Bidadi Thatte Idli: ಬಾಯಲ್ಲಿಟ್ಟರೆ ಕರಗುವ ಬಿಡದಿ ತಟ್ಟೆ ಮಾಡೋದು ಹೇಗೆ? ಆ ಪದಾರ್ಥ ಹಾಕಿದ್ರೆ ಮುಗೀತು!

Published : May 27, 2026, 05:07 PM IST

Bidadi thatte idli recipe ingredients: ಇಡ್ಲಿ ಎಂದಕೂಡಲೇ ಅನೇಕರಿಗೆ ಬಿಡದಿ ತಟ್ಟೆ ಇಡ್ಲಿ ನೆನಪಾಗುವುದು. ಇಷ್ಟು ರುಚಿಯಾದ ತಟ್ಟೆ ಇಡ್ಲಿ ಮಾಡುವುದು ಹೇಗೆ? ಇದನ್ನು ಹೇಗೆ ಮಾಡಬೇಕು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

PREV
13
ಬಿಡದಿ ತಟ್ಟೆ ಮಾಡಲು ಬೇಕಾಗಿರುವ ಮುಖ್ಯ ಸಾಮಗ್ರಿಗಳಿವು

3 ಕಪ್ ಇಡ್ಲಿ ಅಕ್ಕಿ

1 ಕಪ್ ಉದ್ದಿನ ಬೇಳೆ,

1 ಕಪ್ ಗಟ್ಟಿ ಅವಲಕ್ಕಿ

ಮುಕ್ಕಾಲು ಕಪ್ ಸಾಬುದಾನ.

1 ಚಮಚ ಮೆಂತ್ಯ ಕಾಳು

ರುಚಿಗೆ ತಕ್ಕಷ್ಟು ಉಪ್ಪು

ಎಣ್ಣೆ ಅಥವಾ ತುಪ್ಪ

23
ಚೆನ್ನಾಗಿ ನೆನೆಸಿ, ರುಬ್ಬಿಕೊಳ್ಳಿ

ಮೊದಲು ಒಂದು ಪಾತ್ರೆಯಲ್ಲಿ ಉದ್ದಿನ ಬೇಳೆ, ಮೆಂತ್ಯವನ್ನು ಹಾಗೂ ಇನ್ನೊಂದು ಪಾತ್ರೆಯಲ್ಲಿ ಅಕ್ಕಿ, ಸಾಬುದಾನವನ್ನು ನೀರು ಹಾಕಿ ನೆನೆಸಿಡಿ. ರುಬ್ಬುವ ಅರ್ಧ ಗಂಟೆ ಮುಂಚೆ ಅವಲಕ್ಕಿ ನೆನೆಸಿಡಿ.

ಉದ್ದಿನ ಬೇಳೆ, ಮೆಂತ್ಯವನ್ನು ನುಣ್ಣಗೆ ರುಬ್ಬಿಕೊಳ್ಳಿ. ಆಮೇಲೆ ಅಕ್ಕಿ ಸಾಬುದಾನ, ಅವಲಕ್ಕಿಯನ್ನು ತರಿತರಿಯಾಗಿ ರುಬ್ಬಿಕೊಳ್ಳಿ. ಎರಡನ್ನೂ ಒಂದೇ ಪಾತ್ರೆಗೆ ಹಾಕಿ, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ

33
8-10 ಗಂಟೆ ಆದ್ಮೇಲೆ ಇಡ್ಲಿ ಮಾಡಿ!

ಈ ಹಿಟ್ಟಿನ ಪಾತ್ರೆಗೆ ಮುಚ್ಚಳ ಮುಚ್ಚಿ, 8-10 ಗಂಟೆಗಳ ಕಾಲ ಬೆಚ್ಚಗಿನ ಜಾಗದಲ್ಲಿ ಇಡಿ. ಮರುದಿನ ಈ ಹಿಟ್ಟನ್ನು ಚೆನ್ನಾಗಿ ಕಲಿಸಿ. ಆಮೇಲೆ ಇಡ್ಲಿ ಸ್ಟ್ಯಾಂಡ್‌ಗೆ ಎಣ್ಣೆ ಹಾಕಿ ಇಡ್ಲಿ ಹಾಕಿರಿ.

ಇಡ್ಲಿ ಬೆಂದ ನಂತರ 2 ನಿಮಿಷ ಬಿಟ್ಟು ನಿಧಾನವಾಗಿ ತೆಗೆಯಿರಿ. ತಟ್ಟೆ ಇಡ್ಲಿಗೆ ಸಾಬುದಾನ ಹಾಕುವುದರಿಂದ ಇಡ್ಲಿ ತುಂಬು ಬೆಳ್ಳಗೆ, ಸ್ಪಾಂಜಿಯಾಗಿ ಬರುತ್ತದೆ. ಇದಕ್ಕೆ ಖಾರವಾದ ಚಟ್ನಿ ಇದ್ದರೆ ಮಾತ್ರ ತಿನ್ನಲು ಚೆನ್ನಾಗಿರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories