Winter Effect : ಚಳಿಗಾಲದಲ್ಲಿ ಈ ಆಹಾರ ತಿನ್ನದಿದ್ದರೆ ಒಳಿತು!!

First Published Nov 27, 2021, 5:04 PM IST

ಚಳಿಗಾಲದ ಋತುವಿನಲ್ಲಿ (Winter season) ಕೆಲವು ವಸ್ತುಗಳನ್ನು ತಿನ್ನುವುದು ಅಪಾರ ಹಾನಿಯನ್ನುಂಟುಮಾಡುತ್ತದೆ. ಇದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಅಥವಾ ಇನ್ನಿತರ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ನೀವು ಡಯಟ್ ಮಾಡುತ್ತಿದ್ದರೆ ಇವುಗಳನ್ನು ತಿನ್ನಬೇಡಿ. ಇಲ್ಲವಾದರೆ ಆರೋಗ್ಯ ಕೆಡುವುದು ಖಂಡಿತಾ. 

ಸ್ವೀಟ್ ಪುಡ್ಡಿಂಗ್ ಮತ್ತು ಚಿಕ್ಕಿ
ಚಳಿಯಲ್ಲಿ ಕ್ಯಾರೆಟ್ ಹಲ್ವಾ (Carrot Halwa), ಚಿಕ್ಕಿ, ಎಳ್ಳು ಲಾಡು ಮುಂತಾದ ವಸ್ತುಗಳನ್ನು ತಿನ್ನುವುದನ್ನು ತಡೆಯಲು ಸಾಧ್ಯವಾಗದಿದ್ದರೆ, ನಿಮ್ಮ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ. ಇದು ಕ್ಯಾಲೊರಿಗಳನ್ನು ಹೆಚ್ಚು ಹೊಂದಿರುತ್ತದೆ, ಇದು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಇವುಗಳನ್ನು ತಿಂದರೂ ತುಂಬಾ ಕಡಿಮೆ ಪ್ರಮಾಣದಲ್ಲಿ ತಿನ್ನಿ.

ಹೆಚ್ಚು ಪರೋಟಗಳನ್ನು ತಿನ್ನುವುದನ್ನು ತಪ್ಪಿಸಿ
ಶೀತ ವಾತಾವರಣದಲ್ಲಿ ಉಪ್ಪಿನಕಾಯಿಯೊಂದಿಗೆ ಪರೋಟಾ ತಿನ್ನುವುದು ಹೆಚ್ಚಿನ ಜನರ ನೆಚ್ಚಿನ ಆಹಾರ, ಆದರೆ ಅದನ್ನು ತಿನ್ನುವುದರಿಂದ ನೀವು ವೇಗವಾಗಿ ತೂಕ ಹೆಚ್ಚಿಸುತ್ತೀರಿ (weight gain). ಇದರಿಂದ ಬೊಜ್ಜು ತುಂಬುವ ಸಾಧ್ಯತೆ ಕೂಡ ಹೆಚ್ಚಲಿದೆ. 

ತೂಕ ನಷ್ಟದ  ಪ್ರಕ್ರಿಯೆಯಲ್ಲಿದ್ದರೆ ಇದರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಪರೋಟಾಗಳನ್ನು ತಿಂದರೆ ಬೆಣ್ಣೆ  (butter) ಅಥವಾ ತುಪ್ಪ ಹೆಚ್ಚು ಬಳಸಬೇಡಿ. ಇದರಿಂದ ದೇಹದ ಕೊಬ್ಬು ಹೆಚ್ಚಾಗಬಹುದು. ದೇಹದ ಬೊಜ್ಜು ಹೆಚ್ಚಾದರೆ ಒಂದೊಂದು ಸಮಸ್ಯೆಗಳು ಕಾಡಬಹುದು. 

ಕೆನೆ ಸೂಪ್ ಬದಲಿಗೆ ತರಕಾರಿ ಸೂಪ್ ಕುಡಿಯಿರಿ
ತೂಕ ಇಳಿಸಿಕೊಳ್ಳಲು ನೀವು ಬಯಸಿದರೆ, ಕೆನೆ ಭರಿತ ಸೂಪ್ ಕುಡಿಯಬೇಡಿ. ಇದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಕೆನೆಭರಿತ ಸೂಪ್ ಬದಲಿಗೆ ತರಕಾರಿ ಸೂಪ್ (vegetable soup) ಕುಡಿಯಿರಿ. ಇದು ಆರೋಗ್ಯಕ್ಕೆ ಉತ್ತಮ. ಚಳಿಗಾಲದಲ್ಲಿ ತರಕಾರಿ ಸೂಪ್ ದೇಹಕ್ಕೆ ಉತ್ತಮ ಪೌಷ್ಟಿಕಾಂಶಗಳನ್ನು ನೀಡುತ್ತದೆ. 

