ಪ್ರತಿ ವರ್ಷ ರೆಫ್ರಿಜರೇಟರ್ ಬಾಗಿಲಿನ ರಬ್ಬರ್ ಸೀಲ್ ಬದಲಿಸಿರೆಫ್ರಿಜರೇಟರ್ ಬಾಗಿಲಿನಲ್ಲಿರುವ ರಬ್ಬರ್ ಸೀಲ್ ಅನ್ನು ಸಾಮಾನ್ಯವಾಗಿ ಗ್ಯಾಸ್ಕೆಟ್ ಎಂದು ಕರೆಯಲಾಗುತ್ತದೆ. 12 ತಿಂಗಳ ಒಳಗೆ ಒಮ್ಮೆ ಇದನ್ನು ಪರಿಶೀಲಿಸಬೇಕು. ಅದು ಎಲ್ಲೋ ಸಡಿಲವಾಗಿದ್ದರೆ, ತಕ್ಷಣ ಅದನ್ನು ಬದಲಾಯಿಸಿ.ಹಾಗೆ ಮಾಡದಿದ್ದರೆ ಫ್ರಿಡ್ಜ್ ತಣ್ಣಗಾಗುವುದಿಲ್ಲ ಮತ್ತು ಕಂಪ್ರೆಸರ್ ಮೇಲೆ ಲೋಡ್ ಆಗುತ್ತದೆ. ಬಾಗಿಲಿನಿಂದ ಗ್ಯಾಸ್ಕೆಟ್ ಅನ್ನು ತೆಗೆದು ಹಾಕಲು ರಬ್ಬರ್ ಸೀಲ್ ಅನ್ನು ಹೊರಗೆ ಎಳೆಯಿರಿ.
ಸ್ಕ್ರೂ ಡ್ರೈವರ್ನೊಂದಿಗೆ ಮೆಟಲ್ ರಿಟೇನರ್ ಅನ್ನು ಸಡಿಲಗೊಳಿಸಬೇಕು. ಗ್ಯಾಸ್ಕೆಟ್ ತೆಗೆದು ಹೊಸ ಹಾಕಿ ಮತ್ತು ಸ್ಕ್ರೂ ಬಿಗಿಗೊಳಿಸಿ.ಪ್ರತಿ 6 ತಿಂಗಳಿಗೊಮ್ಮೆ ಕಂಡೆನ್ಸರ್ ಕಾಯಿಲ್ಗಳು ಮತ್ತು ಫ್ಯಾನ್ಸ್ವಚ್ಛಗೊಳಿಸಿ.
ಕಂಡೆನ್ಸರ್ ಕಾಯಿಲ್‌ಗಳನ್ನು ವರ್ಷಕ್ಕೆರಡು ಬಾರಿ ಫ್ರಿಡ್ಜ್‌ನ ಹಿಂಭಾಗದಲ್ಲಿ ಸ್ವಚ್ಛಗೊಳಿಸುವುದರಿಂದ ಫ್ರಿಡ್ಜ್‌ನ 70 ಪ್ರತಿಶತ ತೊಂದರೆಗಳು ಕಡಿಮೆಯಾಗಬಹುದು. ಕಾಯಿಲ್‌ಗಳು ಮತ್ತು ಫ್ಯಾನ್‌ಗಳಲ್ಲಿ ಧೂಳು ಸಂಗ್ರಹವಾಗಿರುವುದರಿಂದ, ಕಂಡೆನ್ಸರ್ ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ, ಇದರಿಂದ ರೆಫ್ರಿಜರೇಟರ್ ಅನ್ನು ತಂಪಾಗಿಸಲು ಕಷ್ಟವಾಗುತ್ತದೆ. ಬ್ರಷ್ ಅಥವಾ ವ್ಯಾಕ್ಯೂಮ್ ಸಹಾಯದಿಂದ ಇದನ್ನು ಸ್ವಚ್ಛಗೊಳಿಸಬಹುದು.
