World Lung Day 2022: ಶ್ವಾಸಕೋಶ ಆರೋಗ್ಯವಾಗಿರಲು ಹಸಿರೆಲೆ ತರಕಾರಿ ತಪ್ಪದೇ ತಿನ್ನಿ

First Published | Sep 25, 2022, 12:36 PM IST

ವಿಶ್ವದಾದ್ಯಂತ ಪ್ರತಿ ವರ್ಷ ಸೆಪ್ಟೆಂಬರ್ 25ರಂದು ವಿಶ್ವ ಶ್ವಾಸಕೋಶ ದಿನವನ್ನು ಆಚರಿಸಲಾಗುತ್ತದೆ. ಶ್ವಾಸಕೋಶಗಳು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಅದಕ್ಕಾಗಿಯೇ ಅವರನ್ನು ಆರೋಗ್ಯವಾಗಿಡುವುದು ಬಹಳ ಮುಖ್ಯ. ಹೀಗಾಗಿ ಶ್ವಾಸಕೋಶಗಳನ್ನು ಆರೋಗ್ಯವಾಗಿಡಲು ಎಂಥಾ ಆಹಾರ ಸೇವಿಸಬೇಕು ತಿಳಿಯೋಣ.

ಇಂದು ಅನೇಕ ಜನರು ಕೆಟ್ಟ ಜೀವನಶೈಲಿಯಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಿಗರೇಟ್ ಸೇದುವುದು, ಕಲುಷಿತ ಗಾಳಿಯನ್ನು ಉಸಿರಾಡುವುದು ಮತ್ತು ಜೀವನಶೈಲಿಯ ಬದಲಾವಣೆಯಿಂದ ಶ್ವಾಸಕೋಶದ ಸಮಸ್ಯೆಗಳು ಉಂಟಾಗುತ್ತವೆ. ಈ ಅಭ್ಯಾಸಗಳನ್ನು ತಪ್ಪಿಸುವುದರಿಂದ ನಿಮ್ಮ ಶ್ವಾಸಕೋಶಗಳು ಆರೋಗ್ಯಕರವಾಗಿರುತ್ತವೆ. ಕೆಲವೊಂದು ಆಹಾರಗಳು ಶ್ವಾಸಕೋಶವನ್ನು ಆರೋಗ್ಯವಾಗಿಡುತ್ತವೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ.

ಬೆರ್ರಿ ಹಣ್ಣುಗಳು
ಬೆರ್ರಿಗಳು ಔಷಧೀಯ ಗುಣಗಳನ್ನು ಹೊಂದಿವೆ. ಸ್ಟ್ರಾಬೆರಿ, ಬ್ಲೂಬೆರ್ರಿ, ಬ್ಲ್ಯಾಕ್ ಬೆರ್ರಿ, ರಾಸ್್ಬೆರ್ರಿಸ್ ಮುಂತಾದ ಬೆರ್ರಿಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇವು ಶ್ವಾಸಕೋಶದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವುಗಳನ್ನು ತಿನ್ನುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದು ಹೃದಯವನ್ನು ಸಹ ಆರೋಗ್ಯವಾಗಿಡುತ್ತದೆ.

Tap to resize

ಎಲೆ ತರಕಾರಿಗಳು
ಶ್ವಾಸಕೋಶದ ಆರೋಗ್ಯಕ್ಕೆ ಹಸಿರು ತರಕಾರಿಗಳು ತುಂಬಾ ಉಪಯುಕ್ತವಾಗಿವೆ. ಪಾಲಕ್ ಸೊಪ್ಪು, ಎಲೆಕೋಸು, ಬೊಕೊಲಿ, ಮೊರಿಂಗದ ಎಲೆಗಳು ಹೀಗೆ ಹಲವಾರು ಪೋಷಕಾಂಶಗಳನ್ನು ಒಳಗೊಂಡಿದ್ದು ಶ್ವಾಸಕೋಶಕ್ಕೆ ಒಳ್ಳೆಯದು. ಈ ಕರಿಬೇವಿನ ಎಲೆಗಳು ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟಲು ಸಹ ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ಬಹಿರಂಗಪಡಿಸಿ

ಟೊಮೇಟೋ
ಟೊಮ್ಯಾಟೋಸ್ ಪೋಷಕಾಂಶಗಳು ಮತ್ತು ವಿಟಮಿನ್‌ಗಳಲ್ಲಿ ಸಮೃದ್ಧವಾಗಿದೆ. ಟೊಮೆಟೊದಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಪೊಟ್ಯಾಸಿಯಮ್, ಮ್ಯಾಂಗನೀಸ್, ಮೆಗ್ನೀಸಿಯಮ್, ರಂಜಕ, ಫೈಬರ್ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಟೊಮೆಟೊದಲ್ಲಿರುವ ಲೈಕೋಪೀನ್ ಶ್ವಾಸಕೋಶವನ್ನು ಆರೋಗ್ಯವಾಗಿರಿಸುತ್ತದೆ. ಹಾಗಾಗಿ ಆಗಾಗ ಟೊಮೆಟೊ ಜ್ಯೂಸ್ ಕುಡಿಯಿರಿ.

ಬೀಟ್ ರೂಟ್
ಬೀಟ್ ರೂಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ನೈಟ್ರೈಟ್ ಹೇರಳವಾಗಿದ್ದು ಶ್ವಾಸಕೋಶವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ವಿಟಮಿನ್ ಸಿ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿರುವ ಬೀಟ್ ರೂಟ್ ದೇಹವನ್ನು ಆರೋಗ್ಯಕರವಾಗಿರಿಸುತ್ತದೆ.

ಆಪಲ್
ದಿನಕ್ಕೊಂದು ಸೇಬು ತಿಂದರೆ ವೈದ್ಯರ ಬಳಿ ಹೋಗುವ ಅಗತ್ಯವಿಲ್ಲ ಎನ್ನುತ್ತಾರೆ ತಜ್ಞರು. ಇದರ ಔಷಧೀಯ ಗುಣಗಳು ಅನೇಕ ರೋಗಗಳನ್ನು ಗುಣಪಡಿಸುತ್ತವೆ. ಈ ಹಣ್ಣಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ವಿಟಮಿನ್ ಸಿ ಶ್ವಾಸಕೋಶವನ್ನು ಆರೋಗ್ಯಕರವಾಗಿರಿಸುತ್ತದೆ. ಇವುಗಳಲ್ಲಿರುವ ವಿಟಮಿನ್ ಬಿ, ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಹೃದಯವನ್ನು ಆರೋಗ್ಯವಾಗಿರಿಸುತ್ತದೆ.

ಅರಿಶಿನ
ಅರಿಶಿನವು ಶ್ವಾಸಕೋಶದ ಸಮಸ್ಯೆಗೆಳಿಗೆ ರಾಮಬಾಣ. ಏಕೆಂದರೆ ಇದರಲ್ಲಿ ಹಲವಾರು ಔಷಧೀಯ ಗುಣಗಳಿವೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಅನೇಕ ರೋಗಗಳನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ವೈರಸ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಅರಿಶಿನ ಹೊಂದಿದೆ ಎಂದು ಹಲವಾರು ಅಧ್ಯಯನಗಳು ಬಹಿರಂಗಪಡಿಸಿದೆ.

Latest Videos

click me!