ಸಕ್ಕರೆಯಿಂದ ತಯಾರಿಸಿದ ಸಿಹಿ ತಿಂಡಿಗಳನ್ನು ಆಗಾಗ ತಿನ್ನಬೇಕು ಎಂದೆನಿಸುವುದು ಸಾಮಾನ್ಯ ವಿಚಾರ. ಆದರೆ, ಹೀಗೆ ಪ್ರತಿನಿತ್ಯ ಸಕ್ಕರೆಯ ಸೇವನೆ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ. ಮಾತ್ರವಲ್ಲ ಮಧುಮೇಹಿ ಗಳಿಗಂತೂ ಇದು ತುಂಬಾ ಹಾನಿಕಾರಕ. ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಉಲ್ಬಣವು ಮಧುಮೇಹ ರೋಗಿಯ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಆದರೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರೋ ಸ್ವೀಟ್‌ಗಳನ್ನು ತಿನ್ನಬಹುದು
ಗ್ಲೈಸೆಮಿಕ್ ಸೂಚ್ಯಂಕವು ಸಂಖ್ಯೆಯ ಮಾಪಕವಾಗಿದ್ದು, ಕೆಲವು ಕಾರ್ಬೋಹೈಡ್ರೇಟ್‌ಗಳು ದೇಹದಿಂದ ಗ್ಲೂಕೋಸ್ ಆಗಿ ಎಷ್ಟು ವೇಗವಾಗಿ ಪರಿವರ್ತನೆಗೊಳ್ಳುತ್ತವೆ ಎಂಬುದನ್ನು ಮೌಲ್ಯಮಾಪನ ಮಾಡಲು ಬಳಸಲಾಗುತ್ತದೆ. ಇದು ಬಹಳ ಮುಖ್ಯ ಏಕೆಂದರೆ ಮಧುಮೇಹಿಗಳು ಕಾರ್ಬೋಹೈಡ್ರೇಟ್ ಸೇವನೆಯನ್ನು ನಿಯಂತ್ರಿಸುವ ಪ್ರಾಮುಖ್ಯತೆಯನ್ನು ತಿಳಿದಿರುವಾಗ, ವಿಭಿನ್ನ ಆಹಾರಗಳಲ್ಲಿನ ಕಾರ್ಬೋಹೈಡ್ರೇಟ್‌ಗಳು ದೇಹದಿಂದ ವಿಭಿನ್ನ ವೇಗದಲ್ಲಿ ಹೀರಲ್ಪಡುತ್ತವೆ. ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ, ರಕ್ತದಲ್ಲಿನ ಸಕ್ಕರೆಯ ಮಟ್ಟಗಳ ಮೇಲೆ ಆಹಾರದ ಪರಿಣಾಮವು ಕಡಿಮೆಯಾಗುತ್ತದೆ.
ಚನ್ನಾ ದಾಲ್ ಬರ್ಫಿ
ಚನ್ನಾ ದಾಲ್ ಬರ್ಫಿ, ಭಾರತೀಯ ಸಾಂಪ್ರದಾಯಿಕ ಸಿಹಿತಿಂಡಿಯಾಗಿದೆ. ಮಸೂರವನ್ನು ಬಳಿಸಿ ಇದನ್ನು ಮಾಡುತ್ತದೆ. ಈ ಸಿಹಿತಿಂಡಿಯಲ್ಲಿರುವ ಹೈ ಫೈಬರ್ ಕಂಟೆಂಟ್ ಬ್ಲಡ್ ಶುಗರ್ ಲೆವಲ್‌ನ್ನು ನಿಯಂತ್ರಿಸಲು ನೆರವಾಗುತ್ತದೆ. ಹೀಗಾಗಿ ಡಯಾಬಿಟಿಸ್ ಇರುವವರು ಇದನ್ನು ಹಿಂಜರಿಕೆಯಿಲ್ಲದೆ ತಿನ್ನಬಹುದು.
