Fashion Tips : ಕುಳ್ಳಗಿದ್ದೀರಾ? ಡ್ರೆಸ್ಸಿಂಗ್‌ನಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡ್ಕೊಂಡ್ರೆ ಹೈಟ್ ಕಾಣುತ್ತೆ

First Published | Jan 26, 2022, 3:19 PM IST

ಹವಾಮಾನ ಮತ್ತು ವಯಸ್ಸು ಏನೇ ಇರಲಿ, ಸ್ಕಾರ್ಫ್ ಗಳು ಮತ್ತು ಸ್ಟೋಲ್ ಗಳು (scarf and stole) ಯಾವಾಗಲೂ ಫ್ಯಾಷನ್ ನಲ್ಲಿವೆ. ಅವುಗಳ ವಿಶೇಷತೆಯೆಂದರೆ ಅವುಗಳನ್ನು ಸಣ್ಣ ಕುರ್ತಾಗಳಿಂದ ಹಿಡಿದು ಒಂದು ತುಂಡು ಉಡುಪುಗಳವರೆಗೆ ಎಲ್ಲದರ ಜೊತೆ ಬಳಸಬಹುದು. ಸ್ಟೋಲ್ ಯಾವಾಗಲೂ ಯುವತಿಯರಲ್ಲಿ ಜನಪ್ರಿಯವಾಗಿದೆ, ಅದನ್ನು ಸ್ಟೈಲಿಂಗ್ ಮಾಡುವ ಶೈಲಿಯನ್ನು ಬದಲಾಯಿಸುತ್ತದೆ. 

ಸ್ಕಾರ್ಫ್ ಗಳು ಮತ್ತು ಸ್ಟೋಲ್ ಗಳನ್ನು ಬಳಸುವ ವಿಭಿನ್ನ ಆಯ್ಕೆಗಳು ದೇಹವನ್ನು ತೆಳ್ಳಗೆ ಮತ್ತು ಸ್ಮಾರ್ಟ್ ಕಾಣುವಂತೆ ಮಾಡುತ್ತವೆ. ಸ್ಟೋಲ್ ನ ಸ್ಟೈಲಿಂಗ್ ಟಿಪ್ಸ್ (stylish tips )ಕಲಿಯಿರಿ ಇದರಿಂದ ನೀವು ಸ್ಟೈಲಿಶ್ ಆಗಿ ಕಾಣುತ್ತೀರಿ, ಜೊತೆಗೆ ನಿಮ್ಮ ಹೈಟ್ ಮತ್ತು ವೈಟ್ ಗೆ ವಿಭಿನ್ನ ಲುಕ್ ನೀಡೋದು ಖಂಡಿತಾ. 

ಯಾವ ಬಾಡಿ ಟೈಪ್ ಮೇಲೆ ಯಾವ ಸ್ಟೈಲ್ ಎಂದು ತಿಳಿಯಿರಿ : ಟ್ವಿಸ್ಟ್ ಮತ್ತು ಡ್ರೇಪ್ - ಕಡಿಮೆ ಎತ್ತರಹೊಂದಿರುವವರಿಗೆ ಟ್ವಿಸ್ಟ್ ಮತ್ತು ಡ್ರೇಪ್ ಶೈಲಿ ಸೂಕ್ತವಾಗಿದೆ. ಸಣ್ಣ ಎತ್ತರದ ಹುಡುಗಿಯರು ಬೋಲ್ಡ್ ಅಥವಾ ಬಹು-ಬಣ್ಣದ ಸ್ಕಾರ್ಫ್ ಗಳು (multi color scarfs) ಅಥವಾ ಸ್ಟೋಲ್ ಗಳನ್ನು ಆಯ್ಕೆ ಮಾಡಬಹುದು, ಇದರಿಂದ ಅವರ ಎತ್ತರವು ಉದ್ದವಾಗಿ ಕಾಣುತ್ತದೆ. ಕಡಿಮೆ ಬಸ್ಟ್ ಲೈನ್ ಗಳನ್ನು ಹೊಂದಿರುವ ಹುಡುಗಿಯರಿಗೆ ಈ ಶೈಲಿ ಉತ್ತಮ ಆಯ್ಕೆಯಾಗಿದೆ.

Tap to resize

ಡಬಲ್ ವ್ರ್ಯಾಪ್ ಸ್ಟೈಲ್ (double wrap style)- ಹೆಚ್ಚಿನ ಎತ್ತರವನ್ನು ಹೊಂದಿರುವ ಮಹಿಳೆಯರು ಸ್ಕಾರ್ಫ್ ಅನ್ನು ಡಬಲ್ ಮಾಡಬೇಕು ಮತ್ತು ಕಾಲರ್ ಮೂಳೆ ಗೋಚರಿಸುವಂತೆ ಸ್ಕಾರ್ಫ್ ಧರಿಸಬೇಕು. ಇದರ ವಿಶೇಷತೆಯೆಂದರೆ ಇದು ಸ್ಟೈಲ್ ಗೌನ್ ಗಳು ಮತ್ತು ಟಾಪ್ ಗಳೆರಡರಲ್ಲೂ ಸುಂದರವಾಗಿ ಕಾಣುತ್ತದೆ. ಇದು ಯಾವುದೇ ಸಂದರ್ಭಕ್ಕೂ ಅತ್ಯುತ್ತಮ ಲುಕ್ ನೀಡುತ್ತದೆ. 

ಸ್ಟೋಲ್ ಅನಿಮಲ್ ಪ್ರಿಂಟ್ ಅಥವಾ ಪೋಲ್ಕಾ ಚುಕ್ಕೆಗಳಿದ್ದರೆ, ನೀವು ಅದನ್ನು ಸಾದಾ ಉಡುಗೆಯೊಂದಿಗೆ ಸ್ಟೈಲ್ ಮಾಡಬಹುದು. ಚಳಿಗಾಲದಲ್ಲಿ ಫಂಕ್ಷನ್ ಗಾಗಿ ನೀವು ಈ ಶೈಲಿಯನ್ನು ಆಯ್ಕೆ ಮಾಡಿದರೆ, ಫರ್ ನಿಂದ ಮಾಡಿದ ಸ್ಕಾರ್ಫ್ ಬಳಸಿ. ಉದ್ದ ಕುತ್ತಿಗೆ ಹೊಂದಿರುವ ಹುಡುಗಿಯರಿಗೆ ಈ ಶೈಲಿ ಉತ್ತಮ ಆಯ್ಕೆಯಾಗಿದೆ.

ಲೂಪ್ ಮತ್ತು ನಾಟ್ ಮೂಲಕ - ಭಾರವಾದ ದೇಹದ ಮೇಲ್ಭಾಗವನ್ನು ಹೊಂದಿರುವವರು ಈ ಶೈಲಿಯೊಂದಿಗೆ ಸ್ಕಾರ್ಫ್ ಗಳನ್ನು ಬಳಸಬಹುದು. ಈ ಶೈಲಿಯು ಸ್ತನವನ್ನು ಎರಡು ