ಅಪ್ಪಿತಪ್ಪಿ ಈ ತಪ್ಪು ಮಾಡಿದ್ರೆ ಬಲಿಕೊಟ್ಟ ಮಾಂಸ ತಕ್ಷಣ ಹಾಳಾಗುತ್ತೆ

Published : May 28, 2026, 06:37 PM IST

ಕೆಲ ಹಬ್ಬದ ಟೈಂನಲ್ಲಿ ಪ್ರಾಣಿ ಬಲಿ ಸಾಮಾನ್ಯ. ಹಬ್ಬ, ದೇವರು, ಭೂತದ ಹೆಸರಿನಲ್ಲಿ ಬಲಿ ನೀಡಿದ ಪ್ರಾಣಿಗಳನ್ನು ಜನರು ಪ್ರಸಾದದ ಹೆಸರಿನಲ್ಲಿ ತಿಂತಾರೆ. ಆದ್ರೆ ಇಲ್ಲಿ ಮಾಂಸ ನಿರ್ವಹಣೆ ದೊಡ್ಡ ಸಮಸ್ಯೆಯಾಗುತ್ತದೆ. ಆತುರದಲ್ಲಿ ಜನರು ಮಾಡುವ ತಪ್ಪುಗಳು ಮಾಂಸ ಗಂಟೆಯೊಳಗೆ ಹಾಳಾಗಲು ಕಾರಣವಾಗುತ್ತದೆ. 

PREV
15
ಮಾಂಸ ಸಂಗ್ರಹ

ಮಾಂಸವನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸೋದು ಮುಖ್ಯ. ಸೂಕ್ತ ವಿಧಾನದಲ್ಲಿ ಮಾಂಸವನ್ನು ಸಂಗ್ರಹಿಸಿ, ಸರಿಯಾದ ವಿಧಾನದಲ್ಲಿ ಅಡುಗೆ ಮಾಡದೆ ಹೋದ್ರೆ ಮಾಂಸದಲ್ಲಿ ಬ್ಯಾಕ್ಟೀರಿಯಾ ವೇಗವಾಗಿ ಬೆಳೆಯಲು ಶುರುವಾಗುತ್ತದೆ. ಇದು ಜನರ ಆರೋಗ್ಯ ಹಾಳು ಮಾಡಿ, ನಾನಾ ರೋಗಕ್ಕೆ ದಾರಿಯಾಗುತ್ತದೆ.

25
ಬಲಿ ತಕ್ಷಣ ಮಾಂಸ ಬೇಯಿಸ್ಬೇಡಿ

ಪ್ರಾಣಿಗಳನ್ನು ಬಲಿ ನೀಡಿದ ತಕ್ಷಣ ಮಾಂಸವನ್ನು ಬೇಯಿಸುವುದು ದೊಡ್ಡ ತಪ್ಪುಗಳಲ್ಲಿ ಒಂದು. ಪ್ರಾಣಿ ವಧೆ ನಂತ್ರ ಮಾಂಸವು ಸ್ವಲ್ಪ ಸಮಯದವರೆಗೆ ಗಟ್ಟಿಯಾಗಿರುತ್ತದೆ. ಈ ಸಮಯದಲ್ಲಿ ಅದನ್ನು ಬೇಯಿಸುವುದು ಕೆಟ್ಟ ರುಚಿ ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ತಜ್ಞರ ಪ್ರಕಾರ, ಮಾಂಸವನ್ನು ಕೆಲವು ಗಂಟೆಗಳ ಕಾಲ ಹಾಗೆ ಬಿಡ್ಬೇಕು. ತಂಪಾದ, ಗಾಳಿ ಇರುವ ಸ್ಥಳದಲ್ಲಿ ಸಂಗ್ರಹಿಸುವುದು ಉತ್ತಮ.

35
ಹೇಗೆ ಸಂಗ್ರಹಿಸಬೇಕು?

