ಮನೆಯಲ್ಲೇ ಪನ್ನೀರ್‌ ತಯಾರಿಸುವ ಸಂಪೂರ್ಣ ರೆಸೆಪಿ ಇಲ್ಲಿ!

First Published | Mar 14, 2021, 3:54 PM IST

ಪನ್ನೀರ್‌ ಒಂದು ಸೂಪರ್‌ ಫುಡ್‌. ಆದರೆ ಕೆಲವೊಮ್ಮೆ ಮಾರುಕಟ್ಟೆಯಲ್ಲಿ ಸಿಗುವ ಪನ್ನೀರ್‌ ರಬ್ಬರ್‌ ರೀತಿಯಾಗಿರುತ್ತದೆ. ಪನ್ನೀರ್‌ ಮನೆಯಲ್ಲೇ ಮಾಡಬಹುದಾದರೂ ಕೆಲವು ಸಾರಿ ಕಹಿಯಾದರೆ, ಮತ್ತೊಂದು ಸಾರಿ ಸಾಫ್ಟ್‌ ಆಗುವುದಿಲ್ಲ. ಈ ಸಮಸ್ಯೆಗಳಿಂದ ಪನ್ನೀರ್‌ ಮನೆಯಲ್ಲಿ ತಯಾರಿಸುವುದು ಕಷ್ಟ ಎನ್ನಿಸುತ್ತದೆ. ಆದರೆ ಇಲ್ಲಿದೆ ಮನೆಯಲ್ಲೇ ಸುಲಭವಾಗಿ ಒಂದು ಲೀಟರ್‌ ಹಾಲಿನಿಂದ ಸಾಫ್ಟ್‌ ಪರ್ಫೆಕ್ಟ್‌ ಪನ್ನೀರ್‌ ತಯಾರಿಸುವ ವಿಧಾನ. 

40 ಗ್ರಾಂ ಲೋ ಫ್ಯಾಟ್‌ ಪನ್ನೀರ್‌ನಲ್ಲಿ 7.54 ಗ್ರಾಂ ಪ್ರೋಟೀನ್, 5.88 ಗ್ರಾಂ ಫ್ಯಾಟ್‌,4.96 ಗ್ರಾಂ ಕಾರ್ಬೋಹೈಡ್ರೇಟ್ , 37.32 ಮೈಕ್ರೊಗ್ರಾಂ ಫೋಲೇಟ್ ಮತ್ತು 190.4 ಮಿಗ್ರಾಂ ಕ್ಯಾಲ್ಸಿಯಂ ಇರುತ್ತದೆ.
ಪನ್ನೀರ್‌ ಮಾಡಲು ಒಂದು ಲೀಟರ್‌ ದಪ್ಪ ಹಾಲನ್ನು ದೊಡ್ಡ ಪಾತ್ರೆಗೆ ಹಾಕಿ ಮೀಡಿಯಂ ಉರಿಯಲ್ಲಿ ಕಾಯಲು ಇಡಿ.
Tap to resize

ಹಾಲು ಉಕ್ಕದ ಹಾಗೆ ನಿರಂತರವಾಗಿ ಬಿಸಿ ಮಾಡಿ ಕೈಯಾಡಿಸಿ. ಹಾಲು ಕುದಿಯಲು ಪ್ರಾರಂಭಿಸಿದಾಗ ಸ್ಪಲ್ಪ ಉಪ್ಪು ಹಾಕಿ. ಆದರೆ ಪನ್ನೀರ್‌ ಅನ್ನು ಸ್ವೀಟ್‌ ಮಾಡಲು ಬಳಸುವುದಾದರೆ ಉಪ್ಪು ಹಾಕಬೇಡಿ.
ನಂತರ ನಿಂಬೆರಸ ಅಥವಾ ವಿನೆಗರ್‌ ಸೇರಿಸಿ. ಆದರೆ ನೇರವಾಗಿ ಇದನ್ನು ಹಾಲಿಗೆ ಹಾಕುವ ತಪ್ಪು ಮಾಡಬೇಡಿ.
ನಿಂಬೆರಸ ಅಥವಾ ವಿನೆಗರ್‌ ಅನ್ನು ಸ್ಪಲ್ಪ ನೀರಿನೊಂದಿಗೆ ಬೆರೆಸಿ ನಿಧಾನವಾಗಿ ಹಾಲಿಗೆ ಹಾಕಿ ಮಿಕ್ಸ್‌ ಮಾಡಿ.
4-5 ನಿಮಿಷಗಳಲ್ಲಿ ಹಾಲು ಒಡೆಯುತ್ತದೆ.
ಈ ಸಮಯದಲ್ಲಿ ಗ್ಯಾಸ್‌ ಬಂದ್‌ ಮಾಡಿ, ತೆಳು ಕಾಟನ್‌ ಬಟ್ಟೆಯಿಂದ ಒಡೆದ ಹಾಲನ್ನು ಸೋಸಿ.
ಪನ್ನೀರ್‌ ತಯಾರಿಸುವಾಗ ಬೇಕಾದಲಿ ಪಾಲಕ್‌ ಅಥವಾ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅಥವಾ ನಿಮ್ಮ ಇಷ್ಷದ ಮಸಾಲೆಯನ್ನು ಆಡ್‌ ಮಾಡಿಕೊಳ್ಳಬಹುದು.
ನೀರು ಮತ್ತು ಪನ್ನೀರ್‌ ಬೇರೆಯಾದ ನಂತರ. ಸ್ವಲ್ಪ ಸಮಯ ಪನ್ನೀರ್‌ ಸೆಟ್‌ ಆಗಲು ಬಿಡಿ.
ಪನ್ನೀರ್‌ ತಯಾರಿಸಿ ಉಳಿದ ನೀರಲ್ಲಿ ಸಾಕಷ್ಷಯ ಪೋಷಕಾಂಶಗಳಿರುವುದರಿಂದ ಅದನ್ನು ಬೇಳೆ, ತರಕಾರಿ ಬೇಯಿಸಲು ಅಥವಾ ಹಿಟ್ಟು ಕಲಿಸಲು ಬಳಸಿಕೊಳ್ಳಿ.

Latest Videos

click me!