ಚಕ್ಕೋತ…. ಚಕ್ಕೋತಾ…. ಬನ್ನಿ ಹಣ್ಣಿನ ಪ್ರಯೋಜನ ತಿಳಿಯೋಣ

First Published Aug 18, 2022, 6:44 PM IST

ಚಕ್ಕೋತ… ಚಕ್ಕೋತ… ಈ ಹಾಡನ್ನು ಖಂಡಿತವಾಗಿಯೂ ಕೇಳಿರುತ್ತೀರಿ ಅಲ್ವಾ? ನಾವಿಲ್ಲಿ ಹೇಳ್ತಾ ಇರೋದು ಹಾಡಿನ ಬಗ್ಗೆ ಅಲ್ಲ, ಹಾಡಲ್ಲಿ ಬರೋ ಹಣ್ಣಿನ ಬಗ್ಗೆ. ಹೌದು ಈ ಹಣ್ಣು ಹಲವಾರು ಆರೋಗ್ಯ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತೆ. ಹಾಗಿದ್ರೆ ಬನ್ನಿ ಈ ಹಣ್ಣಿನಿಂದ ಯಾವೆಲ್ಲಾ ಸಮಸ್ಯೆಗಳನ್ನು ನಿವಾರಿಸಬಹುದು ಅನ್ನೋದನ್ನು ನಾವಿಂದು ನೋಡೋಣ. 
 

ಚಕ್ಕೋತ ಹಣ್ಣು(Pomelo) ನೋಡಲು ಎಷ್ಟು ಚೆನ್ನಾಗಿರುತ್ತೋ, ಇದರ ರುಚಿ ಕೂಡ ಅಷ್ಟೇ ಚೆನ್ನಾಗಿರುತ್ತೆ, ಜೊತೆಗೆ ಇದರ ಆರೋಗ್ಯ ಪ್ರಯೋಜನಗಳು ಸಹ ಹಲವಾರಿದೆ. ಇದು ಹೃದಯದ ಸ್ನಾಯುಗಳನ್ನು ಬಲಪಡಿಸುತ್ತೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ, ಹಾಗೆಯೇ ಆಲ್ಕೋಹಾಲ್ ಚಟವನ್ನು ದೂರ ಮಾಡುತ್ತೆ. ಇಂದಿನಿಂದ ನಿಮ್ಮ ಆಹಾರದಲ್ಲಿ ಚಕ್ಕೋತವನ್ನು ಸೇರಿಸಿ. ಇದು ಅತ್ಯುತ್ತಮ ಮತ್ತು ಪ್ರಯೋಜನಕಾರಿ ಹಣ್ಣು. ಅದರ ಹುಳಿ ಮತ್ತು ಸಿಹಿ ರುಚಿ ಹೃದಯದ ಸ್ನಾಯುಗಳನ್ನು ಬಲಪಡಿಸುತ್ತೆ ಮತ್ತು ಅನೇಕ ರೋಗಗಳಿಂದ ರಕ್ಷಿಸುತ್ತೆ. ಚಕ್ಕೋತ ಸೇವಿಸುವ ಮೂಲಕ, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಸಹ ನಿಯಂತ್ರಣದಲ್ಲಿರುತ್ತೆ. ಇದರೊಂದಿಗೆ, ದೇಹದ ರೋಗನಿರೋಧಕ ಶಕ್ತಿಯೂ ಅಗಾಧವಾಗಿರುತ್ತೆ. 

ಈ ಹಣ್ಣಿನ ಇತಿಹಾಸ ಎರಡು ಸಾವಿರ ವರ್ಷಗಳಷ್ಟು ಹಳೆಯದು.
ಚಕ್ಕೋತದ ಇತಿಹಾಸವು ಎರಡು ಸಾವಿರ ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತೆ. ಈ ಹಿಂದೆ, ಈ ಹಣ್ಣನ್ನು ಮಲೇಷ್ಯಾ(Malasia) ಮತ್ತು ಇಂಡೋನೇಷ್ಯಾ ದ್ವೀಪಗಳಲ್ಲಿ ತಿನ್ನಲಾಗುತ್ತಿತ್ತು. ಆದರೆ ಇದು ಯಾವಾಗ ಉಗಮವಾಯಿತು ಅನ್ನೋದಕ್ಕೆ ಯಾವುದೇ ನಿರ್ದಿಷ್ಟ ಸಮಯವಿಲ್ಲ. ಭಾರತ ಮತ್ತು ಚೀನಾದ ಗಡಿ ಪ್ರದೇಶವಾದ ಸಿಯಾಮ್-ಮಲಯ್-ಜಾವಾದಲ್ಲಿ ಚಕ್ಕೋತ ಉಗಮವಾಯಿತು ಎಂದು ನಂಬಲಾಗಿದೆ. 

