ಅಡುಗೆ ಮನೆಯಲ್ಲಿಟ್ಟ ಎಣ್ಣೆಗೂ ಎಕ್ಸ್ಪೈರಿ ಡೇಟ್ ಇದೆ, ಎಷ್ಟು ದಿನ ಬಳಸೋದು ಸುರಕ್ಷಿತ?

Published : Jul 20, 2026, 06:12 PM IST

ಅಂಗಡಿಯಿಂದ ಅಡುಗೆ ಎಣ್ಣೆ ತಂದು ನಾವು ಬಳಸೋಕೆ ಶುರು ಮಾಡ್ತೇವೆ. ಅಡುಗೆ ಎಣ್ಣೆ ಖಾಲಿ ಆಗೋವರೆಗೂ ಅದನ್ನು ಬಳಸ್ತೇವೆ. ಆದ್ರೆ ಇದಕ್ಕೂ ಒಂದು ಜೀವಿತಾವಧಿ, ಕೆಲ ಸಮಯದ ನಂತ್ರ ಇದು ಬಳಕೆಗೆ ಯೋಗ್ಯ ಅಲ್ಲ ಎಂಬುದು ನಿಮಗೆ ಗೊತ್ತಾ?

PREV
14
ಎಣ್ಣೆ ಕೆಡೋದು ಯಾವಾಗ?

ಹಾಲು, ಬ್ರೆಡ್ ನಂತೆ ಮೂರ್ನಾಲ್ಕು ದಿನಕ್ಕೆ ಎಣ್ಣೆ ಹಾಳಾಗೋದಿಲ್ಲ. ಹಾಗಂತ ತುಂಬಾ ದಿನ ಅದನ್ನು ಬಳಸೋಕೆ ಸಾಧ್ಯವಿಲ್ಲ. ಅದಕ್ಕೆ ಸಿಗೋ ಗಾಳಿ, ಬೆಳಕು ಮತ್ತು ಶಾಖದಿಂದ ಅದು ಆಕ್ಸಿಡೇಶನ್ ಪ್ರಕ್ರಿಯೆಗೆ ಒಳಗಾಗುತ್ತದೆ. ಹಳೆ ಎಣ್ಣೆಯನ್ನು ನೀವು ಬಳಸಿದ್ರೆ ತಕ್ಷಣ ಅದ್ರ ಪರಿಣಾಮ ನಿಮಗೆ ಕಾಣೋದಿಲ್ಲ. ನಿಮ್ಮ ಆರೋಗ್ಯದಲ್ಲಿ ಯಾವುದೇ ಏರುಪೇರು ಕಾಣಿಸೋದಿಲ್ಲ. ಆದ್ರೆ ದೀರ್ಘಕಾಲ ಈ ಹಳೆ ಎಣ್ಣೆಯನ್ನು ನೀವು ಸೇವಿಸ್ತಾ ಬಂದಂತೆ ಆರೋಗ್ಯದ ಹದಗೆಡಲು ಶುರುವಾಗುತ್ತದೆ. ಫ್ರೀ ರ್ಯಾಡಿಕಲ್ಸ್ ಆರೋಗ್ಯವನ್ನು ಹಾಳು ಮಾಡುತ್ತದೆ.

24
ಯಾವ ಎಣ್ಣೆ ಎಷ್ಟು ಸುರಕ್ಷಿತ ?

