Food and Health: ಮನೆಯಲ್ಲಿ ರೆಫ್ರಿಜರೇಟರ್ ಇರುವುದರಿಂದ ಹೆಚ್ಚಾಗಿ ನಾವು ಅಡುಗೆ ಮಾಡಿ, ತಿಂದು ಉಳಿದ ಎಲ್ಲಾ ಆಹಾರವನ್ನು ಫ್ರಿಜ್ ನಲ್ಲಿಡುತ್ತೇವೆ. ಆದರೆ, ಕೆಲವೊಂದು ಆಹಾರಗಳನ್ನು ಫ್ರಿಜ್ ನಲ್ಲಿಟ್ಟು, ಮತ್ತೆ ಸೇವಿಸುವುದು ಸರಿಯಲ್ಲ. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.
ನಾವು ಮಾಡಿರುವ ಆಹಾರ ಉಳಿದರೆ ಅದನ್ನು ಫ್ರಿಜ್ ನಲ್ಲಿಟ್ಟು ಸೇವಿಸುವ ಮರುದಿನ ಸೇವಿಸುತ್ತೇವೆ. ಆದರೆ ಕೆಲವೊಂದು ಆಹಾರಗಳನ್ನು ಫ್ರಿಜ್ ನಲ್ಲಿಟ್ಟು ಮತ್ತೆ ತಿನ್ನುವ ತಪ್ಪನ್ನೂ ಎಂದಿಗೂ ಮಾಡಬಾರದು.
27
ಬೇಯಿಸಿದ ಅನ್ನ
ನೀವು ಎಂದಿಗೂ ಅನ್ನವನ್ನು ರೆಫ್ರಿಜರೇಟರ್‌ನಲ್ಲಿಟ್ಟು ನಂತರ ತಿನ್ನಬಾರದು. ಇದರಿಂದ ನಿಮ್ಮ ಆರೋಗ್ಯದ ಮೇಲೆ ತೀವ್ರ ಋಣಾತ್ಮಕ ಪರಿಣಾಮ ಬೀರಬಹುದು. ರೆಫ್ರಿಜರೇಟರ್‌ನಲ್ಲಿಟ್ಟ ಅನ್ನದಲ್ಲಿ ಹೆಚ್ಚಿನ ಪ್ರಮಾಣಾದಲ್ಲಿ ಬ್ಯಾಕ್ಟೀರಿಯಾಗಳು ಸಂಗ್ರಹವಾಗುತ್ತವೆ ಮತ್ತು ಅದನ್ನು ಮತ್ತೆ ಬಿಸಿ ಮಾಡುವುದರಿಂದ ಬ್ಯಾಕ್ಟೀರಿಯಾ ನಿವಾರಣೆ ಆಗುವುದಿಲ್ಲ. ಹಾಗಾಗಿ ಸಾಧ್ಯವಾದಷ್ಟು ಅನ್ನವನ್ನು ಬಿಸಿ ಇರುವಾಗಲೇ ಸೇವಿಸಿ.
37
ಬೇಯಿಸಿದ ಮೊಟ್ಟೆಗಳು
ನೀವು ಯಾವುದೇ ಕಾರಣಕ್ಕೂ ಬೇಯಿಸಿದ ಮೊಟ್ಟೆಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಾರದು. ಬೇಯಿಸಿದ ಮೊಟ್ಟೆಗಳನ್ನು ನಂತರ ತಿನ್ನಲು ಫ್ರಿಜ್ ನಲ್ಲಿ ಇಡುವ ಅಭ್ಯಾಸವಿದ್ದರೆ, ಆ ಅಭ್ಯಾಸ ಬಿಡಿ. ಅದರಿಂದ ಆರೋಗ್ಯಕ್ಕೆ ಹಾನಿ ಖಚಿತಾ. ಇದಲ್ಲದೆ, ಸರಿಯಾಗಿ ಸಂಗ್ರಹಿಸದಿದ್ದರೆ, ಬ್ಯಾಕ್ಟೀರಿಯಾ ಉಂಟಾಗಬಹುದು. ಇದರಿಂದ ಫುಡ್ ಪಾಯ್ಸನ್ ಆಗುವ ಸಾಧ್ಯತೆ ಕೂಡ ಇದೆ. ಬೇಯಿಸಿದ ಮೊಟ್ಟೆಗಳು ಇನ್ನೂ ಬಿಸಿಯಾಗಿರುವಾಗಲೇ ಸೇವಿಸಿ.
