Explained: ರಿವರ್ಸ್ ಹೇರ್ ವಾಶಿಂಗ್ ಎಂದರೇನು ಗೊತ್ತಾ?

First Published | Jul 13, 2022, 7:38 PM IST

ಕೂದಲಿಗೆ ಶ್ಯಾಂಪೂ ಮಾಡೋದು ಬಹುತೇಕ ಪ್ರತಿಯೊಬ್ಬರ ಕೂದಲಿನ ಆರೈಕೆಯ ದಿನಚರಿಯ ಪ್ರಮುಖ ಭಾಗವಾಗಿದೆ. ಕೂದಲನ್ನು ಸ್ವಚ್ಛಗೊಳಿಸೋದರಿಂದ ಹಿಡಿದು ಕೂದಲಿನ ಆರೋಗ್ಯ ಕಾಪಾಡಿಕೊಳ್ಳುವವರೆಗೆ, ಹೇರ್ ವಾಶ್ ವಿಶೇಷ ಕೂದಲಿನ ಆರೈಕೆಯ ಮೊದಲ ಹಂತವಾಗಿದೆ. ಕೆಲವರು ಶಾಂಪೂ ಮಾಡುವಾಗ ರಿವರ್ಸ್ ಹೇರ್ ವಾಶಿಂಗ್ ಸಹ ಅನುಸರಿಸುತ್ತಾರೆ, ಆದರೆ ರಿವರ್ಸ್ ಹೇರ್ ವಾಶಿಂಗ್ ಎಂದರೇನು ಎಂಬುದರ ಬಗ್ಗೆ ತಿಳಿದುಕೊಳ್ಳೋದು ಸಹ ಮುಖ್ಯ. ಹೌದು, ಕೂದಲಿಗೆ ಸಾಮಾನ್ಯ ಶಾಂಪೂ ಮಾಡುವ ಬದಲು, ರಿವರ್ಸ್ ಹೇರ್ ವಾಶಿಂಗ್ ಮಾಡೋದು ಕೂದಲಿಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತೆ. ಏನಿದು ರಿವರ್ಸ್ ಹೇರ್ ವಾಶಿಂಗ್? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ನೋಡೋಣ. 

ರಿವರ್ಸ್ ಹೇರ್ ವಾಶಿಂಗ್ (Reverse hair washing)ಇತ್ತೀಚಿನ ದಿನಗಳಲ್ಲಿ ಕೂದಲಿನ ಆರೈಕೆಯಲ್ಲಿ ಸಾಕಷ್ಟು ಟ್ರೆಂಡಿಂಗ್ ಆಗಿದೆ. ಕೂದಲನ್ನು ತೊಳೆಯುವ ಈ ವಿಶೇಷ ವಿಧಾನ ಪ್ರಯತ್ನಿಸುವ ಮೂಲಕ, ಜನರು ಸುಲಭವಾಗಿ ಕೂದಲಿಗೆ ಸುಂದರ ಲುಕ್ ನೀಡಬಹುದು. ಆದರೆ, ಹೆಚ್ಚಿನ ಜನರಿಗೆ ರಿವರ್ಸ್ ಹೇರ್ ವಾಶಿಂಗ್ ಮೆಥಡ್ ಬಗ್ಗೆ ಇನ್ನೂ ತಿಳಿದಿಲ್ಲ. ರಿವರ್ಸ್ ಹೇರ್ ವಾಶಿಂಗ್ ಬಗ್ಗೆ ಇಲ್ಲಿ ಹೇಳಲಾಗಿದೆ, ಅದನ್ನು ತಿಳಿದ ನಂತರ ನೀವು ನಿಮ್ಮ ಕೂದಲಿನ ಬಗ್ಗೆ ವಿಶೇಷ ಕಾಳಜಿ ವಹಿಸಬಹುದು.

ರಿವರ್ಸ್ ಹೇರ್ ವಾಶಿಂಗ್ ಎಂದರೇನು?
ರಿವರ್ಸ್ ಹೇರ್ ವಾಶಿಂಗ್ ಕಷ್ಟದ ಕೆಲಸವಲ್ಲ. ಹೆಚ್ಚಿನ ಜನ ಕೂದಲು ತೊಳೆಯುವ ಸಮಯದಲ್ಲಿ ಒದ್ದೆ ಮಾಡಿದ ನಂತರ ಶ್ಯಾಂಪೂನಿಂದ ಕೂದಲನ್ನು ತೊಳೆಯುತ್ತಾರೆ ಮತ್ತು ನಂತರ ಕೂದಲಿಗೆ ಕಂಡೀಷನರ್(Contioner) ಹಚ್ಚುತ್ತಾರೆ. ಆದರೆ, ರಿವರ್ಸ್ ವಾಶಿಂಗ್ ನಲ್ಲಿ, ಕೂದಲನ್ನು ಒದ್ದೆ ಮಾಡಿದ ನಂತರ ಕಂಡೀಷನರ್ ಹಚ್ಚಲಾಗುತ್ತೆ ಮತ್ತು 5 ನಿಮಿಷಗಳ ನಂತರ ಶಾಂಪೂ ಹಚ್ಚುವ ಮೂಲಕ ಕೂದಲನ್ನು ತೊಳೆಯಲಾಗುತ್ತೆ .

