ನೀವು ತಿನ್ನೋದು ನಕಲಿ ಡ್ರೈ ಫ್ರುಟ್ಸ್ ಅಲ್ಲಾ ತಾನೆ…? ಪತ್ತೆ ಹಚ್ಚೋದು ಹೇಗೆ?

First Published | Sep 25, 2022, 12:25 PM IST

ಪ್ರತಿದಿನ ಒಂದು ಮುಷ್ಟಿ ಡ್ರೈ ಫ್ರುಟ್ಸ್ ಸೇವಿಸೋದು ಆರೋಗ್ಯಕ್ಕೆ ಉತ್ತಮ ಅನ್ನೋದನ್ನು ನೀವು ಕೇಳಿರುತ್ತೀರಿ. ಅದಕ್ಕಾಗಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಡ್ರೈ ಫ್ರುಟ್ಸ್ ಸೇವಿಸುತ್ತೀರಿ. ಆದರೆ ನಕಲಿ ಡ್ರೈ ಫ್ರುಟ್ಸ್ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ವೇಗವಾಗಿ ಹರಡುತ್ತಿದೆ ಅನ್ನೋದು ಗೊತ್ತಾ?. ಹೌದು, ನಕಲಿ ಡ್ರೈ ಫ್ರುಟ್ಸ್ ಹೆಚ್ಚುತ್ತಿದೆ, ಆದರೆ ಉತ್ತಮ ಆರೋಗ್ಯಕ್ಕಾಗಿ ಡ್ರೈ ಫ್ರುಟ್ಸ್  ಸೇವಿಸುವ ಅವಸರದಲ್ಲಿ ನಿಮ್ಮ ಆರೋಗ್ಯದೊಂದಿಗೆ ಆಟವಾಡಬೇಡಿ. ಅದರ ಬದಲಾಗಿ ಈ ರೀತಿಯಾಗಿ ನಿಜವಾದ ಮತ್ತು ನಕಲಿ ಡ್ರೈ ಫ್ರುಟ್ಸ್ ಗುರುತಿಸಿ.

ಡ್ರೈ ಫ್ರುಟ್ಸ್ ನಮ್ಮ ಆರೋಗ್ಯಕ್ಕೆ ಉತ್ತಮವಾಗಿದೆ, ಆದ್ದರಿಂದ ಆರೋಗ್ಯಕರವಾಗಿ ಮತ್ತು ಸದೃಢವಾಗಿರಲು, ನಾವು ನಮ್ಮ ಆಹಾರದಲ್ಲಿ ಡ್ರೈ ಫ್ರುಟ್ಸ್ (dry fruits) ಸೇರಿಸಬೇಕು. ಇದರಲ್ಲಿ ವಾಲ್ನಟ್ಗಳು, ಬಾದಾಮಿಗಳು, ಪಿಸ್ತಾಗಳು, ಗೋಡಂಬಿಗಳು, ಒಣದ್ರಾಕ್ಷಿಗಳು, ಅಂಜೂರಗಳು, ಇತ್ಯಾದಿಗಳು ಸೇರಿವೆ. ಆದರೆ ಇತ್ತೀಚಿನ ದಿನಗಳಲ್ಲಿ ನಕಲಿ ಮತ್ತು ಕಳಪೆ ಗುಣಮಟ್ಟದ ಡ್ರೈ ಫ್ರುಟ್ಸ್  ಸಹ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ನಿಮಗೆ ತಿಳಿದಿದೆಯೇ. 

ನಕಲಿ ಡ್ರೈ ಫ್ರುಟ್ಸ್ (fake dry fruits) ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಹಾಗಾಗಿ, ನಿಜವಾದ ಮತ್ತು ನಕಲಿ ಡ್ರೈ ಫ್ರುಟ್ಸ್ ನಡುವಿನ ವ್ಯತ್ಯಾಸ ನಾವು ಹೇಗೆ ಗುರುತಿಸುತ್ತೇವೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಆದ್ದರಿಂದ ನಾವು ನಿಮಗೆ ನಿಜವಾದ ಮತ್ತು ನಕಲಿ ಡ್ರೈ ಫ್ರುಟ್ಸ್ ನಡುವಿನ ವ್ಯತ್ಯಾಸವನ್ನು ಗುರುತಿಸೋದು ಹೇಗೆ ಅನ್ನೋದನ್ನು ನೋಡೋಣ…

