ಬಿಳಿ ಕೂದಲನ್ನು ಪದೇ ಪದೇ ಕೀಳ್ತೀರಾ? ಇದರಿಂದ ಆಗೋ ಸಮಸ್ಯೆ ಒಂದೆರಡಲ್ಲ

First Published Dec 26, 2023, 4:42 PM IST

ಕೂದಲು ಬೇಗನೆ ಬಿಳಿಯಾಗೋದು ಇತ್ತೀಚೆಗೆ ತುಂಬಾ ಸಾಮಾನ್ಯ. ಆದರೆ ಒಂದು ಅಥವಾ ಎರಡು ಕೂದಲುಗಳು ಬಿಳಿ ಬಣ್ಣಕ್ಕೆ ತಿರುಗಿದಾಗ, ಜನರು ಅವುಗಳನ್ನು ಮರೆಮಾಡಲು ಅವುಗಳನ್ನು ಕಿತ್ತು ಹಾಕ್ತಾರೆ. ನಿಮಗೆ ಗೊತ್ತಾ ಇದರಿಂದ ಎಷ್ಟೊಂದು ಸಮಸ್ಯೆ ಆಗುತ್ತೆ ಅಂತಾ? 
 

ಇತ್ತೀಚಿನ ದಿನಗಳಲ್ಲಿ ಕೇವಲ ವಯಸ್ಸಾದವರಿಗೆ ಮಾತ್ರ ಬಿಳಿ ಕೂದಲು (white hair) ಬರೋದು ಎಂದು ಹೇಳೋ ಹಾಗಿಲ್ಲ. ಯಾಕಂದ್ರೆ ವಯಸ್ಸು 30 ಆಗುತ್ತಿದ್ದಂತೆ, ತಲೆಯಲ್ಲಿ ಬಿಳಿ ಕೂದಲು ಮೂಡೋದಕ್ಕೆ ಆರಂಭವಾಗುತ್ತೆ. ಇನ್ನೂ ಕೆಲವರು ಈ ವಯಸ್ಸಿಗೆ ಮುಂಚಿತವಾಗಿಯೇ ಅಂದರೆ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲಿನ ಸಮಸ್ಯೆ ಹೊಂದಿರುತ್ತಾರೆ. 
 

ಬಿಳಿ ಕೂದಲು ಸೌಂದರ್ಯವನ್ನು ನಿರ್ಧರಿಸದಿದ್ದರೂ,  ಕೂದಲು ಬಿಳಿಯಾಗುವುದರಿಂದ ಕೆಲವರಿಗೆ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಆರಂಭಿಕ ಹಂತದಲ್ಲಿ ಅವರು ಎದ್ದು ಕಾಣುವ ಬಿಳಿ ಕೂದಲನ್ನು ಕಿತ್ತು ಹಾಕಲು ಪ್ರಾರಂಭಿಸುತ್ತಾರೆ. ಇದರಿಂದ ಕೂದಲಿಗೆ ಸಾಧ್ಯವಾದಷ್ಟು ಕಾಲ ಬಣ್ಣ ಹಚ್ಚುವುದನ್ನು ತಪ್ಪಿಸಬಹುದು ಅನ್ನೋದು ಅವರ ಅಭಿಪ್ರಾಯ. ನೀವು ಸಹ ಇದನ್ನು ಮಾಡಿದರೆ, ಜಾಗರೂಕರಾಗಿರಿ. ಏಕೆಂದರೆ ಕೂದಲನ್ನು ಕಿತ್ತು ಹಾಕೋದರಿಂದ (plucking white hair) ಅನೇಕ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. 
 