ಬೇರೆ ಬೇರೆ ಎಣ್ಣೆಯ ಜೀವಿತಾವಧಿ ಭಿನ್ನವಾಗಿರುತ್ತದೆ. ರಿಫೈನ್ಡ್ ವೆಜಿಟೆಬಲ್ ಅಥವಾ ಕ್ಯಾನೋಲಾ ಎಣ್ಣೆಯ ಮುಚ್ಚಳವನ್ನು ನೀವು ತೆರೆಯದಿದ್ದರೆ ನೀವು ಅದನ್ನು 1 ರಿಂದ 2 ವರ್ಷದವರೆಗೆ ಬಳಸಬಹುದು. ತೆರೆದ ನಂತರ 6 ರಿಂದ 12 ತಿಂಗಳಲ್ಲಿ ಅದನ್ನು ಖಾಲಿ ಮಾಡ್ಬೇಕು. ಎಕ್ಸ್ಟ್ರಾ ವರ್ಜಿನ್ ಆಲಿವ್ ಎಣ್ಣೆ ಪ್ಯಾಕ್ನಲ್ಲಿ ಸುಮಾರು 24 ತಿಂಗಳು ಸುರಕ್ಷಿತವಾಗಿರುತ್ತದೆ. ತೆರೆದ ಬಳಿಕ 3 ರಿಂದ 6 ತಿಂಗಳು ಅದರ ಜೀವಿತಾವಧಿ. ಇನ್ನು ತೆಂಗಿನ ಎಣ್ಣೆಯನ್ನು ಸುಮಾರು 2 ವರ್ಷ ಬಳಸಬಹುದು. ಎಳ್ಳಿನ ಎಣ್ಣೆ ಮುಚ್ಚಳು ತೆರೆದ ನಂತ್ರ 6 ತಿಂಗಳು ಬಳಸಬಹುದು. ಫ್ಲ್ಯಾಕ್ಸ್ಸೀಡ್ ಎಣ್ಣೆ ತೆರೆಯದ ಪ್ಯಾಕ್ ಆಗಿದ್ದರೆ 6 ರಿಂದ 8 ತಿಂಗಳು ಬಳಸಬಹುದು. ತೆರೆದ ನಂತರ ಫ್ರಿಜ್ನಲ್ಲಿ ಇಡುವುದು ಉತ್ತಮ. ಅವೋಕಾಡೊ ಎಣ್ಣೆ ತೆರೆದ ಬಳಿಕ ಸುಮಾರು 6 ತಿಂಗಳು ಇಡಬಹುದು.

34
ಎಣ್ಣೆ ಹಾಳಾಗಿದ್ದನ್ನು ಹೀಗೆ ಗುರುತಿಸಿ

ಮೊದಲು ಅದರ ವಾಸನೆಯನ್ನು ಪರೀಕ್ಷಿಸಿ. ಹುಳಿ ಅಥವಾ ವಿಚಿತ್ರ ವಾಸನೆ ಬಂದರೆ ಅದು ಹಾಳಾಗಿರಬಹುದು. ರುಚಿ ಕಹಿ, ಹುಳಿ ಅಥವಾ ಸೋಪ್ನಂತಿದ್ದರೆ ಬಳಸಬೇಡಿ. ಎಣ್ಣೆಯ ಬಣ್ಣ ಬದಲಾಗುವುದು, ಕೆಳಭಾಗದಲ್ಲಿ ಕಣಗಳು ಸೇರುವುದು ಅಥವಾ ಸಾಮಾನ್ಯಕ್ಕಿಂತ ಹೆಚ್ಚು ದಪ್ಪವಾಗುವುದು ಕೂಡ ಎಚ್ಚರಿಕೆಯ ಸಂಕೇತ.

44
ಖರೀದಿ ವೇಳೆ ಹೀಗೆ ಮಾಡಿ

ಎಣ್ಣೆ ಖರೀದಿಸುವಾಗ Best Before ಅಥವಾ Use By ದಿನಾಂಕವನ್ನು ತಪ್ಪದೇ ಪರಿಶೀಲಿಸಿ. ಬಾಟಲಿ ಓಪನ್‌ ಮಾಡಿದ ದಿನಾಂಕವನ್ನು ನೀವು ನೆನಪಿಟ್ಟುಕೊಂಡೆ ನಂತ್ರ ಸರಿಯಾದ ಸಮಯದವರೆಗೆ ಎಣ್ಣೆಯನ್ನು ಬಳಸಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories