Eggless Sponge cake: ಮೊಟ್ಟೆ ಬದಲು ಇವನ್ನು ಬಳಸಿ ಮಾಡಿ ಸಾಫ್ಟ್ ಕೇಕ್‌!

First Published | Nov 29, 2021, 8:26 PM IST

ಯಾವುದೇ ಹುಟ್ಟುಹಬ್ಬ, ವಾರ್ಷಿಕೋತ್ಸವ ಅಥವಾ ಯಾವುದೇ ಸಂದರ್ಭವಿರಲಿ, ಕೇಕ್ ಇಲ್ಲದೆಯೂ ಇವೆಲ್ಲವೂ ಅಪೂರ್ಣ. ಹಾಗೆ ಕೇಕ್‌ಗೆ ಮೊಟ್ಟೆ ಹಾಕಿ ತಯಾರಿಸುವುದು ಎಂಬ ಸಾಮಾನ್ಯ. ಆದರೆ ಮೊಟ್ಟೆಯನ್ನು ಬಳಸದೇ ಸಾಫ್ಟ್‌  ಕೇಕ್‌ ಅನ್ನು ತಯಾರಸಬಹುದು. ಕೇಕ್‌ನಲ್ಲಿ ಮೊಟ್ಟೆಗಳ ಬದಲಿಗೆ ಬಳಸಬಹುದಾದ ಬೇರೆ ಪದಾರ್ಥಗಳ ಬಗ್ಗೆ ಮಾಹಿತಿ ಇಲ್ಲಿದೆ. 

पका हुआ केला

ಬಾಳೆಹಣ್ಣುಗಳು:
ಮನೆಯಲ್ಲಿ ಮೊಟ್ಟೆಗಳಿಲ್ಲದೆ ಮೃದುವಾದ ಮತ್ತು ಸ್ಪಂಜಿನ ರೀತಿಯ ಕೇಕ್ ಮಾಡಲು ಬಯಸಿದರೆ, ಮೊಟ್ಟೆಯ ಬದಲಿಗೆ 1 ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು ಸೇರಿಸಬಹುದು. ಮೊಟ್ಟೆ ಬದಲಿಗೆ ಬಾಳೆ ಹಣ್ಣನ್ನು ಮ್ಯಾಶ್‌ ಮಾಡಿ ಕೇಕ್‌ ಹಿಟ್ಟಿನೊಂದಿಗೆ ಬೆರೆಸಿ ಬೇಕ್‌ ಮಾಡಿದರೆ ಕೇಕ್‌ ಸಾಫ್ಟ್‌ ಆಗಿ ಇರುವುದರ ಜೊತೆಗೆ ಬಾಳೆಹಣ್ಣಿನ ರುಚಿಯೂ ಕೇಕ್ ನಲ್ಲಿ ದೊರೆಯಲಿದೆ.

ವಿನೆಗರ್ ಮತ್ತು ಅಡಿಗೆ ಸೋಡಾ:
ಕೇಕ್‌ ಮಾಡುವಾಗ ಮೊಟ್ಟೆಗಳ ಬದಲಿಗೆ ವಿನೆಗರ್ ಮತ್ತು ಅಡುಗೆ ಸೋಡಾದ ಮಿಶ್ರಣ ಸಹ ಬಳಸಬಹುದು. ಬೇಕರಿ ಉತ್ಪನ್ನಕ್ಕೆ ವಿನೆಗರ್ ಮತ್ತು ಅಡಿಗೆ ಸೋಡಾವನ್ನು ಸೇರಿಸಿದರೆ, ಕೇಕ್‌ಗಳು, ಮಫಿನ್‌ಗಳು ತುಂಬಾ ಮೃದುವಾಗುತ್ತವೆ.