ಫ್ರೀಜರ್ ವೆಂಟ್‌ಗಳನ್ನು ನಿರಂತರವಾಗಿ ಸ್ವಚ್ಛಗೊಳಿಸಿಫ್ರೀಜರ್ನ ವೆಂಟ್‌ಗಳಲ್ಲಿ ಬ್ಲಾಕ್ ಆದಾಗ ಫ್ರೀಜರ್‌ನಲ್ಲಿ ತಂಪಾಗುವ ಸಮಸ್ಯೆ ಇರಬಹುದು. ಇದನ್ನು ತಪ್ಪಿಸಲು, ವೆಂಟಿಲೇಟರ್‌ಗಳನ್ನು ನಿರಂತರವಾಗಿ ಸ್ವಚ್ಛಗೊಳಿಸಿ, ಇದರಿಂದ ಫ್ರೀಜರ್ ಅನ್ನು ವೆಂಟಿಲೇಷನ್ ಮಾಡಲಾಗುತ್ತದೆ ಮತ್ತು ವಿದ್ಯುತ್ ಉಳಿತಾಯವಾಗುತ್ತದೆ.
ರೆಫ್ರಿಜರೇಟರ್ ನ ಉಷ್ಣತೆಯನ್ನು ನಿರಂತರವಾಗಿ ಪರೀಕ್ಷಿಸುತ್ತಲೇ ಇರಿ, ಅದನ್ನು ತುಂಬಾ ಕಡಿಮೆ ಇಡಬೇಡಿ.ರೆಫ್ರಿಜರೇಟರ್ ತಾಪಮಾನ ನಿಯಂತ್ರಣ ಸೆಟ್ಟಿಂಗ್‌ಗಳನ್ನು ನಿರಂತರವಾಗಿ ಪರೀಕ್ಷಿಸಬೇಕು, ಇದರಿಂದ ರೆಫ್ರಿಜರೇಟರ್ ಹೆಚ್ಚು ಲೋಡ್ ಆಗುವುದಿಲ್ಲ. ಯಾವಾಗಲೂ 38 ರಿಂದ 42 ಡಿಗ್ರಿ ಫ್ಯಾರನ್ ಹೀಟ್ ತಾಪಮಾನ ಸೆಟ್ಟಿಂಗ್‌ಗಳನ್ನು ಇರಿಸಿ. ಫ್ರೀಜರ್ ಉಷ್ಣತೆ0 ರಿಂದ 10 ಡಿಗ್ರಿ ಫ್ಯಾರನ್ ಹೀಟ್ ನಡುವೆ ಇರಿಸಿ. ಇದು ನಿಮ್ಮ ಫ್ರಿಜ್ ಬಾಳಿಕೆ ಬರುವಂತೆಕಾಪಾಡುತ್ತದೆ.
ಪ್ರತಿ ತಿಂಗಳು ಫ್ರಿಡ್ಜ್ ಅನ್ನು ಡಿಫ್ರಾಸ್ಟ್ ಮಾಡಿಹೊಸ ತಂತ್ರಜ್ಞಾನದ ರೆಫ್ರಿಜರೇಟರ್ ಸ್ವಯಂಚಾಲಿತ ಡಿಫ್ರಾಸ್ಟಿಂಗ್ ಅನ್ನು ಹೊಂದಿದೆ, ಆದರೆ ಹಳೆಯ ರೆಫ್ರಿಜರೇಟರ್ ಅನ್ನು ಆಗಾಗ ನಾವೇ ಡಿಫ್ರಾಸ್ಟ್ಟಿಂಗ್ ಮಾಡಬೇಕು. ಹೀಗೆ ಮಾಡುವುದರಿಂದ ಫ್ರಿಜ್ ಕಡಿಮೆ ಕರೆಂಟ್ ತಿನ್ನಬಹುದು.