ಕಡಿಮೆ ಚಹಾ ಮತ್ತು ಕಾಫಿ ಕುಡಿಯಿರಿ
ಚಹಾ ಮತ್ತು ಕಾಫಿಯನ್ನು ಮತ್ತೆ ಮತ್ತೆ ಕುಡಿಯುವುದು ಸಹ ಹಾನಿ ಮಾಡುತ್ತದೆ. ಚಹಾದಲ್ಲಿ ಇರುವ ಹಾಲು ಮತ್ತು ಸಕ್ಕರೆಯ ಪ್ರಮಾಣವು ತೂಕ ಹೆಚ್ಚಿಸಬಹುದು. ದಿನಕ್ಕೆ ಎರಡು ಕಪ್ ಗಿಂತ ಹೆಚ್ಚು ಚಹಾ ಅಥವಾ ಕಾಫಿ ಕುಡಿಯಬೇಡಿ.

ಚಹಾದ ಬದಲು ಹರ್ಬಲ್ ಟೀ (Herbal Tea), ಬ್ಲ್ಯಾಕ್ ಟೀ, ಗ್ರೀನ್ ಟೀ ಅಥವಾ ಲೆಮನ್ ಗ್ರಾಸ್ ಟೀ ಸೇವಿಸಿ. ಇದರಲ್ಲಿ ಕ್ಯಾಲೋರಿ ಕಡಿಮೆ ಇದೆ. ಇದರಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಗುಣವೂ  ಲಾಭ ತರುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

ತಂಪಾದ ಪಾನೀಯಗಳು (Cold drink) ಮತ್ತು ತಂಪಾದ ಆಹಾರಗಳನ್ನು ಸೇವಿಸುವುದು ದೇಹದ ರಕ್ಷಣಾ ವ್ಯವಸ್ಥೆಯನ್ನು ಕಡಿಮೆ ಮಾಡುತ್ತದೆ, ಇದರಿಂದ  ರೋಗಗಳು ಹೆಚ್ಚಬಹುದು. ಚಳಿಗಾಲದ ಋತುವಿನಲ್ಲಿ ತಂಪಾದ ಆಹಾರಗಳನ್ನು ಸೇವಿಸಬಾರದು, ಏಕೆಂದರೆ ದೇಹದ ತಾಪಮಾನಕ್ಕೆ ತರಲು ದೇಹವು ಎರಡು ಪಟ್ಟು ಕಷ್ಟಪಡಬೇಕಾಗುತ್ತದೆ. ಇದರಿಂದ ಆರೋಗ್ಯ ಕೆಡುತ್ತದೆ. 

ಮಾಂಸಗಳಂತಹ ಹೆವಿ ಆಹಾರಗಳನ್ನು ಚಳಿಗಾಲದಲ್ಲಿ ತೆಗೆದುಕೊಳ್ಳಬಾರದು. ಇವುಗಳನ್ನು ಜೀರ್ಣಿಸಿಕೊಳ್ಳಲು ದೇಹ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ, ಹೀಗಾಗಿ ದೈಹಿಕ ನಿಷ್ಕ್ರಿಯತೆ ಈಗಾಗಲೇ ಕಡಿಮೆ ಇರುವ ಸಮಯದಲ್ಲಿ ನಮ್ಮನ್ನು ಆಲಸ್ಯಗೊಳಿಸುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳು ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. 

ಹಾಲು, ಮೊಸರು ಅಥವಾ ನಿಮ್ಮ ನೆಚ್ಚಿನ ಮಜ್ಜಿಗೆ. ಹಾಲಿನ ಉತ್ಪನ್ನಗಳು (diary product) ಈಗಾಗಲೇ ತಂಪಾಗಿದ್ದರೆ ಮತ್ತು ಘನೀಕರಿಸಲ್ಪಟ್ಟಿದ್ದರೆ, ಅದನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ. ಚಳಿಗಾಲದಲ್ಲಿ ಅದರ ಸೇವನೆಯು ಶೀತ ಮತ್ತು ನಂತರದ ಜ್ವರದ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ.

click me!