Tap to resize

दही

ಮೊಸರು:
ಕೇಕ್ ಅನ್ನು ಸಾಫ್ಟ್‌ ಆಗಿಸಲು ಬ್ಯಾಟರ್‌ಗೆ ಮೊಟ್ಟೆ ಬದಲು ತಾಜಾ ಮೊಸರು ಸೇರಿಸಬಹುದು. ಮೊಸರು ಸೇರಿಸುವ ಮೂಲಕ, ಕೇಕ್‌ಗಳು ​​ಸಂಪೂರ್ಣವಾಗಿ ಉಬ್ಬುತ್ತವೆ ಮತ್ತು ಮೃದುವಾಗುತ್ತದೆ. ಆದರೆ ಹುಳಿ ಮೊಸರು ಬಳಸುವ ಹಾಗಿಲ್ಲ ಎಂದು ನೆನಪಿಡಿ.
 

ಕಾರ್ಬೊನೇಟೆಡ್ ವಾಟರ್‌:
ಮೊಟ್ಟೆಗಳ ಬದಲಿಗೆ ಕೇಕ್‌ ಬ್ಯಾಟರ್‌ಗೆ ಕಾರ್ಬೊನೇಟೆಡ್ ನೀರನ್ನು ಸಹ ಬಳಸಬಹುದು. ಕಾರ್ಬೊನೇಟೆಡ್ ನೀರು ಅಂದರೆ ಸೋಡಾ ನೀರು ಕೇಕ್ ಅನ್ನು ಸ್ಪಂಜಿ ಆಗಿ ಮಾಡುತ್ತದೆ ಮತ್ತು ಅದನ್ನು ಉಬ್ಬಿಸುತ್ತದೆ. ಇದು ಕೇಕ್ ರುಚಿಯನ್ನು ಕೂಡ  ಹೆಚ್ಚಿಸುತ್ತದೆ. ಬೇಕ್‌ ಮಾಡುವ ಮೊದಲು ಕೇಕ್ ಹಿಟ್ಟಿಗೆ ಇದನ್ನು ಹಾಕಿ ಅನ್ನು ಲಘುವಾಗಿ ಬೆರೆಸಬೇಕು ಎಂದು ನೆನಪಿಡಿ.

ನಟ್‌ ಬಟರ್‌:
ಮೊಟ್ಟೆ ಇಲ್ಲದೆ ಫ್ಲಫಿ ಸಾಫ್ಟ್‌ ಕೇಕ್ ಮಾಡಲು, ಅದರ ಹಿಟ್ಟನ್ನು ತಯಾರಿಸುವಾಗ ಅದರಲ್ಲಿ ನಟ್‌ ಬಟರ್‌ ಬಳಸಿ. ಇದು ಬೇಯಿಸಿದಾಗ ಅದರ ರುಚಿಯನ್ನು ಹೆಚ್ಚಿಸುವುದಲ್ಲದೆ, ಕೇಕ್‌ ಉಬ್ಬುವಂತೆ ಮಾಡುತ್ತದೆ .

ಮೊಟ್ಟೆಯಿಲ್ಲದ ಸ್ಪಾಂಜ್ ಕೇಕ್ ತಯಾರಿಸಲು ಮೊದಲು ,ಓವನ್‌ ಅನ್ನು 180 °C (356 °F) ನಲ್ಲಿ 10 ನಿಮಿಷಗಳ ಕಾಲ ಪ್ರೀ ಹೀಟ್‌ ಮಾಡಿ. ಅಲ್ಲದೆ, ಬೇಕಿಂಗ್ ಕೇಕ್ ಟಿನ್ ಅನ್ನು ಬೆಣ್ಣೆಯೊಂದಿಗೆ ಗ್ರೀಸ್ ಮಾಡಿ ಮತ್ತು ಅದನ್ನು ಪಕ್ಕಕ್ಕೆ ಇರಿಸಿ.

