ಭಾರತೀಯ ಮನೆಗಳಲ್ಲಿ ತುಪ್ಪವನ್ನು ಆಹಾರದ ಜೊತೆ ಸೇವಿಸುವ ಒಂದು ಸಂಪ್ರದಾಯವಿದೆ. ನಮ್ಮಲ್ಲಿ ಅನೇಕರು ರೊಟ್ಟಿ ಅಥವಾ ಚಪಾತಿ ಮೇಲೆ ತುಪ್ಪ ಹಾಕಿ (adding ghee on roti) ತಿನ್ನಲು ಇಷ್ಟಪಡುತ್ತಾರೆ. ದಾಲ್ ಅಥವಾ ಖಿಚಡಿಯೊಂದಿಗೆ ಅಥವಾ ಬಿಸಿಬೇಳೆ ಬಾತ್ ಜೊತೆ, ಹೋಳಿಗೆ, ಒಬ್ಬಟ್ಟು ಜೊತೆ ತುಪ್ಪದ ಹಾಕಿ ತಿನ್ನೋದು ತುಂಬಾ ಅದ್ಭುತವಾಗಿರುತ್ತೆ. ಆದರೆ ಇತ್ತೀಚಿನ ದಿನಗಳಲ್ಲಿ, ಜನರು ತೂಕದ ಬಗ್ಗೆ ಎಷ್ಟು ಜಾಗೃತರಾಗಿದ್ದಾರೆಂದರೆ, ಅವರು ರೊಟ್ಟಿ ಮೇಲೆ ತುಪ್ಪ ಹಾಕಿ ತಿನ್ನುವ ಮೊದಲು 10 ಬಾರಿ ಯೋಚಿಸುತ್ತಾರೆ. ಕೆಲವರು ಅದನ್ನು ತಮ್ಮ ಮೆನುವಿನಿಂದಲೇ ತೆಗೆದು ಹಾಕಿದ್ದಾರೆ.