ಹಸಿ ಹಾಲು, ಮೊಟ್ಟೆ ಆರೋಗ್ಯಕ್ಕೆ ಬಹಳ ಒಳ್ಳೇದು ಅಂತಾರಲ್ಲ? ಹೌದಾ?

First Published | Jan 14, 2024, 7:00 AM IST

ಹಾಲಿನೊಂದಿಗೆ ಹಸಿ ಮೊಟ್ಟೆ ತಿನ್ನೋದ್ರಿಂದ ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದೋ ಎನ್ನುವ ಬಗ್ಗೆ ಹಲವರಿಗೆ ಸಂಶಯ ಇದ್ದೇ ಇರುತ್ತೆ… ನಿಮಗೂ ಆ ಸಂಶಯ ಇದ್ರೆ, ನಿಮ್ಮ ಡೌಟ್ ನಿವಾರಣೆ ಮಾಡಲೆಂದೇ ಈ ಲೇಖನ. 
 

ಹಾಲು ಮತ್ತು ಮೊಟ್ಟೆಗಳು (egg and milk) ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಜೀವಸತ್ವಗಳು ಸೇರಿ ಪೋಷಕಾಂಶಗಳಿಂದಲೇ ತುಂಬಿರೋ ಎರಡು ಶಕ್ತಿಯುತ ಆಹಾರಗಳಾಗಿವೆ. ದೇಹದ ಬೆಳವಣಿಗೆ ಮತ್ತು ಮೂಳೆಗಳು ಸ್ಟ್ರಾಂಗ್ ಆಗಿರಲು ಈ ಎರಡೂ ಆಹಾರಗಳು ಅವಶ್ಯಕ. ಹಾಲು ಮತ್ತು ಮೊಟ್ಟೆಯನ್ನು ಒಟ್ಟಿಗೆ ತಿನ್ನಬಹುದು. ಬೇಯಿಸಿದ ಮೊಟ್ಟೆಗಳನ್ನು ಹಾಲಿನೊಂದಿಗೆ ಸಹ ತಿನ್ನಬಹುದು, ಹಾಲನ್ನು ಮೊಟ್ಟೆಯಿಂದ ಮಾಡಿದ ಆಮ್ಲೆಟ್ ನೊಂದಿಗೆ ಸಹ ತಿನ್ನಬಹುದು. ಆದರೆ ಹಸಿ ಮೊಟ್ಟೆಯನ್ನು ಹಾಲಿನ ಜೊತೆ ತಿನ್ನಬಹುದೇ? 

ನಿಮಗೂ ಹಸಿ ಮೊಟ್ಟೆಯ (raw egg) ಜೊತೆ ಹಾಲು ಸೇವಿಸೋದು ಸರಿಯೋ ತಪ್ಪೋ ಎನ್ನುವ ಬಗ್ಗೆ ಕುತೂಹಲ ಇದೆಯೇ? ಹಾಗಿದ್ರೆ ಕೇಳಿ ಹಸಿ ಮೊಟ್ಟೆ ಜೊತೆ ಹಾಲು ಸೇವಿಸಲೇಬಾರದು. ಏಕೆಂದರೆ ಇದು ಹೊಟ್ಟೆ ಉಬ್ಬರ, ಅಸ್ವಸ್ಥತೆ ಮತ್ತು ಹೊಟ್ಟೆ ನೋವಿಗೆ ಕಾರಣವಾಗಬಹುದು.
 

Tap to resize

ಹಾಲು ಮತ್ತು ಮೊಟ್ಟೆ ಎರಡು ಶಕ್ತಿಯುತ ಆಹಾರಗಳಾಗಿವೆ, ಅವು ಪ್ರೋಟೀನ್, ಕ್ಯಾಲ್ಸಿಯಂ (calcium) ಮತ್ತು ಜೀವಸತ್ವಗಳು ಸೇರಿದಂತೆ ಎಲ್ಲಾ ಅಗತ್ಯ ಪೋಷಕಾಂಶಗಳ ಭಂಡಾರ. ಈ ಎರಡೂ ವಸ್ತುಗಳನ್ನು ಪ್ರತಿದಿನ ಸೇವಿಸಲು ವೈದ್ಯರು ಶಿಫಾರಸು ಮಾಡುತ್ತಾರೆ. ದೇಹದ ಬೆಳವಣಿಗೆ ಮತ್ತು ಮೂಳೆಗಳ ಬಲಕ್ಕೆ ಎರಡೂ ಅವಶ್ಯಕ. ಆದರೆ ಈ ಹಸಿ ಹಾಲು ಮತ್ತು ಮೊಟ್ಟೆ ಎರಡನ್ನೂ ಒಟ್ಟಿಗೆ ಸೇವಿಸಬಹುದೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
 

ನೀವು ಹಸಿ ಮೊಟ್ಟೆಗಳನ್ನು ಹಾಲಿನೊಂದಿಗೆ ಸೇವಿಸಲೇ ಬಾರದು ಎಂದು ವೈದ್ಯರು ಸಲಹೆ ನೀಡ್ತಾರೆ. ಇದು ನಿಮ್ಮ ಆರೋಗ್ಯಕ್ಕೆ ಗಂಭೀರ (health effect) ಹಾನಿಯನ್ನುಂಟು ಮಾಡುತ್ತದೆ. ಮೊಟ್ಟೆಯನ್ನು ಹಸಿಯಾಗಿ ತಿನ್ನೋದ್ರಿಂದ ಏನೆಲ್ಲಾ ಸಮಸ್ಯೆಗಳು ಕಾಡುತ್ತವೆ ಅನ್ನೋದನ್ನು ತಿಳಿಯೋಣ. 

