ಬ್ಲಡ್ ಶುಗರ್ ಲೆವೆಲ್‌ ಕಡಿಮೆ ಮಾಡ್ಕೊಳ್ಳೋಕೆ ಸಿಂಪಲ್ ಮನೆಮದ್ದು

First Published | Jul 8, 2023, 12:51 PM IST

ಮಧುಮೇಹ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾದುದು. ದೇಹದಲ್ಲಿ ಬ್ಲಡ್ ಶುಗರ್ ಹೆಚ್ಚಾದ್ರೆ ಹಲವು ಆರೋಗ್ಯ ಸಮಸ್ಯೆ ಕಾಡುತ್ತೆ. ಆದ್ರೆ ಬ್ಲಡ್ ಶುಗರ್ ಹೆಚ್ಚಾದಾಗ ಮನೆಯಲ್ಲೇ ಇದನ್ನು ಕಡಿಮೆ ಮಾಡ್ಕೊಳ್ಳೋದು ಹೇಗೆ?

ಹಾಗಲಕಾಯಿ ಜ್ಯೂಸ್
ಡಯಾಬಿಟಿಸ್ ಇರೋರು ಹಾಗಲಕಾಯಿ ಜ್ಯೂಸ್ ತಿನ್ನೋದು ತುಂಬಾ ಒಳ್ಳೇದು. ಇದು ಚಾರಟೀನ್‌, ಮೊಮೊರ್‌ಡಿಸೀನ್‌ನ್ನು ಹೊಂದಿದೆ. ಈ ಎರಡು ಸಂಯುಕ್ತಗಳು ಬ್ಲಡ್‌ ಶುಗರ್ ಲೆವೆಲ್‌ನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. ಹೀಗಾಗಿ ಡಯಾಬಿಟಿಸ್ ಇರೋರು ಇದನ್ನು ತಿಂದರೆ ಒಳ್ಳೆಯದು. 

ನೇರಳೆ ಹಣ್ಣು
ಜಾಮೂನ್‌ ಎಂದೇ ಕರೆಯಲ್ಪಡುವ ನೇರಳೆ ಹಣ್ಣು ಸೀಸನಲ್ ಫ್ರುಟ್‌ ಆಗಿದೆ. ಇದನ್ನು ಡಯಾಬಿಟಿಸ್ ಇರೋರು ತಿಂದರೆ ತುಂಬಾ ಒಳ್ಳೆಯದು. ಅದರಲ್ಲೂ ನೇರಳೆ ಹಣ್ಣಿನ ಬೀಜವನ್ನು ಪೌಡರ್ ಮಾಡಿ, ನೀರಿಗೆ ಸೇರಿಸಿ ಬರೀ ಹೊಟ್ಟೆಗೆ ತಿನ್ನುವುದು ಬ್ಲಡ್ ಶುಗರ್ ಲೆವೆಲ್‌ನ್ನು ಕಡಿಮೆ ಮಾಡುತ್ತದೆ.

Latest Videos


ಶುಂಠಿ  
ಶುಂಠಿ ಬ್ಲಡ್ ಶುಗರ್‌ ಲೆವೆಲ್‌ನ್ನು ಕಡಿಮೆ ಮಾಡುತ್ತದೆ. ಮತ್ತು ದೇಹದಲ್ಲಿ ಇನ್ಸುಲಿನ್‌ನ್ನು ಬ್ಯಾಲೆನ್ಸ್ ಮಾಡುತ್ತದೆ. ಹೀಗಾಗಿ ಪ್ರತಿದಿನ ಕುದಿಸಿದಿ ಜಿಂಜರ್ ವಾಟರ್‌ ಕುಡಿಯುವ ಅಭ್ಯಾಸ ಒಳ್ಳೆಯದು.

ಮೆಂತೆ
ಬ್ಲಡ್ ಶುಗರ್ ಲೆವೆಲ್‌ ಕಡಿಮೆ ಮಾಡುವಲ್ಲ ಮೆಂತೆ ಪರಿಣಾಮಕಾರಿಯಾಗಿದೆ. ಎರಡು ಟೇಬಲ್‌ ಸ್ಫೂನ್‌ ಮೆಂತೆಯನ್ನು ನೀರಿನಲ್ಲಿ ರಾತ್ರಿಯಿಡೀ ನೆನೆಸಿ. ಬೆಳಗ್ಗೆ ಬರೀ ಹೊಟ್ಟೆಯಲ್ಲಿ ಮೆಂತೆ ನೆನೆಸಿದ ಈ ನೀರನ್ನು ಕುಡಿಯಬೇಕು. 

ಪ್ರಾಣಾಯಾಮ
ಪ್ರಾಣಾಯಾಮ ಅಥವಾ ಡೀಪ್‌ ಬ್ರೀತಿಂಗ್ ಬ್ಲಡ್‌ ಶುಗರ್‌ ಲೆವೆಲ್ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಾಣಾಯಾಮ ದೇಹದ ಸ್ಟ್ರೆಸ್‌ನ್ನು ಕಡಿಮೆ ಮಾಡುತ್ತದೆ. ಇದು ಸುಲಭವಾಗಿ ಡಯಾಬಿಟಿಸ್ ಕಂಟ್ರೋಲ್ ಮಾಡಲು ನೆರವಾಗುತ್ತದೆ.
 

ಕರಿಬೇವಿನ ಎಲೆ
ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರಿಬೇವಿನ ಎಲೆಯನ್ನು ಸೇರಿಸಬೇಕು. ಇದು ನ್ಯಾಚುರಲ್ ಆಂಟಿ ಆಕ್ಸಿಡೆಂಟ್‌ ಆಗಿದೆ. ಇದು ಹೈ ಬ್ಲಡ್ ಶುಗರ್‌ನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

ನೆಲ್ಲಿಕಾಯಿ ಜ್ಯೂಸ್‌
ಡಯಾಬಿಟಿಸ್ ಇರೋರು ನೆಲ್ಲಿಕಾಯಿ ಜ್ಯೂಸ್ ತಿನ್ನುವುದು ಬೆಸ್ಟ್‌. ಯಾಕೆಂದರೆ ಇದು ಪರಿಣಾಮಕಾರಿ ಆಂಟಿ ಆಕ್ಸಿಡೆಂಟ್‌ನ್ನು ಹೊಂದಿದೆ. ಇದು ಬ್ಲಡ್‌ ಶುಗರ್‌ನ್ನು ಕಡಿಮೆ ಮಾಡಲು ಅತ್ಯುತ್ತಮ ಮನೆಮದ್ದು ಆಗಿದೆ.
 

click me!