ಮಾನಸಿಕ ಒತ್ತಡ ಅಥವಾ ಸ್ಟ್ರೆಸ್ ಕಡಿಮೆ ಮಾಡಲು ಸಹಾಯ ಮಾಡುವ 7 ಪ್ರಮುಖ ಆಹಾರಗಳು ಇಲ್ಲಿವೆ.
ಸಾಲ್ಮನ್, ಮತ್ತಿ ಮತ್ತು ಬಂಗುಡೆ ಮೀನುಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಹೇರಳವಾಗಿರುತ್ತದೆ. ಇವು ಕಾರ್ಟಿಸೋಲ್ ಮಟ್ಟವನ್ನು ನಿಯಂತ್ರಿಸಿ, ಒತ್ತಡವನ್ನು ತಕ್ಷಣವೇ ಕಡಿಮೆ ಮಾಡುತ್ತವೆ.
ಹಸಿರು ಸೊಪ್ಪುಗಳಲ್ಲಿ ಮೆಗ್ನೀಸಿಯಮ್ ಅಂಶ ಸಮೃದ್ಧವಾಗಿದೆ. ಇದು ನಮ್ಮ ನರಮಂಡಲವನ್ನು ಸಹಜವಾಗಿ ರಿಲ್ಯಾಕ್ಸ್ ಮಾಡಲು ಸಹಾಯ ಮಾಡುತ್ತದೆ.
ಪೊಟ್ಯಾಸಿಯಮ್, ಫೈಬರ್ ಮತ್ತು ಆರೋಗ್ಯಕರ ಮೊನೊ-ಅನ್ಸ್ಯಾಚುರೇಟೆಡ್ ಕೊಬ್ಬುಗಳಿಂದ ಸಮೃದ್ಧವಾಗಿರುವ ಅವಕಾಡೊ, ರಕ್ತದೊತ್ತಡವನ್ನು ಕಡಿಮೆ ಮಾಡಿ ಒತ್ತಡವನ್ನು ನಿಯಂತ್ರಿಸುತ್ತದೆ.
ನಟ್ಸ್ ಮತ್ತು ಬೀಜಗಳಲ್ಲಿ ಬಿ-ವಿಟಮಿನ್, ಜಿಂಕ್ ಮತ್ತು ಸೆಲೆನಿಯಮ್ ಇರುತ್ತದೆ. ಇವು ಜೀವಕೋಶಗಳನ್ನು ರಕ್ಷಿಸುತ್ತವೆ ಮತ್ತು ಅಡ್ರಿನಲ್ ಗ್ರಂಥಿಯ ಕಾರ್ಯಕ್ಕೆ ಬೆಂಬಲ ನೀಡುತ್ತವೆ.
ಮೊಸರಿನಲ್ಲಿರುವ ಪ್ರೋಬಯಾಟಿಕ್ಸ್ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಕರುಳಿನ ಆರೋಗ್ಯಕ್ಕೂ ಮತ್ತು ನಮ್ಮ ಮೂಡ್ ನಿಯಂತ್ರಣಕ್ಕೂ ನೇರ ಸಂಬಂಧವಿದೆ.
ಡಾರ್ಕ್ ಚಾಕೊಲೇಟ್ನಲ್ಲಿರುವ ಆ್ಯಂಟಿಆಕ್ಸಿಡೆಂಟ್ಗಳು ಮತ್ತು ಪಾಲಿಫಿನಾಲ್ಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಅದ್ಭುತವಾಗಿ ಕೆಲಸ ಮಾಡುತ್ತವೆ.
ಆತಂಕ, ಒತ್ತಡ ಕಾಡ್ತಿದ್ಯಾ? ಹಾಗಿದ್ರೆ ಇವುಗಳನ್ನು ತಿನ್ನಿ!
Belly Fat: ಹೊಟ್ಟೆಯ ಬೊಜ್ಜು ಮುಜುಗರ ತರುತ್ತಿದೆಯೇ? ಹೀಗೆ ಮಾಡಿ ಸಾಕು!
ಒಡೆದ ಹಿಮ್ಮಡಿ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು.. ಅಲ್ಲಿ ಇಲ್ಲಿ ಏಕೆ ಹುಡುಕೋದು?
Iron Rich Foods: ರಕ್ತಹೀನತೆ ತಡೆಯಲು ನೀವು ತಿನ್ನಲೇಬೇಕಾದ 7 ಆಹಾರಗಳಿವು!