ತೋಳಿಲ್ಲದ ಲೈಲಾಕ್‌ ಡ್ರೆಸ್‌ನಲ್ಲಿ ಮಿಂಚಿದ ವೈಷ್ಣವಿ ಗೌಡ, ಸೀತಮ್ಮ ಏನ್ ನಿನ್ನ ಅವಸ್ಥೆ ಎಂದ ಫ್ಯಾನ್ಸ್‌!

First Published | Dec 27, 2023, 9:32 AM IST

ಕಿರುತೆರೆ ನಟಿ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು, ಆಗಾಗ ಸ್ಟೈಲಿಶ್‌ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಲೈಲಾಕ್‌ ಬಣ್ಣದ ಆಫ್ ಶೋಲ್ಡರ್‌ ಡ್ರೆಸ್‌ನಲ್ಲಿ ಫೋಟೋಗಳಿಗೆ ಫೋಸ್‌ ನೀಡಿದ್ದು, ಫ್ಯಾನ್ಸ್ ವಾವ್‌ ಅಂದಿದ್ದಾರೆ.

ಕಿರುತೆರೆ ನಟಿ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು, ಆಗಾಗ ಸ್ಟೈಲಿಶ್‌ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಲೈಲಾಕ್‌ ಬಣ್ಣದ ಆಫ್ ಶೋಲ್ಡರ್‌ ಡ್ರೆಸ್‌ನಲ್ಲಿ ಫೋಟೋಗಳಿಗೆ ಫೋಸ್‌ ನೀಡಿದ್ದು, ಫ್ಯಾನ್ಸ್ ವಾವ್‌ ಅಂದಿದ್ದಾರೆ.

ನಟಿ ವೈಷ್ಣವಿ ಗೌಡ 'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಕನ್ನಡಿಗರ ಮನೆಮಾತಾಗಿದ್ದ ನಟಿ. ಸದ್ಯ 'ಸೀತಾರಾಮ' ಸೀರಿಯಲ್​ನಲ್ಲಿ ಮಿಂಚುತ್ತಿದ್ದಾರೆ. ಸೀತಾಳ ಪಾತ್ರದಲ್ಲಿ ಅಭಿನಯಿಸುತ್ತಿರುವ ಇವರ ನಟನೆಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ. 

Tap to resize

ವೈಷ್ಣವಿ ಗೌಡ, ಸೀರಿಯಲ್‌ನಲ್ಲಿ ಹೆಚ್ಚಾಗಿ ಸಾಂಪ್ರದಾಯಿಕ ಲುಕ್‌ನಲ್ಲಿಯೇ ಕಾಣಸಿಗುತ್ತಾರೆ. ಆದರೆ ರಿಯಲ್ ಲೈಫ್‌ನಲ್ಲಿ ತುಂಬಾ ಮಾಡರ್ನ್‌ ಕೂಡಾ ಹೌದು.

ಫ್ಯಾಷನ್​ ಬಗ್ಗೆ ಹೆಚ್ಚು ಕ್ರೇಜ್​ ಇಟ್ಟಿಕೊಂಡಿರುವ ವೈಷ್ಣವಿ ಗೌಡ ಸ್ಟೈಲಿಶ್​ ಗೌನ್​ನಲ್ಲಿ ತಮ್ಮ ಅಂದ ಪ್ರದರ್ಶಿಸಿದ್ದಾರೆ. ಬಗೆ ಬಗೆಯ ಭಂಗಿಯಲ್ಲಿ ನಿಂತು ಕ್ಯಾಮರಾ ಮುಂದೆ ಮೈ ಬಳುಕಿಸಿದ್ದಾರೆ. ನೋಡುಗರ ಕಣ್ಮನ ಸೆಳೆದಿದ್ದಾರೆ.

ನಟಿ ವೈಷ್ಣವಿ ಗೌಡ ಲೈಲಾಕ್‌​ ಬಣ್ಣದ ಮೈಗಂಟುವ ಸ್ಟೈಲಿಶ್​ ಗೌನ್ ಧರಿಸಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು, ತುಂಬಾ ಕ್ಯೂಟ್ ಆಗಿ ಕಾಣಿಸಿದ್ದಾರೆ.

ನೆಟ್ಟಿಗರು ಫೋಟೋ ನೋಡಿ, 'ರಾಜಕುಮಾರಿ ಬೊಂಬೆ ಹುಡುಗಿ ನಗುಮುಖ ಚೆಲುವೆ ದೃಷ್ಟಿ ತೆಗೆದುಕೊಳ್ಳಿ' ಎಂದಿದ್ದಾರೆ. ಇನ್ನೊಬ್ಬರು, 'ಅಗ್ನಿಸಾಕ್ಷಿ ಸೀರಿಯಲ್ ಕ್ರಶ್‌' ಎಂದು ಕಮೆಂಟಿಸಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿ ಬಹಳ ಮನೋಜ್ಞವಾಗಿ ಮೂಡಿ ಬರುತ್ತಿದೆ. ಸೀತಾ ಪಾತ್ರದಲ್ಲಿ ನಟಿಸುತ್ತಿರುವ ವೈಷ್ಣವಿ ಗೌಡ ಅವರ ಪಾತ್ರವು ಕೂಡಾ ಅಮೋಘವಾಗಿ ಮೂಡಿಬರುತ್ತಿದೆ.

ವೈಷ್ಣವಿ ಗೌಡ ಅವರನ್ನು ಅನೇಕ ಜನರು ಸಿನಿಮಾಗಳಲ್ಲಿ ನೋಡುವ ಅಪೇಕ್ಷೆಯನ್ನು ಹೊಂದಿದ್ದರು. ಆದರೆ ಸಿನಿಮಾ ಅಷ್ಟಾಗಿ ವೈಷ್ಣವಿ ಗೌಡ ಅವರನ್ನು ಅರಿಸಿಕೊಂಡು ಬಂದಿರಲಿಲ್ಲ. ಆದರೆ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಬಹಳ ಅದ್ಭುತವಾಗಿ ನಟನೆ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.

Latest Videos

click me!