ಕುದುರೆ ಹಾಲು ಮಾರಿ ಮಿಲಿಯೇನರ್ ಆದ ಬ್ರಿಟಿಷ್ ರೈತ!
First Published | Mar 15, 2021, 5:01 PM ISTಹಾಲು ಸೂಪರ್ ಫುಡ್ ಎಂದು ಪರಿಗಣಿಸಲಾಗುತ್ತದೆ. ಹಾಲಿನ ಸೇವನೆಯಿಂದ ಅನೇಕ ಲಾಭಗಳಿವೆ. ಮೂಳೆಗಳು ಬಲಗೊಳ್ಳುತ್ತವೆ. ಇದಲ್ಲದೆ, ಇತರ ಅನೇಕ ಪೌಷ್ಠಿಕಾಂಶಗಳು ಹಾಲಿನಲ್ಲಿವೆ. ಈ ಕಾರಣಕ್ಕಾಗಿ, ಮಕ್ಕಳಿಂದ ವೃದ್ಧರವರೆಗೆ, ಹಾಲನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು. ಹಸು ಮತ್ತು ಎಮ್ಮೆಯಲ್ಲದೇ, ಆಡುಗಳ ಹಾಲನ್ನು ಕೂಡ ಭಾರತದಲ್ಲಿ ಬಳಸಲಾಗುತ್ತದೆ. ಆದರೆ ನಿಮಗೆ ಗೊತ್ತಾ? ಕುದುರೆ ಹಾಲಿನ ಬಗ್ಗೆ? ಸದ್ಯಕ್ಕೆ ಇದು ಪ್ರಪಂಚದ ಅತಿ ದುಬಾರಿ ಹಾಲು. ಒಂದು ಲೀಟರ್ ಕುದುರೆ ಹಾಲು ಎರಡೂವರೆ ಸಾವಿರ ರೂಪಾಯಿಗಳಿಗಿಂತ ಹೆಚ್ಚು ದುಬಾರಿ. ಇದನ್ನು ಮಾರುವ ಮೂಲಕ ಯುಕೆಯಲ್ಲಿ ಒಬ್ಬ ರೈತ ಕೋಟ್ಯಾಧಿಪತಿಯಾಗಿದ್ದಾನೆ. ಹೌದು, ಈ ವ್ಯಕ್ತಿಯು ಕುದುರೆ ಹಾಲನ್ನು ಮಾರುವ ಮೂಲಕ ತನ್ನ ದೊಡ್ಡ ಬ್ಯುಸಿನೆಸ್ ಸ್ಥಾಪಿಸಿದ್ದಾನೆ.