Recipe: ಬೆಳಗ್ಗೆ ಉಳಿದ ಇಡ್ಲಿಯಿಂದ ಮಾಡಿ ಸಂಜೆಗೆ ತಯಾರಿಸಿ ರುಚಿಯಾದ 6 ಸ್ನ್ಯಾಕ್ಸ್

Published : Oct 20, 2026, 03:34 PM IST

ಬೆಳಗ್ಗೆ ಮಾಡಿದ ಇಡ್ಲಿ ಸಂಜೆಯವರೆಗೂ ಉಳಿದಿದ್ದರೆ, ಅದನ್ನು ರುಚಿಕರವಾದ ಮತ್ತು ಆರೋಗ್ಯಕರವಾದ ಸ್ನ್ಯಾಕ್ಸ್ ಆಗಿ ಬದಲಾಯಿಸಬಹುದು. ಗ್ರೀನ್ ಮಸಾಲೆ ಇಡ್ಲಿ, ಇಡ್ಲಿ ಪಕೋಡ, ಮತ್ತು ಇಡ್ಲಿ ಚಿತ್ರಾನ್ನದಂತಹ ಸರಳ ವಿಧಾನಗಳಿಂದ ಎಲ್ಲರಿಗೂ ಇಷ್ಟವಾಗುವ ತಿಂಡಿಗಳನ್ನು ತಯಾರಿಸಬಹುದು.

PREV
16
ಇಡ್ಲಿ ತಿಂಡಿಗಳು

ಬೆಳಗ್ಗೆ ಮಾಡಿದ್ದ ಇಡ್ಲಿ, ಸಂಜೆಯವರೆಗೂ ಉಳಿದಿದ್ರೆ ಅದನ್ನು ಸ್ಮೈಸಿಯಾಗಿ ಬದಲಿಸಿ. ಈ ವಿಧಾನ ತುಂಬಾ ಸರಳವಾಗಿದ್ದು, ಮಕ್ಕಳಿಗೆ ಆರೋಗ್ಯಕರವಾದ ತಿಂಡಿ ಮಾಡಿಕೊಟ್ಟಂತೆ ಆಗುತ್ತದೆ. ಈ ರೀತಿಯ ತಿಂಡಿಗಳು ಮಕ್ಕಳಿಂದ ಹಿಡಿದು ವೃದ್ದವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ. ಈ ಲೇಖನ ಇಂತಹ ಕೆಲವು ರೆಸಿಪಿಗಳನ್ನು ಹೊಂದಿವೆ.

26
ಗ್ರೀನ್ ಮಸಾಲೆ ಇಡ್ಲಿ

ಹಸಿಮೆಣಸಿನಕಾಯಿ, ಪುದಿನಾ, ಕೋತಂಬರಿ ಸೊಪ್ಪನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಬಾಣಲೆಗೆ ಸಾಸವೆ-ಜೀರಿಗೆ, ಕರೀಬೇವು ಮತ್ತು ಬೆಳ್ಳುಳ್ಳಿಯ ಒಗ್ಗರಣೆ ಹಾಕಿಕೊಳ್ಳಿ. ತದನಂತರ ರುಬ್ಬಿಕೊಂಡಿರುವ ಗ್ರೀನ್ ಮಸಾಲೆಯನ್ನು ಸೇರಿಸಿ ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಿಕೊಂಡು, ಇದಕ್ಕೆ ಚಿಕ್ಕದಾಗಿ ಕತ್ತರಿಸಿಕೊಂಡಿರುವ ಇಡ್ಲಿ ತುಂಡುಗಳನ್ನು ಸೇರಿಸಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 3-4 ನಿಮಿಷ ಬೇಯಿಸಿಕೊಂಡ್ರೆ ರುಚಿಯಾದ ತಿಂಡಿ ಸವಿಯಲು ಸಿದ್ಧವಾಗುತ್ತದೆ.

