Gravy thickening tips: ತೆಳುವಾದ ಗ್ರೇವಿ ತಕ್ಷಣ ಗಟ್ಟಿಯಾಗಲು ಮತ್ತು ರುಚಿಕರವಾಗಲು ನೀವು ಕೆಲವು ಸರಳ ಅಡುಗೆ ಟೆಕ್ನಿಕ್ಸ್ ಪ್ರಯತ್ನಿಸಿ. ಈ ಲೇಖನದಲ್ಲಿ ತೆಳ್ಳನೆಯ ಗ್ರೇವಿಯನ್ನು ಬಹಳ ಸುಲಭವಾದ ರೀತಿಯಲ್ಲಿ ಗಟ್ಟಿಯಾಗುವಂತೆ ಮಾಡೋದು ಹೇಗೆಂದು ಹೇಳ್ತೇವೆ.
ಮನೆಯಲ್ಲಿ ನಾವು ಅಡುಗೆ ಮಾಡಿದಾಗ ಎಲ್ಲರೂ ಹೊಗಳುವರೇನೋ ಎಂದೇ ಯಾವಾಗಲೂ ನಿರೀಕ್ಷಿಸುತ್ತೇವೆ. ಆದರೆ ಕರಿ, ಗ್ರೇವಿ, ಸಾಂಬಾರ್ ಮಾಡಿದ್ದಾಗ ಮುಚ್ಚಳ ತೆರೆದ ತಕ್ಷಣ ತುಂಬಾ ತೆಳುವಾಗಿದ್ದರೆ ಏನ್ ಮಾಡ್ತೀರಾ?. ಚಿಂತಿಸುವ ಅಗತ್ಯವಿಲ್ಲ. ಇದು ನಮಗೆಲ್ಲರಿಗೂ ಒಂದಲ್ಲ ಒಂದು ಸಮಯದಲ್ಲಿ ಆಗೇ ಆಗುತ್ತದೆ. ಕೆಲವೊಮ್ಮೆ ನಾವು ಆಕಸ್ಮಿಕವಾಗಿ ಸ್ವಲ್ಪ ಹೆಚ್ಚು ನೀರು ಸೇರಿಸುತ್ತೇವೆ ಅಥವಾ ಮಸಾಲೆಗಳು ಸರಿಯಾಗಿ ಬೇಯುವುದಿಲ್ಲ.
26
ಗಟ್ಟಿಯಾಗುವಂತೆ ಮಾಡೋದು ಹೇಗೆ?
ಈ ಸಮಯದಲ್ಲಿ ನಿಮ್ಮ ತೆಳುವಾದ ಗ್ರೇವಿ ತಕ್ಷಣ ಗಟ್ಟಿಯಾಗಲು ಮತ್ತು ರುಚಿಕರವಾಗಲು ನೀವು ಕೆಲವು ಸರಳ ಅಡುಗೆ ಟೆಕ್ನಿಕ್ಸ್ ಪ್ರಯತ್ನಿಸಿ. ಈ ಲೇಖನದಲ್ಲಿ ತೆಳ್ಳನೆಯ ಗ್ರೇವಿಯನ್ನು ಬಹಳ ಸುಲಭವಾದ ರೀತಿಯಲ್ಲಿ ಗಟ್ಟಿಯಾಗುವಂತೆ ಮಾಡೋದು ಹೇಗೆಂದು ಹೇಳ್ತೇವೆ.
36
ನಿಧಾನವಾಗಿ ಬೇಯಲು ಬಿಡಿ
ಗ್ರೇವಿ ತೆಳುವಾಗಿದ್ದರೆ ಅದನ್ನು ನಿಧಾನವಾಗಿ ಕುದಿಯಲು ಬಿಡಿ. ಇದು ಅತ್ಯಂತ ನೈಸರ್ಗಿಕ ಮಾರ್ಗ. ಬೇರೆ ಯಾವುದನ್ನಾದರೂ ಸೇರಿಸುವ ಮೊದಲು ಉರಿಯನ್ನು ಸ್ವಲ್ಪ ಕಡಿಮೆ ಮಾಡಿ. ಕೆಲವೊಮ್ಮೆ ಗ್ರೇವಿ ಸರಿಯಾಗಿ ಬೇಯಿಸದ ಕಾರಣ ತೆಳುವಾಗಿ ಕಾಣುತ್ತದೆ. ಆಗ ಮುಚ್ಚಳವಿಲ್ಲದೆ ಕಡಿಮೆ ಅಥವಾ ಮಧ್ಯಮ ಉರಿಯಲ್ಲಿ ಬೇಯಿಸಿ. ಇದು ನೀರು ಆವಿಯಾಗಲು ಮತ್ತು ಗ್ರೇವಿ ತನ್ನ ರುಚಿಯನ್ನು ಬದಲಾಯಿಸದೆ ಗಟ್ಟಿಯಾಗಲು ಅನುವು ಮಾಡಿಕೊಡುತ್ತದೆ.