ಸೋರೆಕಾಯಿ ಹಲ್ವಾ
ಸೋರೆಕಾಯಿ ಹಲ್ವಾ ಅಥವಾ ಬಾಟಲ್ ಗಾರ್ಡ್ ಹಲ್ವಾ ಎಂದು ಕರೆಯಲ್ಪಡುವ ಈ ಸಿಹಿತಿಂಡಿಯನ್ನು ಸೋರೆಕಾಯಿಯಿಂದ ಮಾಡಲಾಗುತ್ತದೆ. ಹಾಲು, ಏಲಕ್ಕಿ, ನ್ಯಾಚುರಲ್ ಸಿಹಿ ಪದಾರ್ಥಗಳನ್ನು ಸೇರಿಸಿ ಇದನ್ನು ಸಿದ್ಧಪಡಿಸುತ್ತಾರೆ. ಈ ಸಿಹಿತಿಂಡಿಯಲ್ಲಿ ಕ್ಯಾಲೊರಿ ಮತ್ತು ಗ್ಲೈಸೆಮಿಕ್ ಸೂಚ್ಯಂಕವು ಕಡಿಮೆಯಿದೆ.
ತೆಂಗಿನಕಾಯಿ ಲಡ್ಡು
ತುರಿದ ತೆಂಗಿನಕಾಯಿಯಿಂದ ಮಾಡಿದ ಕೊಕೊನೆಟ್ ಲಡ್ಡು ಭಾರತೀಯ ಪ್ರಸಿದ್ಧ ಸಿಹಿತಿನಿಸಾಗಿದೆ. ಬೆಲ್ಲ, ಏಲಕ್ಕಿಯನ್ನು ಹಾಕಿ ಇದನ್ನು ಸಿದ್ಧಪಡಿಸುತ್ತಾರೆ. ಬಾಯಿಗೆ ರುಚಿಕರವಾಗಿರುವ ಈ ಲಡ್ಡು ಹೆಲ್ದೀ ಫ್ಯಾಟ್ ಮತ್ತು ಮತ್ತು ಗ್ಲೈಸೆಮಿಕ್ ಸೂಚ್ಯಂಕವನ್ನು ಒಳಗೊಂಡಿರುತ್ತದೆ.
ರಾಗಿ ಹಲ್ವಾ
ರಾಗಿಯಿಂದ ಮಾಡಿರುವ ಹಲ್ವಾ ತುಂಬಾನೇ ರುಚಿಕರ. ಕಡಿಮೆ ಇನ್‌ಗ್ರೀಡಿಯೆಂಟ್ ಬಳಸಿ ಇದನ್ನು ಮಾಡಬಹುದು. ಹೆಚ್ಚ ಫೈಬರ್, ಕಾರ್ಬೋಹೈಡ್ರೇಟ್ಸ್ ಒಳಗೊಂಡಿರುವ ಈ ಸ್ವೀಟ್, ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದೆ.
ಡ್ರೈ ಫ್ರೂಟ್ ಬರ್ಫಿ
ಒಣಹಣ್ಣುಗಳು, ಬೀಜಗಳನ್ನು ಸೇರಿಸಿ ಮಾಡಿರೋ ಡ್ರೈ ಫ್ರೂಟ್ ಬರ್ಫಿ, ಆರೋಗ್ಯಕರ ಸಿಹಿತಿಂಡಿಗಳಲ್ಲಿ ಒಂದಾಗಿದೆ. ಇದು ದೇಹಕ್ಕೆ ಅಗತ್ಯವಾದ ನ್ಯೂಟ್ರಿಯೆಂಟ್‌ಗಳನ್ನು ಒದಗಿಸುತ್ತದೆ. ಸಕ್ಕರೆಯನ್ನು ಸೇರಿಸದೇ ತಯಾರಿಸಿದರೆ ಇದು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುತ್ತದೆ.
Note: ನೀವು ಡಯಾಬಿಟಿಸ್ ಪೇಷೆಂಟ್ ಆಗಿದ್ದಲ್ಲಿ ಯಾವುದೇ ಸ್ವೀಟ್ಸ್ ತಿನ್ನುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು.