಿಯಾಗಬಹುದು.

ಆಲಿವ್ ಎಣ್ಣೆ: ಹೃದಯಕ್ಕೆ ಆರೋಗ್ಯಕರವಾದ ಮ್ಯಾನೊಸಾಚುರೇಟೆಡ್ ಕೊಬ್ಬುಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ವಿಶೇಷವಾಗಿ ಎಕ್ಸ್‌ಟ್ರಾ ವರ್ಜಿನ್  ಆಲಿವ್ ಎಣ್ಣೆಯಲ್ಲಿ ಸಮೃದ್ಧವಾಗಿದೆ. ಆಲಿವ್‌ ಎಣ್ಣೆ  ಉರಿಯೂತ ಕಡಿಮೆ ಮಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನು  ಸುಧಾರಿಸುತ್ತದೆ.

വെളിച്ചെണ്ണ

ತೆಂಗಿನ ಎಣ್ಣೆ: ತೆಂಗಿನ ಎಣ್ಣೆಯಲ್ಲಿರುವ ಸ್ಯಾಚುರೇಟೆಡ್ ಕೊಬ್ಬಿನಂಶದಿಂದಾಗಿ ಇದು ಚರ್ಚೆಗೆ ಗುರಿಯಾಗುತ್ತಲೇ ಇರುತ್ತದೆ. ಆದರೆ  ಇದು ಅದರ ವಿಶಿಷ್ಟವಾದ ಕೊಬ್ಬಿನಾಮ್ಲ  ಮತ್ತು  ಉರಿಯೂತ ವಿರೋಧಿ ಗುಣಲಕ್ಷಣಗಳಿಂದಾಗಿ ತೂಕ ನಷ್ಟ ಮತ್ತು ಹೃದಯದ ಆರೋಗ್ಯಕ್ಕೆ ಪ್ರಯೋಜನಗಳನ್ನು ನೀಡುತ್ತದೆ.
 

Latest Videos


avacado oil

ಆವಕಾಡೊ ಎಣ್ಣೆ: ಆವಕಾಡೊ ಆಯಿಲ್‌ನಲ್ಲಿ ಮನೊಸಾಚುರೇಟೆಡ್, ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿದೆ. ಅಧಿಕ ಸ್ಮೋಕ್ ಪಾಯಿಂಟ್‌ ಹೊಂದಿರುವ ಈ ಎಣ್ಣೆ ವಿವಿಧ ಅಡುಗೆ ವಿಧಾನಗಳಿಗೆ ಸೂಕ್ತವಾಗಿದೆ. ಇದನ್ನು ಹೆಚ್ಚಾಗಿ ಡ್ರೆಸ್ಸಿಂಗ್ ಮತ್ತು ಮ್ಯಾರಿನೇಡ್‌ಗಳಲ್ಲಿ ಬಳಸಲಾಗುತ್ತದೆ

ಕನೋಲಾ ಎಣ್ಣೆ: ಕಡಿಮೆ ಸ್ಯಾಚುರೇಟೆಡ್ ಕೊಬ್ಬುಗಳನ್ನು  ಮತ್ತು  ಹೆಚ್ಚಿನ ಮೊನೊಸಾಚುರೇಟೆಡ್ ಹಾಗೂ  ಒಮೆಗಾ 3 ಹೊಂದಿರುವ ಕನೋಲಾ ಆಯಿಲ್‌ ಹೃದಯವನ್ನು ಆರೋಗ್ಯಕರವಾಗಿಸುತ್ತದೆ ಮತ್ತು ತಟಸ್ಥ ಸುವಾಸನೆ ಮತ್ತು ಹೆಚ್ಚಿನ ಸ್ಮೋಕ್ ಪಾಯಿಂಟ್‌ ಹೊಂದಿರುವ ಇದು  ಅಡುಗೆಗೆ ಸೂಕ್ತವಾಗಿದೆ.

ಗ್ರೇಪ್‌ ಸೀಡ್‌ ಆಯಿಲ್: ಪಾಲಿಅನ್‌ಸ್ಯಾಚುರೇಟೆಡ್‌ ಫ್ಯಾಟ್ಸ್‌ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಗ್ರೇಪ್‌ ಸೀಡ್‌ ಆಯಿಲ್ ಹೆಚ್ಚಿನ ಸ್ಮೋಕ್ ಪಾಯಿಂಟ್ ಹೊಂದಿದ್ದು ಇದು ಆಹಾರ ಹುರಿಯಲು ಮತ್ತು ಕರಿಯಲು ಬೆಸ್ಟ್ ಮತ್ತು ವಿವಿಧ ಭಕ್ಷ್ಯಗಳಿಗೆ ಸೂಕ್ತವಾದ ತಟಸ್ಥ ಪರಿಮಳವನ್ನು ನೀಡುತ್ತದೆ.