36
ಇಡ್ಲಿಗೆ ಫಾಸ್ಟ್‌ಫುಡ್ ಟಚ್

ಇನ್ನು ನೀವು ಗೋಬಿಮಂಚೂರಿ ಸ್ಟೈಲ್‌ನಲ್ಲಿ ಇಡ್ಲಿಗೆ ಫಾಸ್ಟ್‌ಫುಡ್/ಚೈನೀಸ್ ಫುಡ್ ಟಚ್ ಕೊಡಬಹುದು. ಇಡ್ಲಿ ತುಂಡುಗಳನ್ನು ಬಾಣಲೆಗೆ ಹಾಕಿಕೊಂಡು ಸೋಯಾ, ಚಿಲ್ಲಿ ಆಂಡ್ ಟೊಮೆಟೋ ಸಾಸ್ ಜೊತೆ ಫ್ರೈ ಮಾಡಿಕೊಂಡು, ಒಂದಿಷ್ಟು ಸ್ಪ್ರಿಂಗ್ ಆನಿಯನ್, ಕ್ಯಾಬೇಜ್ ಜೊತೆ ಮಿಕ್ಸ್ ಮಾಡಿಕೊಂಡ್ರೆ ಒಂದೊಳ್ಳೆ ರುಚಿಯ ಸ್ನ್ಯಾಕ್ಸ್ ರೆಡಿಯಾಗುತ್ತದೆ.

46
ರೆಡ್ ಆಂಡ್ ಸ್ಪೈಸಿ ಇಡ್ಲಿ

ಬಾಣಲೆಯಲ್ಲಿ ಟೊಮೆಟೋ, ಈರುಳ್ಳಿ, ಸಾಸವೆ-ಜೀರಿಗೆಯ ಒಗ್ಗರಣೆ ಮಾಡಿಕೊಳ್ಳಿ. ಇದಕ್ಕೆ ನಿಮಗೆ ಬೇಕಾದಷ್ಟು ಅಚ್ಚ ಖಾರದ ಪುಡಿ, ಗರಂ ಮಸಾಲೆ ಸೇರಿಸಿಕೊಂಡು ಬಾಡಿಸಿಕೊಳ್ಳಿ. ನಂತರ ಇದಕ್ಕೆ ಕತ್ತರಿಸಿಕೊಂಡಿರುವ ಇಡ್ಲಿ ತುಂಡುಗಳನ್ನು ಸೇರಿಸಿಕೊಂಡು ಹೈಫ್ಲೇಮ್‌ನಲ್ಲಿ ರೋಸ್ಟ್ ಮಾಡಿಕೊಂಡ್ರೆ ರೆಡ್ ಆಂಡ್ ಸ್ಪೈಸಿ ಸ್ನ್ಯಾಕ್ಸ್ ರೆಡಿಯಾಗುತ್ತದೆ.

56
ಇಡ್ಲಿ ಪಕೋಡ

ಇಡ್ಲಿಯನ್ನು ಸಣ್ಣದಾಗಿ ತುಂಡುಗಳನ್ನು ಮಾಡಿಕೊಳ್ಳಿ. ಮತ್ತೊಂದೆಡೆ ಕಡಲೆಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು, ಒಂದಿಷ್ಟು ಓಂಕಾಳು ಸೇರಿಸಿಕೊಂಡು ಬಜ್ಜಿ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳಿ. ಆನಂತರ ಕಡಲೆಹಿಟ್ಟಿನಲ್ಲಿ ಇಡ್ಲಿಯನ್ನು ಅದ್ದಿಕೊಂಡು ಡೀಪ್ ಫ್ರೈ ಮಾಡಿಕೊಳ್ಳಿ. ಸಂಜೆ ಸ್ನ್ಯಾಕ್ಸ್‌ಗೆ ಗರಿಗರಿಯಾದ ಇಡ್ಲಿ ಪಕೋಡ ಸಿದ್ಧ.

66
ಇಡ್ಲಿ ವಿಥ್ ಚಿತ್ರನ್ನಾ

ಬೆಳಗ್ಗೆ ಮಾಡಿಕೊಂಡಿರುವ ಇಡ್ಲಿಯನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿಕೊಳ್ಳಿ. ನಂತರ ಚಿತ್ರನ್ನಾದಂತೆ ಎಲ್ಲಾ ಈರುಳ್ಳಿ-ಟೊಮೆಟೋ/ನಿಂಬೆರಸ, ಹಸಿಮೆಣಸಿನಕಾಯಿ, ಕಡಲಬೀಜ, ಉದ್ದಿನಬೇಳೆ ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ. ನಂತರ ಇದಕ್ಕೆ ಸ್ಮ್ಯಾಶ್ ಮಾಡಿಕೊಂಡಿರುವ ಇಡ್ಲಿ ಸೇರಿಸಿದ್ರೆ ಇಡ್ಲಿ ಚಿತ್ರನ್ನಾ ಅಥವಾ ಇಡ್ಲಿ ಉಪ್ಪಿಟ್ಟು ಸವಿಯಲು ಸಿದ್ಧ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories