ಕ್ರಿಕೆಟ್ ಅಂದ್ರೆ ಎಲ್ಲರಿಗೂ ಇಷ್ಟ ಅಲ್ವಾ? ಈಗಂತೂ ವರ್ಲ್ಡ್ ಕಪ್ ಎಲ್ಲರೂ ಟಿವಿ ಮುಂದೆ ಕೂರೋದನ್ನು ಬಿಡಲ್ಲ. ಈ ಸಮಯದಲ್ಲಿ ಕ್ರಿಕೆಟ್ ಆಟಗಾರನ್ನು (cricket players) ನೋಡಿದಾಗ ಹಲವಾರು ಪ್ರಶ್ನೆಗಳು ನಿಮ್ಮ ಮನಸಲ್ಲಿ ಮೂಡಬಹುದು. ಅದರಲ್ಲಿ ಒಂದು ಕ್ರಿಕೆಟಿಗರು ಮುಖ ಮತ್ತು ತುಟಿಗಳಿಗೆ ಬಿಳಿ ಬಣ್ಣದ ಕ್ರೀಮ್ ಹಚ್ಚುವುದನ್ನು ನೀವು ಗಮನಿಸಿರಬಹುದು? ಇದು ಯಾವ ಕ್ರೀಮ್ ಮತ್ತು ಅದನ್ನು ಏಕೆ ಬಳಸಲಾಗುತ್ತದೆ ಎಂಬ ಪ್ರಶ್ನೆ ನಿಮಗೂ ಕಾಡಿರಬಹುದು ಅಲ್ವ? ಬನ್ನಿ ಇದರ ಬಗ್ಗೆ ತಿಳಿಯೋಣ.
ಕ್ರಿಕೆಟಿಗರು ಚರ್ಮಕ್ಕೆ ಹಚ್ಚುವ ಬಿಳಿ ಕ್ರೀಮ್ ಜಿಂಕ್ ಆಕ್ಸೈಡ್ ಕ್ರೀಮ್, (Zinc Oxyde Cream) ಇದು 'ಭೌತಿಕ ಸನ್‌ಸ್ಕೀರನ್' ಮತ್ತು 'ರಿಫ್ಲೆಕ್ಟರ್' ಆಗಿ ಬಳಸಲಾಗುತ್ತದೆ. ಇದು ಸಾಮಾನ್ಯ ಸನ್‌ಸ್ಕ್ರೀನ್‌ಗಿಂತ ಸಾಕಷ್ಟು ಭಿನ್ನವಾಗಿದೆ ಮತ್ತು ಸನ್ ಟ್ಯಾಗಿನಿಂದ ರಕ್ಷಿಸುವಲ್ಲಿ ಹೆಚ್ಚು ಪರಿಣಾಮಕಾರಿ.
ಇದು ಸಾಮಾನ್ಯ ಸನ್ ಸ್ಕ್ರೀನ್ ಗಿಂತ ಭಿನ್ನ?
ಈ ಕ್ರೀಮ್ ಹೊರ ಚರ್ಮದ ಮೇಲೆ ಒಂದು ಪದರ ಸೃಷ್ಟಿಸುತ್ತದೆ, ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ನಾವು ಪ್ರತಿದಿನ ಬಳಸುವ Sun Screen ಮತ್ತು ಈ Sun Screen ನಡುವಿನ ವ್ಯತ್ಯಾಸವೇನು ಅಂದ್ರೆ ಈ ಕ್ರೀಮಿನಲ್ಲಿ ಕೆಲವು ರಾಸಾಯನಿಕಗಳಿವೆ. ಅಂದರೆ ಅವು ಚರ್ಮದಲ್ಲಿ ಹೀರಿಕೊಂಡ ನಂತರ, ಅವು ಚರ್ಮಕ್ಕೆ ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತವೆ.
ಕ್ರಿಕೆಟಿಗರು ಹಚ್ಚುವ ಸತುವಿನ Oxide Sun Screen ಅನ್ನು ಚರ್ಮ ಹೀರಿಕೊಳ್ಳುತ್ತೆ. ಈ ಸನ್ ಸ್ಕ್ರೀನ್‌ನಿಂದಾಗಿ ಕ್ರಿಕೆಟಿಗರು ಮೈದಾನದಲ್ಲಿ ನೇರ ಸೂರ್ಯನ ಬೆಳಕಿನಲ್ಲಿ ದೀರ್ಘಕಾಲ ಆಡಿದಾಗ, ಅವರ ಚರ್ಮ ಸೂರ್ಯನ ಬೆಳಕಿನ ಹಾನಿಕಾರಕ ಕಿರಣಗಳಿಂದ ಪ್ರಭಾವಿತವಾಗುವುದಿಲ್ಲ. ಈ ಬಿಳಿ ಕ್ರೀಮ್ ಸೂರ್ಯನ ಯುವಿಎ ಮತ್ತು ಯುವಿಬಿ ಕಿರಣಗಳಿಂದ ಆಟಗಾರರನ್ನು ರಕ್ಷಿಸುತ್ತದೆ.
ಜಿಂಕ್ ಆಕ್ಸೈಡ್ ಕ್ರೀಮ್ ಅವರ ಚರ್ಮವನ್ನು ಸೂರ್ಯನಿಂದ ರಕ್ಷಿಸುತ್ತದೆ. ಇದು ಚರ್ಮವನ್ನು ಕಿರಿಕಿರಿ ಮತ್ತು ಉರಿಯೂತದಿಂದ ರಕ್ಷಿಸುತ್ತದೆ, ಅಲ್ಲದೇ ಇದು ಯಾವುದೇ ರೀತಿಯ ತುರಿಕೆ, ದದ್ದು ಮತ್ತು ಅಲರ್ಜಿಗಳಿಗೆ ಕಾರಣವಾಗುವುದಿಲ್ಲ. ಹಾಗಾಗಿ ಕ್ರಿಕೆಟಿಗರು ಹೆಚ್ಚಿನ ಪ್ರಮಾಣದಲ್ಲಿ ಈ ಕ್ರೀಮ್ ಹಚ್ಚಿಕೊಳ್ಳುತ್ತಾರೆ.
ಹೇಗೆ ಅನ್ವಯಿಸಲಾಗುತ್ತದೆ?
ಹೆಚ್ಚಿನ ಕ್ರಿಕೆಟಿಗರು ಇದನ್ನು ತಲೆ, ಮುಖ, ಕುತ್ತಿಗೆ ಹಿಂಭಾಗ, ತುಟಿಗಳು ಅಥವಾ ಕೈಗಳಿಗೆ ಹಚ್ಚುತ್ತಾರೆ. ಏಕೆಂದರೆ ಇದು ಸೂರ್ಯನ ಕಿರಣಗಳು ಗರಿಷ್ಠ ಪರಿಣಾಮವನ್ನು ತೋರಿಸುವ ಹೆಚ್ಚು ಪ್ರದೇಶವಾಗಿದೆ.