ಮಗಳನ್ನು ಮನೆಯಲ್ಲಿ ಬಿಟ್ಟು ಬೆಕ್ಕನ್ನು ಮುದ್ದಾಡಿದ ನಟಿ ಆಲಿಯಾ ಭಟ್

First Published | Dec 24, 2023, 3:35 PM IST

ಆಲಿಯಾ  ಕ್ರಿಸ್ಮಸ್‌ ಟ್ರೀ ಜೊತೆ ತನ್ನ ಮುದ್ದಿನ ಬೆಕ್ಕು ಎಡ್ವರ್ಡ್‌ನೊಂದಿಗೆ ಪಾಪಾರಾಜಿಗಳಿಗೆ ಸಖತ್ ಫೋಸ್ ಕೊಟ್ಟಿದ್ದಾರೆ. ಜೊತೆಗೆ ತನ್ನ ಅಭಿಮಾನಿಗಳಿಗೆ ಕ್ರಿಸ್‌ಮಸ್‌ ಹಬ್ಬದ ಶುಭ ಕೋರಿದ್ದಾರೆ. 

ಬಾಲಿವುಡ್ ಮಂದಿ ಧರ್ಮಬೇದಗಳನ್ನು ಮರೆತು ಪ್ರತಿ ಹಬ್ಬಗಳನ್ನು ಜೊತೆಯಾಗಿ ಸಂಭ್ರಮದಿಂದ ಆಚರಿಸುತ್ತಾರೆ. ಅದೇ ರೀತಿ ಈಗ ಆಲಿಯಾ ಭಟ್ ಕ್ರಿಸ್ಮಸ್‌ ಹಬ್ಬಕ್ಕೆ ಸಜ್ಜಾಗಿದ್ದು, ಕೆಂಪು ಹಾಗೂ ಬಿಳಿ ಮಿಶ್ರಿತ ಹೂಗಳಿಂದ ಕೂಡಿದ ಧಿರಿಸಿನಲ್ಲಿ ಮಿಂಚಿದ್ದು, ಫೋಟೋ ನೋಡಿದ ಆಲಿಯಾ ಫ್ಯಾನ್ಸ್ ಸ್ಟನ್ ಆಗಿದ್ದಾರೆ. 

ಆಲಿಯಾ  ಕ್ರಿಸ್ಮಸ್‌ ಟ್ರೀ ಜೊತೆ ತನ್ನ ಮುದ್ದಿನ ಬೆಕ್ಕು ಎಡ್ವರ್ಡ್‌ನೊಂದಿಗೆ ಪಾಪಾರಾಜಿಗಳಿಗೆ ಸಖತ್ ಫೋಸ್ ಕೊಟ್ಟಿದ್ದಾರೆ. ಜೊತೆಗೆ ತನ್ನ ಅಭಿಮಾನಿಗಳಿಗೆ ಕ್ರಿಸ್‌ಮಸ್ಹಬ್ಬದ ಶುಭ ಕೋರಿದ್ದಾರೆ. 

Tap to resize

ಕ್ರಿಸ್ಮಸ್ ಗಿಡವನ್ನು ಚಿನ್ನದ ಬಣ್ಣದ ಲೈಟ್ಸ್‌, ಸಣ್ಣ ಲೈಟ್ಸ್‌ಗಳು ಕ್ಯಾಂಡಿ ಕ್ಯಾನಿ, ಬೆಲ್, ಗಂಟೆಗಳು, ಹೊಳೆಯುವ ಸ್ಟಾರ್‌ ಮುಂತಾದವುಗಳಿಂದ ಸುಂದರವಾಗಿ ಅಲಂಕರಿಸಲಾಗಿದೆ.
ಸಾಧಾರಣವಾದ ಮೇಕಪ್‌ನೊಂದಿಗೆ ಈ ವಿಭಿನ್ನ ಫ್ಲೊರಲ್ ಧಿರಿಸಿನ ಜೊತೆ ಹೈ ಹೀಲ್ ಧರಿಸಿ ಆಲಿಯಾ ಸುಂದರವಾಗಿ ಕಂಗೊಳಿಸುತ್ತಿದ್ದಾರೆ.

ಇನ್ನು ಸಿನಿಮಾ ವಿಷಯಕ್ಕೆ ಬರುವುದಾದರೆ ಆಲಿಯಾ ಕೊನೆಯದಾಗಿ ರಣ್ವೀರ್‌ ಸಿಂಗ್ ಜೊತೆ ರಾಕಿ ಔರ್‌ ರಾಣಿ ಕೀ ಪ್ರೇಮ್ ಕಹಾನಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಈ ವರ್ಷ ಆಲಿಯಾ ಹಾಲಿವುಡ್‌ಗೂ ಕಾಲಿಟ್ಟಿದ್ದು, ಹಾರ್ಟ್ ಆಫ್ ಸ್ಟೋನ್‌ನಲ್ಲಿ ನಟಿಸುವ ಮೂಲಕ ಹಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.

ಇದರ ಜೊತೆಗೆ ಜಾಗತಿಕ ಐಷಾರಾಮಿ ಬ್ರಾಂಡ್‌ಗಳಿಗೂ ಅವರು ರಾಯಭಾರಿಯಾಗಿದ್ದು, ಇತ್ತೀಚೆಗೆ ರೆಡ್ ಸೀ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿಯೂ ಭಾಗಿಯಾಗಿದ್ದರು.

ಸದ್ಯಕ್ಕೆ ಆಲಿಯಾ ಅವರು ತಮ್ಮ ಮುಂಬರುವ ಥ್ರಿಲ್ಲರ್ ಸಿನಿಮಾ ಜಿಗ್ರಾದಲ್ಲಿ ಬ್ಯುಸಿಯಾಗಿದ್ದು, ವಾಸನ್ ಬಾಲ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಈ ಸಿನಿಮಾ 2024ರ ಸೆಪ್ಟೆಂಬರ್‌ 27 ರಂದು ಬಿಡುಗಡೆಯಾಗುವ ನಿರೀಕ್ಷೆ ಇದೆ. ಪ್ರಸ್ತುತ ಪತಿ ರಣ್‌ಬೀರ್, ಮಗಳು ಆಲಿಯಾ ರಜಾ ದಿನಗಳನ್ನು ಎಂಜಾಯ್ ಮಾಡ್ತಿದ್ದಾರೆ.

ಆಲಿಯಾ ಭಟ್ 2022 ರಲ್ಲಿ ಬಾಲಿವುಡ್ ನಟ ಕಪೂರ್ ಕುಟುಂಬದ ಕುಡಿ ರಣ್‌ಬೀರ್ ಕಪೂರ್‌ ಅನ್ನು ಮದುವೆಯಾಗಿದ್ದು, ದಂಪತಿ ಹೆಣ್ಣು ಮಗು ರಾಹಾಗೆ ಪೋಷಕರಾಗಿದ್ದಾರೆ. 

Latest Videos

click me!