Tap to resize

ಕಲರ್ ಮೂಲಕ ಅಸಲಿ ಮತ್ತು ನಕಲಿ ಡ್ರೈ ಫ್ರುಟ್ಸ್ ಗುರುತಿಸಿ 
ನೀವು ಬಾದಾಮಿ (almond), ವಾಲ್ನಟ್ಗಳು ಅಥವಾ ಯಾವುದೇ ಡ್ರೈ ಫ್ರುಟ್ಸ್ ಖರೀದಿಸಿದಾಗಲೆಲ್ಲಾ, ನೀವು ಅದರ ಬಣ್ಣವನ್ನು ಸರಿಯಾಗಿ ಚೆಕ್ ಮಾಡಬೇಕು. ನಕಲಿ ಒಣ ಹಣ್ಣುಗಳ ಬಣ್ಣವು ನಿಜವಾದ ಹಣ್ಣುಗಳಿಗಿಂತ ಸ್ವಲ್ಪ ಗಾಢವಾಗಿ ಕಾಣುತ್ತದೆ ಮತ್ತು ಅದರ ರುಚಿಯೂ ಸಹ ಸ್ವಲ್ಪ ಕಹಿಯಾಗಿದೆ.

ಅಂಜೂರ ಮತ್ತು ಪಿಸ್ತಾಗಳನ್ನು ಹೇಗೆ ಚೆಕ್ ಮಾಡೋದು?
ನೀವು ಒಣದ್ರಾಕ್ಷಿ (raisins), ಅಂಜೂರ ಅಥವಾ ಪಿಸ್ತಾವನ್ನು ಖರೀದಿಸಲು ಹೋದಾಗಲೆಲ್ಲಾ, ಮೊದಲು ಅದರ ಒಂದು ಕಾಳನ್ನು ಅಗಿಯಿರಿ. ಇದು ತುಂಬಾ ಗಟ್ಟಿಯಾಗಿದ್ದರೆ, ಅದು ತುಂಬಾ ಹಳೆಯದಾಗಿದೆ ಮತ್ತು ಅದನ್ನು ಹೆಚ್ಚಿನ ತಾಪಮಾನದಲ್ಲಿ ಇರಿಸಲಾಗಿದೆ ಎಂದು ಅರ್ಥಮಾಡಿಕೊಳ್ಳಿ. ಅಂತಹ ಒಣ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಹಾನಿಕಾರಕ.
 

ಇಂತಹ ಬಾದಾಮಿಗಳನ್ನು ಖರೀದಿಸೋದನ್ನು ತಪ್ಪಿಸಿ
ಬಾದಾಮಿಯನ್ನು ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡಲು ಇತ್ತೀಚಿನ ದಿನಗಳಲ್ಲಿ ಓಚರ್ ಬಣ್ಣ ಅಥವಾ ಸೀಮೆಸುಣ್ಣದ ಜೇಡಿಮಣ್ಣಿನಿಂದ ಹೊಳಪು ನೀಡಲಾಗುತ್ತದೆ. ಅದರ ಮೇಲೆ ರಾಸಾಯನಿಕವನ್ನು ಹಚ್ಚಲಾಗುತ್ತದೆ, ಇದರಿಂದ ಅದರ ಬಣ್ಣವು ಹೊರಬರುತ್ತದೆ. ಅಂತಹ ಬಾದಾಮಿಗಳನ್ನು ಖರೀದಿಸುವುದನ್ನು ತಪ್ಪಿಸಿ. ಬಾದಾಮಿ ಖರೀದಿಸುವಾಗ, ಅದನ್ನು ನಿಮ್ಮ ಅಂಗೈಯ ಮೇಲೆ ಇರಿಸಿ ಮತ್ತು 5 ರಿಂದ 10 ನಿಮಿಷಗಳ ಕಾಲ ಉಜ್ಜಿ. ನಿಮ್ಮ ಕೈಯಲ್ಲಿ ಬಣ್ಣವಿದ್ದರೆ ಅದು ಕಲಬೆರಕೆಯಾಗಿದೆ ಎಂದು ಅರ್ಥ.