ನೀವು ಬೇಯಿಸಿದ ತರಕಾರಿಗಳು ಮತ್ತು ಬೇಳೆಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಾರದು. 2-3 ದಿನಗಳಿಗಿಂತ ಹೆಚ್ಚು ಕಾಲ ಇಟ್ಟರೆ, ಅವುಗಳಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ; ಇದಲ್ಲದೆ, ಅವುಗಳನ್ನು ಪದೇ ಪದೇ ಬಿಸಿ ಮಾಡಿ ಸೇವಿಸುವುದರಿಂದ ಅವುಗಳ ಎಲ್ಲಾ ಪೌಷ್ಟಿಕಾಂಶದ ಮೌಲ್ಯಗಳು ನಾಶವಾಗುತ್ತವೆ. ಜೊತೆಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. 48 ಗಂಟೆಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಲಾದ ಬೇಯಿಸಿದ ಆಹಾರವನ್ನು ತಿನ್ನುವುದನ್ನು ತಪ್ಪಿಸಿ.
57
ಸಮುದ್ರಾಹಾರ
ನೀವು ಸಮುದ್ರಾಹಾರವನ್ನು ರೆಫ್ರಿಜರೇಟರ್‌ನಲ್ಲಿ ಎಂದಿಗೂ ಸಂಗ್ರಹಿಸಬಾರದು. ಯಾಕಂದ್ರೆ ಫ್ರಿಜ್ ನಲ್ಲಿಟ್ಟ ಸೀ ಫುಡ್ ಕೆಲವು ಸಂದರ್ಭಗಳಲ್ಲಿ ವಿಷವಾಗಿ ಪರಿವರ್ತನೆಯಾಗಬಹುದು. ಸರಿಯಾದ ತಾಪಮಾನದಲ್ಲಿ ಸಂಗ್ರಹಿಸದಿದ್ದರೆ, ಹಾನಿಕಾರಕ ಬ್ಯಾಕ್ಟೀರಿಯಾಗಳು ಸಮುದ್ರಾಹಾರದಲ್ಲಿ ವೇಗವಾಗಿ ಬೆಳೆಯುತ್ತದೆ. ರೆಫ್ರಿಜರೇಟರ್‌ನಲ್ಲಿ ಇರಿಸಿದ ಸಮುದ್ರಾಹಾರವನ್ನು ಪದೇ ಪದೇ ಬಿಸಿ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಕಯಾಗಬಹುದು; ನೀವು ಮೀನು ಮತ್ತು ಸೀಗಡಿಗಳಂತಹ ಆಹಾರಗಳನ್ನು ಸಾಧ್ಯವಾದಷ್ಟು ಬೇಗ ಸೇವಿಸಿ.
67
ಕತ್ತರಿಸಿದ ಹಣ್ಣು
ನೀವು ಕತ್ತರಿಸಿದ ಹಣ್ಣನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಾರದು. ನಂತರ ಅದನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಹುದು. ಕತ್ತರಿಸಿದ ಹಣ್ಣು ಬೇಗನೆ ಹಾಳಾಗುತ್ತದೆ ಮತ್ತು ಪೌಷ್ಟಿಕಾಂಶದ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಸಾಧ್ಯವಾದಷ್ಟು ಫ್ರೆಶ್ ಹಣ್ಣುಗಳನ್ನು ಸೇವಿಸಿ. ಹಣ್ಣುಗಳನ್ನು ಕತ್ತರಿಸಿ, ಫ್ರಿಜ್ ನಲ್ಲಿಟ್ಟರೆ ಅವುಗಳಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಇದೆ. ಕತ್ತರಿಸಿದ ಹಣ್ಣನ್ನು 24 ಗಂಟೆಗಳ ಒಳಗೆ ಸೇವಿಸಬೇಕು. ಇಲ್ಲದಿದ್ದರೆ, ತೀವ್ರ ಹೊಟ್ಟೆ ನೋವನ್ನು ಉಂಟುಮಾಡಬಹುದು.
77
ಸಾಸ್‌ಗಳು ಮತ್ತು ಚಟ್ನಿಗಳು
ನೀವು ಟೊಮೆಟೊ ಸಾಸ್ ಅಥವಾ ಹಸಿರು ಚಟ್ನಿಯನ್ನು ರೆಫ್ರಿಜರೇಟರ್‌ನಲ್ಲಿ ದೀರ್ಘಕಾಲದವರೆಗೆ ಸಂಗ್ರಹಿಸಬಾರದು. ದೀರ್ಘಕಾಲದವರೆಗೆ ಅವುಗಳನ್ನು ಸಂಗ್ರಹಿಸಿ ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಅಷ್ಟೇ ಅಲ್ಲ, ಬರಿಗಣ್ಣಿಗೆ ಕಾಣಬಹುದಾದ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳು ಸಹ ಅವುಗಳಲ್ಲಿ ಬೆಳೆಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.