ಹಸಿ ಮೊಟ್ಟೆಗಳನ್ನು ತಿನ್ನುವುದು ಈ ಸಮಸ್ಯೆಗಳಿಗೆ ಕಾರಣವಾಗಬಹುದು
ಹಸಿ ಮೊಟ್ಟೆಗಳು ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾವನ್ನು (bacteria) ಹೊಂದಿರುತ್ತವೆ ಮತ್ತು ಇದನ್ನು ಹಾಲಿನ ಜೊತೆ ಸೇವಿಸಿದಾಗ ಈ ಬ್ಯಾಕ್ಟೀರಿಯಾವು ಹಾಲಿನಾದ್ಯಂತ ಹರಡುತ್ತದೆ, ಇದು  ಹೊಟ್ಟೆ ಉಬ್ಬರ, ವಾಂತಿ, ವಾಕರಿಕೆಗೆ ಕಾರಣವಾಗುತ್ತದೆ. ಇದು ಮಾತ್ರವಲ್ಲ, ಇದು ಹೊಟ್ಟೆ ನೋವು ಮತ್ತು ಹೊಟ್ಟೆಯ ಅಸ್ವಸ್ಥತೆಗೆ ಕಾರಣವಾಗಬಹುದು.

ಎರಡು ಪ್ರೋಟೀನ್ ಒಟ್ಟಿಗೆ ತಿನ್ನುವುದರ ಅನಾನುಕೂಲಗಳು
ಒಂದೇ ಸಮಯದಲ್ಲಿ ಎರಡು ರೀತಿಯ ಪ್ರೋಟೀನ್ ಸೇವಿಸುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಹೊಟ್ಟೆ  ಉಬ್ಬರ, ಚಡಪಡಿಕೆ, ಹೊಟ್ಟೆ ನೋವು ಮತ್ತು ಅತಿಸಾರಕ್ಕೆ ಕಾರಣವಾಗಬಹುದು. ಆದರೆ ಹಸಿ ಮೊಟ್ಟೆ ಮತ್ತು ಹಾಲನ್ನು ಬೇರೆ ಬೇರೆ ಆಹಾರ ತಯಾರಿಸೋದಕ್ಕೆ ಬಳಕೆ ಮಾಡಬಹುದು. 
 

ಕೊಲೆಸ್ಟ್ರಾಲ್ ಉಂಟಾಗುವ ಅಪಾಯ ಕೂಡ ಹೆಚ್ಚುತ್ತೆ
ಮಸಲ್ ಬಿಲ್ಡ್ (Muscle Build) ಮಾಡಲು ಮತ್ತು ಪ್ರೋಟೀನ್ ಸೇವನೆ ಹೆಚ್ಚಿಸಲು ಬಾಡಿಬಿಲ್ಡರ್‌ಗಳು ಹಾಲಿನಲ್ಲಿ ನಾಲ್ಕರಿಂದ ಐದು ಕಚ್ಚಾ ಮೊಟ್ಟೆಗಳನ್ನು ಬೆರೆಸಿ ತಿನ್ನೋದನ್ನು ನೀವು ನೋಡಿರಬಹುದು. ಆದರೆ ಮೊಟ್ಟೆಗಳಲ್ಲಿ ಕೊಲೆಸ್ಟ್ರಾಲ್ ಸಮೃದ್ಧವಾಗಿರುವುದರಿಂದ ಮತ್ತು ಹೃದಯರಕ್ತನಾಳದ ಸಮಸ್ಯೆಗಳಿಗೆ ಇದು ಕಾರಣವಾಗುವುದರಿಂದ ಈ ಕಾಂಬಿನೇಶನ್ ಆರೋಗ್ಯಕ್ಕೆ ತುಂಬಾನೆ ಹಾನಿಕಾರಕ.

 ಬೇಯಿಸಿದ ಮೊಟ್ಟೆಗಳನ್ನು ಹಾಲಿನೊಂದಿಗೆ ತಿನ್ನುವುದರ ಪ್ರಯೋಜನಗಳು
ಬೇಯಿಸಿದ ಮೊಟ್ಟೆಯನ್ನು (boiled egg) ಹಾಲಿನ ಜೊತೆ ತಿಂದ್ರೆ ಅದರಿಂದ ಅನೇಕ ಪ್ರಯೋಜನಗಳು ಸಿಗುತ್ತೆ. ಮೊಟ್ಟೆಗಳು ಅಮೈನೋ ಆಮ್ಲಗಳಿಂದ ಸಮೃದ್ಧ ಮತ್ತು ಸಾಕಷ್ಟು ಆರೋಗ್ಯಕರ ಕೊಬ್ಬುಗಳನ್ನು ಸಹ ಹೊಂದಿರುತ್ತವೆ. ಮತ್ತೊಂದೆಡೆ, ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಅಧಿಕವಾಗಿದೆ, ಇವೆರಡೂ ದೇಹದ ಆರೋಗ್ಯಕ್ಕೆ ಮುಖ್ಯ. ಮೊಟ್ಟೆ ಮತ್ತು ಹಾಲಿನಲ್ಲಿ ಪ್ರೋಟೀನ್, ಉಪ್ಪು, ಫೋಲೇಟ್, ಸೆಲೆನಿಯಂ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇವೆರಡನ್ನು ಸೇವಿಸುವ ಮೂಲಕ ಮುಂಜಾನೆ ಆರಂಭಿಸಿದರೆ, ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಸಿಗುತ್ತೆ. 

Latest Videos

click me!