Latest Videos


ಬಿಳಿ ಕೂದಲನ್ನು ಕಿತ್ತುಕೊಳ್ಳುವುದರಿಂದ ಕೂದಲು ಹೆಚ್ಚು ಬೂದು ಬಣ್ಣಕ್ಕೆ ತಿರುಗುತ್ತದೆಯೇ?
ಬಿಳಿ ಕೂದಲನ್ನು ಕಿತ್ತು ಹಾಕೋದರಿಂದ ಹೆಚ್ಚು ಬಿಳಿ ಕೂದಲು ಬೆಳೆಯುತ್ತದೆ ಎಂಬ ನಂಬಿಕೆ ಸಂಪೂರ್ಣವಾಗಿ ತಪ್ಪು ಎಂದು ತಜ್ಞರು ಹೇಳುತ್ತಾರೆ. ಆದರೆ ಬಿಳಿ ಕೂದಲನ್ನು ಕೀಳೋದ್ರಿಂದ ಸುತ್ತಮುತ್ತಲಿನ ಕೂದಲಿನ ಕಿರುಚೀಲಗಳ ಮೇಲೆ ಅಥವಾ ಕೂದಲಿನ ಬಣ್ಣಕ್ಕೆ ಕಾರಣವಾದ ಮೆಲನೊಸೈಟ್ಗಳ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ನೀವು ಪದೇ ಪದೇ ಕೂದಲನ್ನು ಕಿತ್ತು ಹಾಕಿದರೆ, ಅದು ಕೂದಲಿನ ಕಿರುಚೀಲಗಳನ್ನು ದುರ್ಬಲಗೊಳಿಸುತ್ತದೆ. ಇದರ ಪರಿಣಾಮವು ಕೂದಲಿನ ಬೆಳವಣಿಗೆಯ ಮೇಲೂ ಕಂಡುಬರುತ್ತದೆ.

ಬಿಳಿ ಕೂದಲನ್ನು ಕೀಳುವುದರಿಂದ ಉಂಟಾಗುವ ಅಡ್ಡಪರಿಣಾಮಗಳು
ಸೋಂಕಿನ ಅಪಾಯ

ಬಿಳಿ ಕೂದಲನ್ನು ಪದೇ ಪದೇ ಕಿತ್ತು ಹಾಕೋದರಿಂದ ಕೂದಲಿನ ಕಿರುಚೀಲಗಳು ಬ್ಯಾಕ್ಟೀರಿಯಾದ (bacteria) ಸಂಪರ್ಕಕ್ಕೆ ಬರುವ ಸಾಧ್ಯತೆಯಿದೆ. ನೆತ್ತಿಯ ಮೇಲೆ ಕೆಂಪಾಗುವಿಕೆ ಮತ್ತು ಊತದ ಸಮಸ್ಯೆ ಪ್ರಾರಂಭಿಸುತ್ತದೆ. ಇದು ಕೂದಲಿನ ಕಿರುಚೀಲಗಳು ಸೋಂಕಿಗೆ (infection) ಒಳಗಾಗುವ ಅಥವಾ ಉರಿಯೂತಕ್ಕೆ ಒಳಗಾಗುವ ಸ್ಥಿತಿಯಾಗಿದ್ದು, ಇದು ಚರ್ಮದಲ್ಲಿ ಮೊಡವೆ ಮೂಡಿದಂತೆ ಕಾಣುತ್ತೆ. 

ಬೆಳೆಯುತ್ತಿರುವ ಕೂದಲಿನ ಅಪಾಯ
ಬಿಳಿ ಕೂದಲು ಕೀಳೋದರಿಂದ ಕೂದಲಿನ ನೈಸರ್ಗಿಕ ಬೆಳವಣಿಗೆಯ ದಿಕ್ಕನ್ನು ಬದಲಾಯಿಸಬಹುದು, ಇದು ಪರಸ್ಪರ ಬೆಳವಣಿಗೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇದರಿಂದ ಕೂದಲು ಗುಂಗುರಾಗುತ್ತದೆ. ಇದಲ್ಲದೇ ಸೋಂಕು ಸಹ ಹೆಚ್ಚಾಗುತ್ತದೆ. 

ಚರ್ಮದ ಕಿರಿಕಿರಿ 
ಕೂದಲು ಕೀಳೋದರಿಂದ, ಚರ್ಮದ ಮೇಲೆ ಕೆಂಪಾಗುವಿಕೆ ಮತ್ತು ತುರಿಕೆ ಸಮಸ್ಯೆ (skin allergy)ಇರುತ್ತದೆ. ನಿಮ್ಮ ಚರ್ಮವು ಸೂಕ್ಷ್ಮವಾಗಿದ್ದರೆ, ನೀವು ಇನ್ನೂ ಜಾಗರೂಕರಾಗಿರಬೇಕು. ಇದು ಕೂದಲಿನ ಜೊತೆಗೆ ಚರ್ಮಕ್ಕೂ ಹಾನಿಯನ್ನುಂಟು ಮಾಡುತ್ತದೆ, ಇದು ಕೂದಲಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.

