ಊಟ ಫ್ರೀ ಇದ್ದಾಗ ಹೊಟ್ಟೆ ತುಂಬಿದ್ದೇ ಗೊತ್ತಾಗೋದಿಲ್ಲ, ಎಷ್ಟೇ ತಿಂದ್ರೂ ಮತ್ತಷ್ಟು ಬೇಕೆನ್ನಿಸೋದೇಕೆ?

Published : Jan 19, 2026, 01:33 PM IST

ಬಫೆಯಲ್ಲಿ ಊಟ ಮಾಡ್ತಿರುವಾಗ ಇಲ್ಲ ಸಮಾರಂಭಗಳಲ್ಲಿ ಫ್ರೀಯಾಗಿ ಊಟ ಮಾಡ್ತಿರುವಾಗ ಹೊಟ್ಟೆ ತುಂಬಿದ್ದೇ ತಿಳಿಯೋದಿಲ್ಲ. ಒಂದಾದ್ಮೇಲೆ ಒಂದು ಆಹಾರ ಹೊಟ್ಟೆ ಸೇರ್ತಿರುತ್ತೆ. ಉಚಿತ ಅಂದಾಗ್ಲೇ ಹೀಗಾಗೋದು ಏಕೆ?

PREV
17
ಫ್ರೀ ಅಂದಾಗ ಹಸಿವಾಗೋದು ಹೆಚ್ಚು

ಫ್ರೀ ಎಂಬುದನ್ನು ಕೇಳ್ತಿದ್ದಂತೆ ಮನುಷ್ಯನ ಕಿವಿ ನೆಟ್ಟಗಾಗುತ್ತೆ. ಆಗಷ್ಟೇ ತಿಂದು ಬಂದಿದ್ರೂ ಊಟ ಉಚಿತ ಎಂದಾಗ ಹೊಟ್ಟೆ ಹಸಿಯೋಕೆ ಶುರುವಾಗುತ್ತೆ. ಬಫೆ ಇರ್ಲಿ ಇಲ್ಲ ಪ್ಲೇಟ್ ಮುಂದೆ ಕುಳಿತಿರ್ಲಿ, ಇಷ್ಟ ಇರ್ಲಿ ಬಿಡಲಿ ರುಚಿ ನೋಡೋ ನೆಪದಲ್ಲಿ ಪ್ಲೇಟ್ ತುಂಬಿಸಿಕೊಳ್ತೇವೆ. ಹಸಿವೇ ಇಲ್ಲ ಅಂದೋರು ಹೊಟ್ಟೆ ತುಂಬಿ ಹೊರ ಬರುವಷ್ಟು ಊಟ ಮಾಡ್ತೇವೆ. ಫ್ರೀಯಾಗಿ ಸಿಕ್ಕಾಗ ಅತಿಯಾಗಿ ತಿನ್ನೋದು ಬರೀ ಅಭ್ಯಾಸ ಅಲ್ಲ ಅದು ಮೆದುಳಿನ ಜೊತೆ ಸಂಬಂಧ ಹೊಂದಿದೆ.

27
ಮಾನಸಿಕ ಸ್ಥಿತಿ

ಇಲ್ಲಿ ಆಹಾರದ ರುಚಿ ಹಾಗೂ ಉಚಿತ ಎನ್ನುವ ಮಾನಸಿಕ ಸ್ಥಿತಿ ಎರಡೂ ಮಿಕ್ಸ್ ಆಗುತ್ತೆ. ಆಗ ನಮ್ಮ ಸೆನ್ಸ್ ಆಫ್ ಕಂಟ್ರೋಲ್ ಪ್ರಜ್ಞೆ ಕಳೆದುಕೊಳ್ಳುತ್ತದೆ. ವಾಸ್ತವವಾಗಿ ಹಸಿವಿನಿಂದ ನಾವು ಇಷ್ಟೊಂದು ಆಹಾರ ತಿನ್ನೋದಿಲ್ಲ. ನಮ್ಮ ಆರೋಗ್ಯ ಹಾಳಾಗ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗದೆ ಇರಲಿ, ಉಚಿತ ಊಟ ಎಂಬ ಸುವರ್ಣಾವಕಾಶವನ್ನು ಬಿಡಲು ಮನಸ್ಸಾಗುವುದಿಲ್ಲ.

37
ಸಾಮಾಜಿಕ ಕಾರಣ

ಇದಲ್ಲದೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳು ಹೆಚ್ಚಾಗಿ ಅತಿಯಾಗಿ ತಿನ್ನುವಲ್ಲಿ ಪಾತ್ರವಹಿಸುತ್ತವೆ. ಗುಂಪಿನಲ್ಲಿ ತಿನ್ನುವಾಗ, ಜನರು ಒಂಟಿಯಾಗಿ ತಿನ್ನುವುದಕ್ಕಿಂತ ಹೆಚ್ಚಾಗಿ ತಿನ್ನುತ್ತಾರೆ. ಏಕೆಂದರೆ ಸಾಮಾಜಿಕ ಸಂದರ್ಭದಲ್ಲಿ ತಿನ್ನುವ ಆನಂದ ಹೆಚ್ಚು ತಿನ್ನುವುದನ್ನು ಪ್ರೋತ್ಸಾಹಿಸುತ್ತದೆ.

