ಕೆಸುವಿನ ಎಲೆಗಳಿಂದ ಮಾಡಿದ ಸಾರು ತುಂಬಾನೆ ರುಚಿಕರವಾಗಿರುತ್ತೆ. ಪ್ರತಿಯೊಬ್ಬರೂ ಕೂಡ ಅದರ ರುಚಿಯನ್ನು ಇಷ್ಟಪಡುತ್ತಾರೆ. ಆದರೆ ಈ ಎಲೆಗಳು ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಆಯುರ್ವೇದದ ಪ್ರಕಾರ, ಈ ಎಲೆಗಳನ್ನು ಸೇವಿಸುವ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬಹುದು. ಹಾಗಿದ್ರೆ ಬನ್ನಿ ಅರೇಬಿಕ್ ಎಲೆಗಳಲ್ಲಿ ಅಡಗಿರುವ ಗುಣಲಕ್ಷಣಗಳ ಬಗ್ಗೆ ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.
ಕೆಸುವಿನ ಎಲೆಗಳ ಸೇವನೆಯ ಆರೋಗ್ಯ ಪ್ರಯೋಜನಗಳು
- ಕೆಸುವಿನ ಎಲೆಗಳು ನಮ್ಮ ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ, ಇದು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ. ಇದಕ್ಕೆ ಕಾರಣ ಅದರಲ್ಲಿರುವ ಬೀಟಾ-ಕ್ಯಾರೋಟಿನ್, ಇದು ದೇಹದಲ್ಲಿ ವಿಟಮಿನ್ ಎ (vitamin A) ಆಗಿ ಬದಲಾಗುತ್ತದೆ. ಅಲ್ಲದೇ ಇದು ಕಣ್ಣಿನ ಸಮಸ್ಯೆಗಳನ್ನು ದೂರವಿಡುತ್ತದೆ.
- ಕೆಸುವಿನ ಎಲೆಗಳನ್ನು ಸೇವಿಸುವುದರಿಂದ ದೇಹದಲ್ಲಿ ಹೆಚ್ಚಿದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಹ ಕಡಿಮೆ ಮಾಡಬಹುದು. ಒಣಗಿದ ಕೆಸುವಿನ ಎಲೆಗಳಿಂದ ತಯಾರಿಸಿದ ಪುಡಿಯು ಲಿಪಿಡ್ ಪ್ರೊಫೈಲ್ ಗಳನ್ನು ಸರಿಪಡಿಸುತ್ತದೆ ಎಂದು ಸಂಶೋಧನೆ ಕಂಡುಕೊಂಡಿದೆ.
- ಕೆಸುವಿನ ಎಲೆಯು ಸಂಪೂರ್ಣವಾಗಿ ಹೃದಯದ ಆಕಾರದಲ್ಲಿದೆ ಮತ್ತು ಅದನ್ನು ಸೇವಿಸುವ ಮೂಲಕ ನಿಮ್ಮ ಹೃದಯವು ಸಹ ಆರೋಗ್ಯಕರವಾಗಿರುತ್ತೆ. ಇದರಲ್ಲಿರುವ ನಾರಿನಂಶದ ಪ್ರಮಾಣವು ಹೃದಯ ಸಂಬಂಧಿ ಕಾಯಿಲೆಗಳ (heart problem) ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
- ಇನ್ನು ಕೆಸುವಿನ ಎಲೆಯು ಫೈಬರ್ ಅಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ, ಆದ್ದರಿಂದ ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸದೃಢವಾಗಿರಿಸುತ್ತದೆ. ಇವುಗಳನ್ನು ಸೇವಿಸುವ ಮೂಲಕ ಸರಿಯಾದ ಜೀರ್ಣಕ್ರಿಯೆಯನ್ನು (digesstion) ಹೊಂದಲು ಸಾಧ್ಯವಾಗುತ್ತದೆ.
- ರಕ್ತಹೀನತೆಯು ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಉಂಟಾಗುವ ಒಂದು ಕಾಯಿಲೆಯಾಗಿದೆ. ಇದಕ್ಕಾಗಿ, ನೀವು ಕೆಸುವಿನ ಎಲೆಗಳನ್ನು ಸೇವಿಸಬೇಕು ಏಕೆಂದರೆ ಅದು ಕಬ್ಬಿಣದ ಅಂಶವನ್ನು ಹೊಂದಿರುತ್ತೆ, ಇದನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಕೂಡ ಇರೋದಿಲ್ಲ.
- ಹೆಚ್ಚಿನ ತೂಕ ಸಮಸ್ಯೆಯಿಂದ (over weight) ನೀವು ಬಳಲುತ್ತಿದ್ದರೆ ಕೆಸುವಿನ ಎಲೆ ನಿಮಗೆ ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತವೆ. ಅದಕ್ಕಾಗಿ ನಿಯಮಿತವಾಗಿ ಈ ಎಲೆಗಳಿಂದ ವಿವಿಧ ವ್ಯಂಜನ ತಯಾರಿಸಿ ತಿಂದ್ರೆ ಆಗೋಯ್ತು. ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.
- ಇದು ಉತ್ತಮ ಆರೋಗ್ಯ ಮಾತ್ರವಲ್ಲ ಸೌಂದರ್ಯ ಹೆಚ್ಚಿಸುವಲ್ಲಿ ಸಹ ಸಹಕಾರಿಯಾಗಿದೆ. ಹೇಗೆ ಗೊತ್ತಾ? ಕೆಸುವಿನ ಎಲೆಗಳಲ್ಲಿ ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಎ ಇರುವ ಕಾರಣ, ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ. ಕೂದಲಿನ ಉತ್ತಮ ಆರೋಗ್ಯಕ್ಕಾಗಿ ನೀವಿದನ್ನು ಬಳಕೆ ಮಾಡಬಹುದು.
- ನಿಮಗೆ ರಕ್ತದೊತ್ತಡದ (blood pressure) ಸಮಸ್ಯೆ ಇದೆಯೇ? ಹಾಗಿದ್ರೆ ನಿಮ್ಮ ಆಹಾರದಲ್ಲಿ ಕೆಸುವಿನ ಎಲೆಗಳನ್ನು ಸೇರಿಸಲು ಮರೆಯಬೇಡಿ. ಯಾಕೆಂದ್ರೆ ಕೆಸುವಿನ ಎಲೆಗಳನ್ನು ಸೇವಿಸುವ ಮೂಲಕವೂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು. ಉತ್ತಮ ಆರೋಗ್ಯವನ್ನು ಕಾಪಾಡಬಹುದು.