Tap to resize

ರಿವರ್ಸ್ ಹೇರ್ ವಾಶಿಂಗ್ ಮಾಡೋದು ಹೇಗೆ?
ರಿವರ್ಸ್ ಹೇರ್ ವಾಶ್ ಮಾಡಲು, ಮೊದಲನೆಯದಾಗಿ, ಕೂದಲನ್ನು ಒದ್ದೆ ಮಾಡಿ ಮತ್ತು ಕಂಡೀಷನರ್ ಚೆನ್ನಾಗಿ ಹಚ್ಚಿ. ಈಗ ಕಂಡೀಷನರ್ 5 ನಿಮಿಷಗಳ ಕಾಲ ಕೂದಲಿನಲ್ಲಿ ಬಿಡಿ ಮತ್ತು ಕೂದಲನ್ನು ಶಾಂಪೂವಿನಿಂದ(Shampoo) ತೊಳೆಯಿರಿ. ನಿಮ್ಮ ಕೂದಲು ಎಣ್ಣೆಯುಕ್ತವಾಗಿದ್ದರೆ, ಸಾಮಾನ್ಯ ನೀರಿನಿಂದ ಕೂದಲನ್ನು ತೊಳೆಯಿರಿ.

ರಿವರ್ಸ್ ಹೇರ್ ವಾಶಿಂಗ್ ನ ಪ್ರಯೋಜನವೇನು?
ರಿವರ್ಸ್ ಹೇರ್ ವಾಶ್ ಮಾಡೋದ್ರಿಂದ ಕೂದಲಿನ ವಾಲ್ಯೂಮ್(Volume) ಚೆನ್ನಾಗಿರುತ್ತೆ ಮತ್ತು ಕೂದಲನ್ನು ಬೌನ್ಸಿಯಾಗಿಸುತ್ತೆ. ಅಲ್ಲದೆ, ಕೂದಲನ್ನು ಹೈಡ್ರೇಟ್ ಆಗಿಡಲು ರಿವರ್ಸ್ ಹೇರ್ ವಾಶ್ ಉತ್ತಮ ಮಾರ್ಗ.ಇದು ಕೂದಲನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡುತ್ತೆ.

ರಿವರ್ಸ್ ಹೇರ್ ವಾಶಿಂಗ್ ನಿಂದ ಎಫೆಕ್ಟ್ ಇದೆಯೇ?
ಕೆಮಿಕಲ್ ನಿಂದ ಕೂದಲನ್ನು ರಕ್ಷಿಸಲು ಕಂಡೀಷನರ್ ತುಂಬಾ ಉಪಯುಕ್ತ, ಆದರೆ ರಿವರ್ಸ್ ಹೇರ್ ವಾಶ್ ನಲ್ಲಿ, ಸಾಮಾನ್ಯವಾಗಿ ಕಂಡೀಷನರ್ ಮೊದಲು ಬಳಸಲಾಗುತ್ತೆ ಮತ್ತು ನಂತರ ಶಾಂಪೂ ಬಳಸಲಾಗುತ್ತೆ. ಇದು ಕಂಡೀಷನರ್ ಅನ್ನು ತುಂಬಾ ಪರಿಣಾಮಕಾರಿಯಾಗಿಸೋದಿಲ್ಲ, ವಿಶೇಷವಾಗಿ ದಪ್ಪ ಕೂದಲಿನ(Thick hair) ಮೇಲೆ.

ಪ್ರತಿದಿನ ರಿವರ್ಸ್ ವಾಶ್ ಮಾಡುವ ಮೂಲಕ, ನೀವು ಕೂದಲಿಗೆ ಸಂಬಂಧಿಸಿದ ಸಮಸ್ಯೆ(Hair problems) ಸಹ ಎದುರಿಸಬಹುದು, ಆದ್ದರಿಂದ ವಾರಕ್ಕೊಮ್ಮೆ ರಿವರ್ಸ್ ಹೇರ್ ವಾಶ್ ಮಾಡೋದು ಉತ್ತಮ. ಇದು ಕೂದಲನ್ನು ಆರೋಗ್ಯಕರವಾಗಿಸುತ್ತೆ. ಅಲ್ಲದೇ ಕೂದಲು ಸುಂದರವಾಗಿ ಕಾಣಿಸಲು ಸಹಾಯ ಮಾಡುತ್ತದೆ. ಇದನ್ನು ನೀವೂ ಒಮ್ಮೆ ಮಾಡಿ ನೋಡಿ. 

Latest Videos

click me!