ಕೇಕ್ ಬ್ಯಾಟರ್ ಮಾಡಲು, ಒಂದು ದೊಡ್ಡ ಬಟ್ಟಲಿನಲ್ಲಿ 1½ ಕಪ್ ಮೈದಾ ಹಿಟ್ಟನ್ನು ಜರಡಿ ಮಾಡಿ ಮತ್ತು ಇನ್ನೊಂದು ದೊಡ್ಡ ಬಟ್ಟಲಿನಲ್ಲಿ 1 ಕಪ್ ಫ್ರೆಶ್‌ ಮೊಸರು ಮತ್ತು 3/4 ಕಪ್ ಸಕ್ಕರೆ ಸೇರಿಸಿ. ಬೀಟರ್‌ ಅಥವಾ ಚಮಚದ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ.

ಈಗ ಮೊಸರು ಸಕ್ಕರೆ ಮಿಶ್ರಣಕ್ಕೆ 1/2 ಟೀಸ್ಪೂನ್ ಬೇಕಿಂಗ್ ಸೋಡಾ ಮತ್ತು 1 ಟೀಸ್ಪೂನ್ ಬೇಕಿಂಗ್ ಪೌಡರ್ ಸೇರಿಸಿ. ಅಡಿಗೆ ಸೋಡಾ ಮೊಸರಿನೊಂದಿಗೆ ಪ್ರತಿಕ್ರಿಯಿಸಲು ಪ್ರಾರಂಭಿಸಿದಾಗ, ಗುಳ್ಳೆಗಳು ಮೇಲ್ಮೈಯಲ್ಲಿ ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ, ಅದಕ್ಕೆ 1/2 ಕಪ್ ಎಣ್ಣೆ ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ ಮತ್ತು ನಿಧಾನವಾಗಿ ಕೈಗಳಿಂದ ಮಿಶ್ರಣ ಮಾಡಿ.

ನಂತರ, ಈ ಮಿಶ್ರಣಕ್ಕೆ ಮೊದಲೇ ಜರಡಿ ಹಿಡಿದ ಹಿಟ್ಟನ್ನು ಹಂತ ಹಂತವಾಗಿ ಸೇರಿಸಿ ಮತ್ತು cut and fold ಮಾದರಿಯಲ್ಲಿ  ಚೆನ್ನಾಗಿ ಮಿಶ್ರಣ ಮಾಡಿ. ಸಿದ್ಧಪಡಿಸಿದ ಮಿಶ್ರಣವನ್ನು ಮೊದಲೇ ಗ್ರೀಸ್ ಮಾಡಿದ ಕೇಕ್ ಟಿನ್ ಗೆ ಸುರಿಯಿರಿ.

ಪ್ರೀ ಹೀಟ್‌ ಮಾಡಿದ ಓವನ್‌ನಲ್ಲಿ  ಕೇಕ್ ಟಿನ್ ಇರಿಸಿ ಮತ್ತು 180 C (356 F) ನಲ್ಲಿ 35-40 ನಿಮಿಷಗಳ ಕಾಲ ಕಂದು ಬಣ್ಣ ಬರುವವರೆಗೆ ಬೇಕ್‌ ಮಾಡಿ. 

ನಿಗದಿತ ಸಮಯದ ನಂತರ, ಟಿನ್‌ ಅನ್ನು  ತೆಗೆದು ಮಧ್ಯದಲ್ಲಿ ಟೂತ್‌ ಪಿಕ್ ಅನ್ನು ಚುಚ್ಚಿ ಕೇಕ್‌  ಸಂಪೂರ್ಣವಾಗಿ ಬೇಕ್‌ ಆಗಿದೇಯೆ ಎಂದು ಪರಿಶೀಲಿಸಿ. ಅದು ಇಲ್ಲದಿದ್ದರೆ, ಇನ್ನೂ ಕೆಲವು ನಿಮಿಷ ಬೇಯಿಸಿ. ಟೂತ್‌ ಪಿಕ್‌ಗೆ ಕೇಕ್‌ ಅಂಟದೆ ಇದ್ದಲ್ಲಿ ಮೊಟ್ಟೆಯಿಲ್ಲದ ಸ್ಪಾಂಜ್ ಕೇಕ್ ಸಿದ್ಧವಾಗಿದೆ ಎಂದು ಅರ್ಥ.

Latest Videos

click me!