ಫ್ರಿಡ್ಜ್ ಆಫ್ ಮಾಡಿ ಮತ್ತು ಪ್ಲಗ್ ಅನ್ನು ತೆಗೆದುಹಾಕಿ. ಪೂರ್ತಿ ಫ್ರಿಡ್ಜ್ ಅನ್ನು ಖಾಲಿ ಮಾಡಿ ಮತ್ತು ಎಲ್ಲಾ ರಾಕ್‌ಗಳನ್ನು ತೆಗೆದುಹಾಕಿ.ಫ್ರಿಜ್ ಅನ್ನು ಎಂಟು ಗಂಟೆಗಳ ಕಾಲ ತೆರೆದಿಡಿ. ಹೇರ್ ಡ್ರೈಯರ್ ಸಹಾಯದಿಂದ ಹೆಪ್ಪುಗಟ್ಟಿದ ಮಂಜುಗಡ್ಡೆಯನ್ನು ಕರಗಿಸಿ
ರೆಫ್ರಿಜರೇಟರ್‌ನಲ್ಲಿ ವಸ್ತುಗಳನ್ನು ನೀಟಾಗಿಡಿತರಕಾರಿ ಮತ್ತು ಆಹಾರವನ್ನು ಗಾಳಿಯಾಡದ ಡಬ್ಬದಲ್ಲಿ ತುಂಬಿಸಿ, ಇದರಿಂದ ಅವು ಸುಲಭವಾಗಿ ಸಿಗುತ್ತವೆ ಮತ್ತು ಆಹಾರದ ದುರ್ವಾಸನೆ ರೆಫ್ರಿಜರೇಟರ್ ನಲ್ಲಿ ಹರಡುವುದಿಲ್ಲ.
ಫ್ರಿಡ್ಜ್ ನ ಬಾಗಿಲನ್ನು ಹೆಚ್ಚು ಹೊತ್ತು ತೆರೆಯಬೇಡಿಫ್ರಿಜ್ ಬಾಗಿಲನ್ನು ಬಹಳ ಕಾಲ ತೆರೆದಿಡುವುದು ಅದರ ಕೂಲಿಂಗ್ ಸಿಸ್ಟಮ್ ಮೇಲೆ ಪರಿಣಾಮ ಬೀರುತ್ತದೆ. ಇದು ವಿದ್ಯುತ್ ಬಳಕೆಯನ್ನು ಹೆಚ್ಚಿಸುತ್ತದೆ ಮತ್ತು ರೆಫ್ರಿಜರೇಟರ್ ಅನ್ನು ಮತ್ತೆ ತಂಪಾಗಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ಬಿಸಿ ಆಹಾರವನ್ನು ನೇರವಾಗಿ ರೆಫ್ರಿಜರೇಟರ್ ನಲ್ಲಿ ಇಡಬೇಡಿಆಹಾರವನ್ನು ರೆಫ್ರಿಜರೇಟರ್‌ನಲ್ಲಿಟ್ಟರೆ, ಅದು ರೆಫ್ರಿಜರೇಟರ್‌ನೊಳಗಿನ ವಾತಾವರಣವನ್ನು ಬಿಸಿ ಮಾಡಲು ಪ್ರಾರಂಭಿಸುತ್ತದೆ ಮತ್ತು ರೆಫ್ರಿಜರೇಟರ್ ಒಳಗಿನ ತಾಪಮಾನವು ಕಡಿಮೆ ಶೀತವಾಗುತ್ತದೆ. ಇದನ್ನು ತಪ್ಪಿಸಲು ಆಹಾರವನ್ನು ಫ್ರಿಡ್ಜ್‌ನಲ್ಲಿಡುವ ಮೊದಲು ತಣ್ಣಗೆ ಮಾಡಿ, ಇದರಿಂದ ರೆಫ್ರಿಜರೇಟರ್ ಒಳಗಿನ ತಾಪಮಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.