ಕೆಲವು ಇತಿಹಾಸ ಪುಸ್ತಕಗಳಲ್ಲಿ, ಇದರ ಉಗಮವು ಕ್ರಿ.ಪೂ.ಗಿಂತ ಕೆಲವು ಶತಮಾನಗಳ ಹಿಂದಿನದು ಎಂದು ನಂಬಲಾಗಿದೆ. ಭಾರತದ ಪ್ರಾಚೀನ ಆಯುರ್ವೇದ(Ayurveda) ಪುಸ್ತಕ 'ಸುಶ್ರುತ ಸಂಹಿತೆ'ಯಲ್ಲಿ ಚಕ್ಕೋತವನ್ನು ಅತ್ಯುತ್ತಮ ಹಣ್ಣುಗಳಲ್ಲಿ ಸೇರಿಸಲಾಗಿದೆ ಎಂಬುದು ಇದಕ್ಕೆ ಪುರಾವೆಯಾಗಿದೆ. ಭಾರತ-ಚೀನಾದಲ್ಲಿ, ಈ ಹಣ್ಣನ್ನು ದೇಹಕ್ಕೆ ರಾಮಬಾಣ ಎಂದು ಪರಿಗಣಿಸಲಾಗುತ್ತೆ. ಈ ಹಣ್ಣಿನ ಪ್ರಯೋಜನಗಳನ್ನು ತಿಳಿಯೋಣ...
 

ಆಲ್ಕೋಹಾಲ್(Alcohol) ಚಟವನ್ನು ತೊಡೆದುಹಾಕಬಹುದು
ಆಯುರ್ವೇದ ಪುಸ್ತಕ 'ಚರಕಸಂಹಿತಾ'ದಲ್ಲಿ, ಚಕ್ಕೋತ ತುಂಬಾ ಪ್ರಯೋಜನಕಾರಿ ಎಂದು ವಿವರಿಸಲಾಗಿದೆ. ಒಬ್ಬ ವ್ಯಕ್ತಿಯು ಅತಿಯಾದ ಆಲ್ಕೋಹಾಲ್ ಕುಡಿದಿದ್ದರೆ, ಆಗ ಚಕ್ಕೋತ ತಿನ್ನುವ ಮೂಲಕ, ಅವನ ನಶೆಯನ್ನು ಇಳಿಸಬಹುದು ಎಂದು ಹೇಳಲಾಗುತ್ತೆ. ಇದನ್ನು ಪ್ರತಿದಿನ ಸರಿಯಾಗಿ ಸೇವಿಸಿದರೆ,  ಅನೇಕ ಪ್ರಯೋಜನಗಳನ್ನು ಪಡೆಯಬಹುದು.
 

ಕೆಮ್ಮು(Cough) ಮತ್ತು ಬಿಕ್ಕಳಿಕೆಯ ಸಮಸ್ಯೆಯನ್ನು ನಿವಾರಿಸುತ್ತೆ  
ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ (ಯುಎಸ್ಡಿಎ) ನಡೆಸಿದ ಅಧ್ಯಯನದ ಪ್ರಕಾರ, ಸಾಮಾನ್ಯ ಚಕ್ಕೋತ ಹಣ್ಣಿನಲ್ಲಿ 231 ಕ್ಯಾಲೋರಿಗಳು, ಫೈಬರ್ 6.09 ಗ್ರಾಂ, ಪ್ರೋಟೀನ್ 4.63 ಗ್ರಾಂ, ಕಾರ್ಬೋಹೈಡ್ರೇಟ್ಗಳು 58.6 ಗ್ರಾಂ, ವಿಟಮಿನ್ ಸಿ 371 ಮಿಗ್ರಾಂ ಮತ್ತು ಪೊಟ್ಯಾಸಿಯಮ್ 1320 ಮಿಗ್ರಾಂ ಇರುತ್ತೆ. ಇದರ ಸಿಪ್ಪೆ ಮತ್ತು ಬೀಜ ಸಹ ತುಂಬಾ ಪ್ರಯೋಜನಕಾರಿ. ಇದರ ಸೇವನೆಯು ವಾತ-ಕಫವನ್ನು ನಿಲ್ಲಿಸುತ್ತೆ. ವಾಂತಿ ಮತ್ತು ಬಿಕ್ಕಳಿಕೆಯ ಸಮಸ್ಯೆಯನ್ನು ಸಹ ನಿವಾರಿಸುತ್ತೆ.
 