ಇಂತಹ ಗೋಡಂಬಿಗಳನ್ನು ಖರೀದಿಸೋದನ್ನು ತಪ್ಪಿಸಿ 
ಗೋಡಂಬಿಯನ್ನು (cashew nuts) ಖರೀದಿಸುವಾಗ, ನೀವು ಯಾವಾಗಲೂ ಬಿಳಿ ಮತ್ತು ಲೈಟ್ ಬಣ್ಣದ ಗೋಡಂಬಿಗಳನ್ನು ಖರೀದಿಸಿ. ಗೋಡಂಬಿಗಳಲ್ಲಿ ಹಳದಿ ಬಣ್ಣವಿದ್ದರೆ, ಅಂತಹ ಗೋಡಂಬಿಗಳನ್ನು ಖರೀದಿಸುವುದನ್ನು ತಪ್ಪಿಸಿ. ಇದಲ್ಲದೆ, ಗೋಡಂಬಿಯಿಂದ ಎಣ್ಣೆಯ ಕೆಟ್ಟ ವಾಸನೆ ಬರುತ್ತಿದ್ದರೆ, ಈ ಗೋಡಂಬಿಗಳು ಹಳೆಯದಾಗಿವೆ, ಅದನ್ನು ಖರೀದಿಸಬೇಡಿ.

ಇಂತಹ ವಾಲ್ ನಟ್ ಬೇಡವೇ ಬೇಡ
ವಾಲ್ ನಟ್ (walnut) ಖರೀದಿಸುವಾಗ, ಅದರ ಬಣ್ಣದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅದು ಗಾಢ ಕಂದು ಬಣ್ಣದಲ್ಲಿದ್ದರೆ, ಅದನ್ನು ಖರೀದಿಸಬೇಡಿ, ಏಕೆಂದರೆ ಅದು ರುಚಿಯಲ್ಲಿ ಕಹಿಯಾಗಿದೆ. ಇಷ್ಟೇ ಅಲ್ಲ, ಅದು ಎಣ್ಣೆಯ ವಾಸನೆಯನ್ನು ಹೊಂದಿದೆಯೇ ಎಂದು ನೋಡಿ, ಎಣ್ಣೆಯ ಸ್ಮೆಲ್ ಬರುತ್ತಿದ್ದರೆ ನಂತರ ಅದನ್ನು ಖರೀದಿಸುವುದನ್ನು ತಪ್ಪಿಸಿ.

ಒಣದ್ರಾಕ್ಷಿಗಳನ್ನು ಖರೀದಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ 
ಇತ್ತೀಚಿನ ದಿನಗಳಲ್ಲಿ, ಕೆಟ್ಟ ಒಣದ್ರಾಕ್ಷಿಗಳನ್ನು ಮಾರುಕಟ್ಟೆಯಲ್ಲಿ ಹೆಚ್ಚಾಗಿ ಮಾರಾಟ ಮಾಡಲಾಗುತ್ತಿದೆ. ಹಾಗಾಗಿ ನೀವು ಒಣದ್ರಾಕ್ಷಿಗಳನ್ನು ಖರೀದಿಸುವಾಗ, ಮೊದಲನೆಯದಾಗಿ, ಅದರ ಟೇಸ್ಟ್ ನ್ನು ನೀವು ಚೆಕ್ ಮಾಡಬೇಕು, ಏಕೆಂದರೆ ಅನೇಕ ಬಾರಿ ಅದನ್ನು ಸಿಹಿಯಾಗಿಸಲು ಸಕ್ಕರೆಗೆ ಸೇರಿಸಿ ನೀಡುತ್ತಾರೆ. ಇಂತಹ ಒಣದ್ರಾಕ್ಷಿ ಸೇವಿಸಬೇಡಿ. 

ಒಣದ್ರಾಕ್ಷಿ ಖರೀದಿಸುವ ಮುನ್ನ ಅದರ ಸ್ಮೆಲ್ ಚೆಕ್ ಮಾಡಿ ಮತ್ತು ಅದರಿಂದ ಗಂಧಕದಂತಹ ವಾಸನೆ ಹೊರಬರುತ್ತದೆಯೇ ಎಂದು ನೋಡಿ, ಕೆಟ್ಟ ಸ್ಮೆಲ್ ಬರುತ್ತಿದ್ದರೆ, ಅದು ನಕಲಿ ಎಂದು ಅರ್ಥಮಾಡಿಕೊಳ್ಳಿ. ಅನೇಕ ಬಾರಿ ಅದಕ್ಕೆ ಚಿನ್ನದ ಬಣ್ಣ ಸೇರಿಸಲಾಗುತ್ತದೆ, ಆದ್ದರಿಂದ ಅಂಗೈಯ ಮೇಲೆ ಕೆಲವು ಒಣದ್ರಾಕ್ಷಿಗಳಿಂದ ಉಜ್ಜಿ, ಸ್ವಲ್ಪ ಬಣ್ಣವು ಹೊರಬರುತ್ತಿದ್ದರೆ, ಅಂತಹ ದ್ರಾಕ್ಷಿ ಖರೀದಿಸುವುದನ್ನು ತಪ್ಪಿಸಿ.

Latest Videos

click me!