ಪಾಮಮ ಆಯಿಲ್‌: ಪಾಮ್‌ ಆಯಿಲ್‌ನಲ್ಲಿ ಹೃದಯದ ಕಾಯಿಲೆಗಳಿಗೆ ಸಂಬಂಧಿಸಿದ ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿದು ಆರೋಗ್ಯಕ್ಕೆ ಹಾನಿಕಾರವಾಗಿದೆ ಮತ್ತು ಅದರ ಉತ್ಪಾದನೆಯು ಅರಣ್ಯನಾಶದಂತಹ ಪರಿಸರ ಸಮಸ್ಯೆಗಳಿಗೆ ಕಾರಣವಾಗಬಹುದು.

ಹತ್ತಿ ಬೀಜದ ಎಣ್ಣೆ: ಸಾಮಾನ್ಯವಾಗಿ  ಸಂಸ್ಕರಿಸುವ  ಕಾಟನ್‌ ಸೀಡ್‌ ಆಯಿಲ್‌  ಹೃದಯಕ್ಕೆ ಹಾನಿಕಾರಕವಾದ ಟ್ರಾನ್ಸ್ ಕೊಬ್ಬನ್ನು ಹೊಂದಿರುತ್ತದೆ ಮತ್ತು ಇದರ ಸಂಸ್ಕರಣ  ವಿಧಾನದ ಕಾರಣ ಇದನ್ನು ಒಳಸದೆ ಇರುವುದು ಉತ್ತಮ.

ಹೈಡ್ರೋಜನೀಕರಿಸಿದ ತೈಲ: ಹೈಡ್ರೋಜೆನೆಟೆಡ್‌ ಆಯಿಲ್‌ಗಳನ್ನು ಹೃದಯದ  ಅಪಾಯಕ್ಕೆ ಕೊಡುಗೆ ನೀಡುವ ಟ್ರಾನ್ಸ್ ಕೊಬ್ಬು ಹೊಂದಿದ್ದು , ದಿನ್ನು ಕೈಗಾರಿಕಾವಾಗಿ ಸಂಸ್ಕರಿಸಲಾಗುತ್ತದೆ ಮತ್ತು ಆರೋಗ್ಯಕರ ಅಡುಗೆ ಮಾಡಲು ಶಿಫಾರಸು ಮಾಡುವುದಿಲ್ಲ.

ಸೋಯಾಬೀನ್ ಎಣ್ಣೆ: ಸೋಯಾಬೀನ್‌ ಆಯಿಲ್‌  ಪಾಲಿಅನ್‌ಸ್ಯಾಚುರೇಟೆಡ್‌ ಫ್ಯಾಟ್‌ ಅಂಶವನ್ನು ಹೊಂದಿದ ಹೊರತಾಗಿಯೂ ಭಾರೀ ಸಂಸ್ಕರಣೆಯು ಟ್ರಾನ್ಸ್ ಕೊಬ್ಬುಗಳು ಮತ್ತು ಪೋಷಕಾಂಶಗಳ ನಷ್ಟಕ್ಕೆ ಕಾರಣವಾಗಬಹುದು ಮತ್ತು ಎಣ್ಣೆಯನ್ನು  ಕಡಿಮೆ ಆರೋಗ್ಯಕರವಾಗಿಸುತ್ತದೆ.

ಕಾರ್ನ್‌ ಆಯಿಲ್: ಮೆಗಾ 6 ಕೊಬ್ಬಿನಾಮ್ಲವನ್ನು ಅಧಿಕವಾಗಿ ಹೊಂದಿರುವ ಜೋಳದ ಎಣ್ಣೆಯನ್ನು ಸೇವಿಸಿದಾಗ ಉರಿಯೂತವನ್ನು ಉತ್ತೇಜಿಸುತ್ತದೆ, ಇದು ಅಡುಗೆಯಲ್ಲಿ ಬಳಸಬಹುದಾದರೂ ದೀರ್ಘಕಾಲದ ಕಾಯಿಲೆಗಳಿಗೆ ಅಪಾಯವನ್ನುಂಟುಮಾಡುತ್ತದೆ.

click me!