ಕೆಟ್ಟ ಕೊಲೆಸ್ಟ್ರಾಲ್(Bad cholesterol) ನಿಯಂತ್ರಿಸಲು 
ಚಕ್ಕೋತದಲ್ಲಿ ವಿಟಮಿನ್ಸ್  ಮತ್ತು ಮಿನರಲ್ಸ್  ಕಂಡುಬರುತ್ತವೆ. ಇದು ಹೃದಯದ ಸಮಸ್ಯೆಗಳನ್ನು ನಿವಾರಿಸುತ್ತೆ. ಇದರ ಹುಳಿ ಮತ್ತು ಸೌಮ್ಯ ಮಾಧುರ್ಯವು ಹೃದಯದ ಸ್ನಾಯುಗಳನ್ನು ಬಲವಾಗಿರಿಸುತ್ತೆ. ಅನೇಕ ರೀತಿಯ ರೋಗಗಳಿಂದ ರಕ್ಷಿಸುತ್ತೆ. ಇದು ಕೆಟ್ಟ ಕೊಲೆಸ್ಟ್ರಾಲ್ ನಿಂದ ದೇಹವನ್ನು ದೂರವಿರಿಸುತ್ತೆ. ಜೊತೆಗೆ ಸೋಂಕುಗಳ ವಿರುದ್ಧ ಹೋರಾಡಲು ದೇಹವನ್ನು ಬಲಪಡಿಸುತ್ತೆ. 

ಕ್ಯಾನ್ಸರ್(Cancer) ವಿರುದ್ಧ ಹೋರಾಡುತ್ತೆ 
ಚಕ್ಕೋತದಲ್ಲಿ ಕಂಡುಬರುವ ನಾರಿನಂಶ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದನ್ನು ಸೇವಿಸುವ ಮೂಲಕವೂ ತೂಕವನ್ನು ಕಡಿಮೆ ಮಾಡಬಹುದು. ಇಷ್ಟೇ ಅಲ್ಲ, ಚಕ್ಕೋತದ ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತೆ.

ಚಕ್ಕೋತ ಹಣ್ನನ್ನು ಸೇವಿಸುವ ಮುನ್ನ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಇಲ್ಲಿ ನೀಡಲಾಗಿದೆ. ಇಲ್ಲಾಂದ್ರೆ ನೀವು ಮತ್ತಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತೆ, ಎಚ್ಚರಿಕೆಯಿಂದಿರಿ. 
-ಮೂತ್ರಪಿಂಡ(Kidney) ಮತ್ತು ಪಿತ್ತಜನಕಾಂಗದ ಕಾಯಿಲೆ ಇದ್ದರೆ, ಚಕ್ಕೋತ ಸೇವನೆಯನ್ನು ತಪ್ಪಿಸಿ.

-ಅತಿಯಾದ ಚಕ್ಕೋತ ಸೇವನೆಯು ತೊಂದರೆಯನ್ನು ಉಂಟುಮಾಡಬಹುದು. ರೋಗದ ಸಂದರ್ಭದಲ್ಲಿ, ನೀವು ಔಷಧಿಗಳನ್ನು(Medicine) ತೆಗೆದುಕೊಳ್ಳುತ್ತಿದ್ದರೆ, ಚಕ್ಕೋತವನ್ನು ಎಚ್ಚರಿಕೆಯಿಂದ ಸೇವಿಸಬೇಕು, ಏಕೆಂದರೆ ಅದರೊಳಗಿನ ಅಂಶಗಳು ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡಬಹುದು ಅಥವಾ ತೆಗೆದುಹಾಕಬಹುದು.
 

ಅಲರ್ಜಿ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ದರೆ, ಚಕ್ಕೋತ ತಿನ್ನುವುದನ್ನು ತಪ್ಪಿಸಿ. ಅತಿಯಾದ ಸೇವನೆಯು ಹೊಟ್ಟೆಯಲ್ಲಿ ಆಮ್ಲದ ಮಟ್ಟವನ್ನು ತೀವ್ರ ಮಟ್ಟಕ್ಕೆ ಹೆಚ್ಚಿಸಬಹುದು. ಇದರಿಂದ ಹೊಟ್ಟೆಗೆ(Stomach) ಸಂಬಂಧಿಸಿದ ಹಲವು ಸಮಸ್ಯೆಗಳು ಕಾಡೋದು ಖಚಿತ. ಎಚ್ಚರದಿಂದ ಸೇವಿಸಿ.

ಚಕ್ಕೋತ ಕೆಲವು ಔಷಧಿಗಳ ಮೇಲೂ ಪರಿಣಾಮ ಬೀರಬಹುದು. ಆರೋಗ್ಯ ತಜ್ಞರ ಪ್ರಕಾರ, ಇದರ ಸೇವನೆಯು ಕ್ಯಾನ್ಸರ್ ಔಷಧ ಟಮೋಕ್ಸಿಫೆನ್ ನ ಪರಿಣಾಮವನ್ನು ಕಡಿಮೆ ಮಾಡುತ್ತೆ. ಆದುದರಿಂದ ನಿಮಗೆ ಕ್ಯಾನ್ಸರ್(Cancer) ಸಮಸ್ಯೆ ಇದ್ದರೆ ಈ ಹಣ್ಣನ್ನು ಸೇವಿಸೋದನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ.

click me!