47
ಮೆದುಳಿನ ಪ್ರೋತ್ಸಾಹ

ಮೆದುಳು ರುಚಿ, ಗಾತ್ರ ಮತ್ತು ವೈವಿಧ್ಯತೆಗೆ ಪ್ರತಿಕ್ರಿಯಿಸುತ್ತದೆ. ಸಿಹಿ, ಉಪ್ಪು ಅಥವಾ ತಾಜಾ ಊಟಗಳಂತಹ ರುಚಿಕರವಾದ, ಹೆಚ್ಚಿನ ಕ್ಯಾಲೋರಿ ಹೊಂದಿರುವ ಆಹಾರಗಳು ಮೆದುಳನ್ನು ಉತ್ತೇಜಿಸುತ್ತದೆ. ತಿನ್ನುವ ಬಯಕೆಯನ್ನು ಹೆಚ್ಚಿಸುತ್ತದೆ.

57
ಪ್ಲೇಟ್ ಸೈಜ್

ಅನೇಕ ಬಾರಿ ನಾವು ಅತಿಯಾಗಿ ತಿನ್ನಲು ಪ್ಲೇಟ್ ಸೈಜ್ ಕೂಡ ಕಾರಣವಾಗುತ್ತದೆ. ದೊಡ್ಡ ಪ್ಲೇಟ್ ಹಾಗೂ ನಾನಾ ಬಗೆಯ ತಿಂಡಿಗಳನ್ನು ನೋಡ್ತಿದ್ದಂತೆ ಮನಸ್ಸು ಎಲ್ಲವನ್ನೂ ತಿನ್ನಲು ಬಯಸುತ್ತದೆ. ಮೆದುಳು ಅದನ್ನು ಸಮಂಜಸವಾದ ಪ್ರಮಾಣ ಎಂದು ಗ್ರಹಿಸುತ್ತದೆ.

67
ಹಾರ್ಮೋನ್

ಆಹಾರ ಫ್ರೀ ಇದ್ದಾಗ ಜನರು ನನಗೆ ಇದು ಸಾಕು ಎಂಬ ಆಲೋಚನೆ ಮಾಡೋದಿಲ್ಲ. ಇದ್ರಿಂದ ಬಿಡುಗಡೆಯಾಗುವ ಹಾರ್ಮೋನ್ ಹಾಗೂ ಸ್ವಭಾವ ಹಸಿವಿಗಿಂತ ಹೆಚ್ಚು ತಿನ್ನಲು ಕಾರಣವಾಗುತ್ತದೆ. ಇದೇ ಕಾರಣಕ್ಕೆ ನಾವು ಬಫೆ ಅಥವಾ ಫ್ರೀ ತಿಂಡಿಗಳನ್ನು ನೋಡಿದಾಗ, ಹಸಿವಿಲ್ಲ ಎಂದ್ರೂ, ಮನೆಯಲ್ಲಿ ಪ್ರತಿ ದಿನ ಇಷ್ಟೊಂದು ಆಹಾರ ಸೇವನೆ ಮಾಡದವರು ಕೂಡ ತಟ್ಟೆ ತುಂಬಾ ಆಹಾರ ತುಂಬಿಸಿಕೊಳ್ತಾರೆ.

77
ಆರೋಗ್ಯಕ್ಕೆ ಅಪಾಯಕಾರಿ

ಉಚಿತ ಎನ್ನುವ ಕಾರಣಕ್ಕೆ ನೀವು ಅತಿಯಾಗಿ ಆಹಾರ ಸೇವನೆ ಮಾಡೋದ್ರಿಂದ ನಿಮ್ಮ ಆರೋಗ್ಯ ಹದಗೆಡುತ್ತದೆ. ಅತಿಯಾದ ಸೇವನೆ ತೂಕ ಹೆಚ್ಚಳ, ಸಕ್ಕರೆ ಮಟ್ಟ ಹೆಚ್ಚಳ ಮತ್ತು ಕೊಲೆಸ್ಟ್ರಾಲ್ ಏರಿಕೆಗೆ ಕಾರಣವಾಗುತ್ತದೆ. ದೀರ್ಘಾವಧಿಯಲ್ಲಿ ಚಯಾಪಚಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆಹಾರ ಉಚಿತವಾಗಿದ್ದಾಗ ಸಿಕ್ಕಿದ್ದೆಲ್ಲ ತಿನ್ನುವುದನ್ನು ಬಿಡಬೇಕು. ನಿಮಗೆ ಎಷ್ಟು ಹಸಿವಿದೆ, ಪೌಷ್ಠಿಕ ಆಹಾರ ಯಾವುದು ಎಲ್ಲವನ್ನೂ ಅರ್ಥ ಮಾಡಿಕೊಂಡು, ಆಹಾರದ ಗುಣಮಟ್ಟ ಮತ್ತು ಪ್ರಮಾಣಕ್ಕೆ ಗಮನ ಕೊಡಿ. ನೀವು ಯಾವ ಸಮಯದಲ್ಲಿ ಊಟ ಮಾಡುತ್ತಿದ್ದೀರಿ ಎಂಬುದನ್ನು ಕೂಡ ಇಲ್ಲಿ ಗಮನಿಸಬೇಕು. ಸರಿಯಾದ ಸಮಯಕ್ಕೆ ಅಗತ್ಯವಿರುವಷ್ಟು ಆಹಾರವನ್ನು ಮಾತ್ರ ಸೇವನೆ ಮಾಡಿದ್ರೆ ತಟ್ಟೆಯಲ್ಲಿರುವ ಆಹಾರ ಆನಂದ ನೀಡುವುದಲ್ಲದೆ ಆರೋಗ್ಯಕ್ಕೂ ಒಳ್ಳೆಯದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories