ಹಲವು ತೆಲುಗು, ತಮಿಳು, ಕನ್ನಡ ಚಿತ್ರಗಳಲ್ಲಿ ನಟಿಸಿರುವ ತ್ರಿಷಾ ಕೃಷ್ಣನ್ ಪೊನ್ನಿಯಿನ್ ಸೆಲ್ವನ್-1 ಚಿತ್ರದ ಪ್ರಮೋಷನ್‌ನಲ್ಲಿ ಅತ್ಯಾಕರ್ಷಕ ಸ್ಯಾರಿಗಳಲ್ಲಿ ಮಿಂಚಿದ್ದರು. ಹಾಗೆಯೇ ಪೊನ್ನಿಯಿನ್ ಸೆಲ್ವನ್-2 ಟ್ರೇಲರ್ ಲಾಂಚ್‌ನಲ್ಲಿಯೂ ಎಲ್ಲರ ಗಮನ ಸೆಳೆದಿದ್ದಾರೆ. ಚಿತ್ರದಲ್ಲಿ ಕುಂದವಯಿ ಪಾತ್ರವನ್ನು ನಿರ್ವಹಿಸುತ್ತಿರುವ ನಟಿ, ಈವೆಂಟ್‌ಗಾಗಿ ನೀಲಿ ಬಣ್ಣದ ಸೀರೆಯನ್ನು ಧರಿಸಿ ಮಿಂಚಿದರು.