ಚೈನೀಸ್ ಶೈಲಿಯ ಗ್ರೇವಿಗಳು, ಮಂಚೂರಿಯನ್ ಭಕ್ಷ್ಯಗಳು ಮತ್ತು ಮೆಣಸಿನಕಾಯಿ ಹಾಕಿ ಮಾಡುವ ಭಕ್ಷ್ಯಗಳಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಒಂದು ಚಮಚ ಕಾರ್ನ್‌ಫ್ಲೋರ್ ಅನ್ನು ಎರಡು ಚಮಚ ನೀರಿನೊಂದಿಗೆ ಬೆರೆಸಿ ನಿಧಾನವಾಗಿ ಸೇರಿಸಿ. ಸುಮಾರು 1-2 ನಿಮಿಷ ಬೇಯಿಸಿ. ಗ್ರೇವಿ ಜಿಗುಟಾಗುವುದರಿಂದ ಇದನ್ನು ಅತಿಯಾಗಿ ಹಾಕದಂತೆ ಎಚ್ಚರವಹಿಸಿ.
56
ಈರುಳ್ಳಿ-ಟೊಮೆಟೊ ಪೇಸ್ಟ್ ಸೇರಿಸಿ
ಭಾರತೀಯ ಕರಿಗಳಿಗೆ ಈರುಳ್ಳಿ-ಟೊಮೆಟೊ ಪೇಸ್ಟ್ ಸೂಕ್ತವಾಗಿದೆ. ಇದನ್ನು ಮಾಡಲು ಈರುಳ್ಳಿ-ಟೊಮೆಟೊ ಪೇಸ್ಟ್ ಅನ್ನು ಎಣ್ಣೆಯಲ್ಲಿ ಹುರಿಯಿರಿ. ಎಣ್ಣೆ ಬೇರ್ಪಡುವವರೆಗೆ ಬೇಯಿಸಿ ನಂತರ ಅದನ್ನು ಗ್ರೇವಿಗೆ ಸೇರಿಸಿ. ಇದು ಗ್ರೇವಿಯನ್ನು ದಪ್ಪವಾಗಿಸುವುದಲ್ಲದೆ, ರುಚಿಯನ್ನು ಹೆಚ್ಚಿಸುತ್ತದೆ.
66
ಗೋಡಂಬಿ, ಬಾದಾಮಿ ಅಥವಾ ಕಡಲೆಕಾಯಿ ಪೇಸ್ಟ್ ಬಳಸಿ
ನೀವು ಮನೆಯಲ್ಲಿ ಪನೀರ್, ಕುರ್ಮಾ ಅಥವಾ ಇತರ ಶಾಹಿ ಭಕ್ಷ್ಯಗಳನ್ನು ತಯಾರಿಸುತ್ತಿದ್ದರೆ, ಇದು ಗ್ರೇವಿ ರಿಚ್ ಆಗಲು ಉತ್ತಮ ಆಯ್ಕೆಯಾಗಿದೆ. ಇವುಗಳನ್ನು ನೆನೆಸಿ ನಯವಾದ ಪೇಸ್ಟ್ ಮಾಡಿ. ಗ್ರೇವಿಗೆ 1-2 ಚಮಚ ಸೇರಿಸಿ ಚೆನ್ನಾಗಿ ಮಿಶ್ರಣವಾಗುವವರೆಗೆ ಕುದಿಸಿ. ಇದು ಗ್ರೇವಿಯನ್ನು ದಪ್ಪ, ಕೆನೆಭರಿತ ಮತ್ತು ರೆಸ್ಟೋರೆಂಟ್ ಸ್ಟೈಲಿಯಲ್ಲಿ ಬರುವಂತೆ ನೋಡಿಕೊಳ್ಳುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.