ಮಾಂಸವನ್ನು ತಕ್ಷಣ ಬಳಕೆ ಮಾಡ್ಬಾರದು ಎಂಬ ಕಾರಣಕ್ಕೆ ಅನೇಕರು ಅದನ್ನು ತಪ್ಪಾಗಿ ಸಂಗ್ರಹಿಸ್ತಾರೆ. ಪ್ಲಾಸ್ಟಿಕ್ ಚೀಲಗಳಲ್ಲಿ ಅದನ್ನು ತುಂಬಿಡ್ತಾರೆ. ಪ್ಯಾಕ್ ಮಾಡುತ್ತಾರೆ. ಮಾಂಸ ಬೇಗನೆ ಹಾಳಾಗಲು ಇದು ದೊಡ್ಡ ಕಾರಣವಾಗಿದೆ. ಮುಚ್ಚಿದ ಪ್ಲಾಸ್ಟಿಕ್ ಚೀಲಗಳಲ್ಲಿ ತೇವಾಂಶ ಸಂಗ್ರಹವಾಗುತ್ತದೆ. ಇದರಿಂದ ಬ್ಯಾಕ್ಟೀರಿಯಾ ಬೆಳೆಯುತ್ತದೆ. ಇದು ಮಾಂಸ ವಾಸನೆ ಮತ್ತು ಕೊಳೆಯುವಿಕೆಗೆ ಕಾರಣವಾಗುತ್ತದೆ. ತಜ್ಞರು ಮೊದಲು ಮಾಂಸವನ್ನು ತೆರೆದ ಗಾಳಿಯಲ್ಲಿ ತಣ್ಣಗಾಗಲು ಬಿಡಲು ಶಿಫಾರಸು ಮಾಡುತ್ತಾರೆ. ಮಾಂಸದ ಶಾಖ ನಿಧಾನವಾಗಿ ತಣ್ಣಗಾದ್ಮೇಲೆ ಅದನ್ನು ಟ್ರೇ ಅಥವಾ ದೊಡ್ಡ ಪಾತ್ರೆಯಲ್ಲಿ ಹರಡಿ. ಮಾಂಸವು ಕೋಣೆಯ ಉಷ್ಣಾಂಶವನ್ನು ತಲುಪಿದ ನಂತರವೇ ಅದನ್ನು ರೆಫ್ರಿಜರೇಟರ್ ಅಥವಾ ಫ್ರೀಜರ್ನಲ್ಲಿ ಇಡಬೇಕು.

45
ಫ್ರೀಜರ್ ನಲ್ಲಿಡುವಾಗ ಈ ತಪ್ಪು ಮಾಡಬೇಡಿ

ಫ್ರೀಜರ್ನಲ್ಲಿ ಮಾಂಸ ಇಡುವಾಗ್ಲೂ ಕೆಲ ಎಚ್ಚರಿಕೆ ತೆಗೆದುಕೊಳ್ಳಬೇಕು. ತುಂಬಾ ತೆಳುವಾದ ಪ್ಲಾಸ್ಟಿಕ್ ಅಥವಾ ಅನುಚಿತ ಪ್ಯಾಕಿಂಗ್ ವಸ್ತುವನ್ನು ಬಳಸುವುದರಿಂದ ಮಾಂಸದ ಮೇಲೆ ಬೂದು ಕಲೆಗಳು ಉಂಟಾಗಬಹುದು. ಇದನ್ನು ಫ್ರೀಜರ್ ಬರ್ನ್ ಎಂದು ಕರೆಯಲಾಗುತ್ತದೆ. ಇದು ಮಾಂಸವನ್ನು ಒಣಗಿಸಬಹುದು ಮತ್ತು ಅದರ ರುಚಿಯನ್ನು ಹಾಳುಮಾಡಬಹುದು. ಆದ್ದರಿಂದ, ಯಾವಾಗಲೂ ಉತ್ತಮ ಗುಣಮಟ್ಟದ, ಗಾಳಿಯಾಡದ ಪಾತ್ರೆ ಅಥವಾ ಗಟ್ಟಿಮುಟ್ಟಾದ ಫ್ರೀಜರ್ ಬ್ಯಾಗ್ ಅನ್ನು ಬಳಸಿ. ಫ್ರೀಜರ್ನಿಂದ ಹೆಪ್ಪುಗಟ್ಟಿದ ಮಾಂಸವನ್ನು ಪದೇ ಪದೇ ತೆಗೆದು ನಂತರ ಅದನ್ನು ಮತ್ತೆ ಫ್ರೀಜ್ ಮಾಡಬೇಡಿ. ಮಾಂಸವು ಸಂಪೂರ್ಣವಾಗಿ ಕರಗಿದ ನಂತರ ಅದನ್ನು ಮತ್ತೆ ಫ್ರೀಜ್ ಮಾಡಬಾರದು.

55
ಮಾಂಸವನ್ನು ಹೀಗೆ ಬೇಯಿಸಿ

ಸರಿಯಾದ ರೀತಿಯಲ್ಲಿ ಮಾಂಸ ಬೇಯಿಸುವುದು ಮುಖ್ಯ. ಇಲ್ಲ ಅಂದ್ರೆ ಮಾಂಸದ ರುಚಿ ಹಾಳಾಗುತ್ತದೆ. ತರಕಾರಿಗಳನ್ನು ಕತ್ತರಿಸುವ ಪ್ಲೇಟ್ ನಲ್ಲಿಯೇ ಮಾಂಸವನ್ನು ಕತ್ತರಿಸಬಾರದು. ಇದ್ರಿಂದ ಮಾಂಸ ಹಾಳಾಗುತ್ತದೆ. ಬಾರ್ಬೆಕ್ಯೂ ಮಾಡುವಾಗ, ಮಾಂಸವನ್ನು ಹೆಚ್ಚಿನ ಉರಿ ಹತ್ತಿರ ಇಡಬಾರದು. ಮಾಂಸ ಅತಿಯಾಗಿ ಸುಟ್ಟರೆ ಆರೋಗ್ಯ ಹಾಳಾಗುತ್ತದೆ. ಆಹಾರದ ರುಚಿ ಕೂಡ ಕೆಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories