ಕುಕ್ಕರ್‌ನಲ್ಲಿ ಬೇಳೆ ಬೇಯಿಸುವಾಗ ನೊರೆ ಬರೋದ್ಯಾಕೆ..ಇದನ್ನು ಅಡುಗೆಗೆ ಬಳಸ್ಬೋದಾ?

Published : Jul 02, 2023, 01:11 PM ISTUpdated : Jul 02, 2023, 01:14 PM IST

ಬೇಳೆ ಸಾರು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮಾಡುತ್ತಾರೆ. ಆದರೆ ಬೇಳೆ ಸೇರಿಸಿ ಅಡುಗೆ ಮಾಡುವಾಗ ಮಹಿಳೆಯರು ಎದುರಿಸೋ ಮಖ್ಯ ಸಮಸ್ಯೆಯೆಂದರೆ ಬೇಳೆ ಉಕ್ಕಿ ಹೊರ ಬಂದು ಬಿಡುತ್ತದೆ. ಹೀಗಾದಂತೆ ಏನು ಮಾಡಬೇಕು.

PREV
16
ಕುಕ್ಕರ್‌ನಲ್ಲಿ ಬೇಳೆ ಬೇಯಿಸುವಾಗ ನೊರೆ ಬರೋದ್ಯಾಕೆ..ಇದನ್ನು ಅಡುಗೆಗೆ ಬಳಸ್ಬೋದಾ?

ಅಡುಗೆ ಮಾಡುವುದು ಒಂದು ಕಲೆ. ಅದನ್ನು ಸರಿಯಾಗಿ ಮಾಡದಿದ್ದರೆ ಅಡುಗೆ ಅವಾಂತರವಾಗಬಹುದು. ಅಡುಗೆ ಮನೆ ಕಸದ ತೊಟ್ಟಿಯಂತೆ ಆಗಿಬಿಡಬಹುದು. ಹೀಗಾಗದಿರಲು ಅಡುಗೆ ಮಾಡೋ ಮುನ್ನ ಕೆಲವು ವಿಷ್ಯಗಳನ್ನು ತಿಳಿದುಕೊಂಡಿರಬೇಕು. 

26

ಅಡುಗೆ ಮನೆಯಲ್ಲಿ ಬೇಳೆ ಒಂದಲ್ಲಾ ಒಂದು ವಿಧದಲ್ಲಿ ಉಪಯೋಗಿಸಲ್ಪಡುತ್ತದೆ. ಆದರೆ ಹೀಗೆ ಬೇಳೆ ಸೇರಿಸಿ ಅಡುಗೆ ಮಾಡುವಾಗ ತೊಂದರೆಯಾಗುವುದೇ ಹೆಚ್ಚು. ಒಮ್ಮೊಮ್ಮೆ ಬೇಳೆ ಸರಿಯಾಗಿ ಬೇಯುವುದಿಲ್ಲ. ಇನ್ನು ಕೆಲವೊಮ್ಮೆ ಕುಕ್ಕರ್‌ನಿಂದ ಬೇಳೆ ಹೊರಗೆ ಬರುವುದು ಆಗುತ್ತದೆ.

36

ಹೀಗಾಗಿ ಬೇಳೆ ಸೇರಿಸಿ ಅಡುಗೆ ಮಾಡುವುದು ಎಂದರೆ ಬಹುತೇಕ ಮಹಿಳೆಯರಿಗೆ ತಲೆನೋವು. ಹಾಗಿದ್ದರೆ, ಬೇಳೆ ಬೇಯಿಸುವಾಗ ಕುಕ್ಕರ್‌ನಿಂದ ಉಕ್ಕುಕ್ಕಿ ಹೊರಬರುತ್ತದೆ, ಕುಕ್ಕರ್‌ನಿಂದ ನೊರೆ ಬರುತ್ತದೆ.

46

ಹಾಗೆ ಬೇಳೆಗಳನ್ನು ಬೇಯಿಸುವಾಗ ಅದರ ಮೇಲ್ಬಾಗದಲ್ಲಿ ನೊರೆ ಉತ್ಪತ್ತಿಯಾದರೆ ಅದನ್ನು ನಾವು ತಿನ್ನಬಹುದಾ? ಅದನ್ನು ತಿಂದರೆ ಏನಾಗುತ್ತದೆ? ಅಷ್ಟಕ್ಕೂ ಅದು ಅದು ಬಳಕೆಗೆ ಯೋಗ್ಯವೇ? 

56

ಬೇಳೆಗಳಲ್ಲಿ ಕಂಡುಬರುವ ನೊರೆ ಹಾನಿಕರ ಎನ್ನುತ್ತಾರೆ ತಜ್ಞರು. ಏಕೆಂದರೆ ಗ್ಲೈಕೋಸೈಡ್‌ಗಳ ನೈಸರ್ಗಿಕ ರಚನೆಯು ಹಾನಿಗೊಳಗಾಗುತ್ತದೆ. ಇಂಥ ಆಹಾರಗಳನ್ನು ಸೇವಿಸುವುದು ಹಾನಿಕಾರಕವಾಗಬಹುದು. 

66

ಆದ್ದರಿಂದ, ಅವುಗಳನ್ನು ಸೇವಿಸುವ ಮೊದಲು ಮೇಲ್ಮೈಯಿಂದ ನೊರೆಯನ್ನು ತೆಗೆದುಹಾಕುವಂತೆ ತಜ್ಞರು ಸಲಹೆ ನೀಡುತ್ತಾರೆ. ಬೇಳೆಗಳನ್ನು ತೆರೆದ ಪಾತ್ರೆಯಲ್ಲಿ ಬೇಯಿಸಬೇಕು. ಇದರಿಂದ ಬೇಳೆ ಕುದಿಯುವಾಗ ಬರುವ ನೊರೆ ಅಂಶವನ್ನು ಸೌಟಿನ ಸಹಾಯದಿಂದ ಸುಲಭವಾಗಿ ತೆಗೆದು ಹಾಕಬಹುದು.

click me!

Recommended Stories