ಹೈಪರ್ ಪಿಗ್ಮೆಂಟೇಶನ್ ಅಥವಾ ಕಲೆ
ನೀವು ಕೂದಲನ್ನು ಕಿತ್ತರೆ, ಕೂದಲಿನ ಬುಡಗಳಲ್ಲಿ ಕಪ್ಪು ಕಲೆಗಳು ರೂಪುಗೊಳ್ಳಲು ಆರಂಭವಾಗುತ್ತದೆ.. ಇದು ಕೂದಲಿನ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.  ಜೊತೆಗೆ ಕೂದಲು ದುರ್ಬಲಗೊಳ್ಳುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತೆ. 

ಬಿಳಿ ಕೂದಲಿನ ಆರೈಕೆ ಹೀಗಿರಲಿ
ಕೂದಲನ್ನು ಮಾಯಿಶ್ಚರೈಸ್ ಮಾಡಿ

ಕೂದಲು ಬಿಳಿಯಾಗುತ್ತಿದ್ದಂತೆ, ಶುಷ್ಕತೆಯೂ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ, ಅವುಗಳನ್ನು ತೇವಗೊಳಿಸುವ ಮೂಲಕ ಅವುಗಳನ್ನು ಹೈಡ್ರೇಟ್ ಆಗಿರಿಸಿ. ಬಿಳಿ ಕೂದಲಿಗೆ ಅನುಗುಣವಾಗಿ ಶಾಂಪೂ ಮತ್ತು ಕಂಡೀಷನರ್ (conditioner)ಬಳಸಿ. ಇದು ಕೂದಲಿನಲ್ಲಿ ತೇವಾಂಶವನ್ನು ಉಳಿಸಿಕೊಳ್ಳುತ್ತದೆ ಮತ್ತು ಹೊಳಪನ್ನು ಸಹ ಕಾಪಾಡಿಕೊಳ್ಳುತ್ತದೆ.
 

ಸೂರ್ಯನ ಹಾನಿಯಿಂದ ರಕ್ಷಿಸಿ
ಬಿಸಿಲಿನಲ್ಲಿ ಹೊರಬರುವಾಗ, ಕೂದಲನ್ನು ಸ್ಕಾರ್ಫ್ ಅಥವಾ ಟೋಪಿಯಿಂದ ಮುಚ್ಚಿ. ಇದಲ್ಲದೆ, ಕೂದಲಿನ ಉತ್ಪನ್ನಗಳನ್ನು ಸರಿಯಾಗಿ ಬಳಸಿ. ಇದು ಕೂದಲನ್ನು ಸುರಕ್ಷಿತವಾಗಿರಿಸುತ್ತದೆ. ಮತ್ತು ಸೂರ್ಯನ ಕಿರಣಗಳಿಂದ ಉಂಟಾಗುವ ಹಾನಿಯನ್ನು ಸಹ ತಪ್ಪಿಸುತ್ತೆ. 

ನಿಯಮಿತವಾಗಿ ಕತ್ತಸುತ್ತಿರಿ
ಕೂದಲು ಟ್ರಿಮ್ಮಿಂಗ್ (trimming) ಮಾಡೋದು ಒಡೆದ ತುದಿಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಸರಿಯಾಗಿರಿಸುತ್ತದೆ, ಅಲ್ಲದೇ ಇದು ಕೂದಲಿನ ವಿನ್ಯಾಸವನ್ನು ಸುಧಾರಿಸುತ್ತದೆ. ಸರಿಯಾದ ಕೂದಲಿನ ನಿರ್ವಹಣೆಯಿಂದ ಮಂದತೆ ಮತ್ತು ಜಿಗುಟುತನವನ್ನು ನಿವಾರಿಸಬಹುದು.

ಪೌಷ್ಠಿಕಾಂಶ ನೀಡಿ
ಕೂದಲನ್ನು ಆರೋಗ್ಯಕರವಾಗಿಡಲು ವಿಟಮಿನ್ ಗಳು ಮತ್ತು ಖನಿಜಗಳು ಬೇಕಾಗುತ್ತವೆ. ವಿಟಮಿನ್ ಇ (vitamin E), ವಿಟಮಿನ್ ಬಿ 12, ಕಬ್ಬಿಣ ಮತ್ತು ಒಮೆಗಾ .3 ಕೊಬ್ಬಿನಾಮ್ಲಗಳಂತಹ ಸಾಕಷ್ಟು ಪೋಷಕಾಂಶಗಳು ಕೂದಲು ಒಡೆಯುವುದನ್ನು ಮತ್ತು ಉದುರುವುದನ್ನು ತಡೆಯುತ್ತವೆ.

click me!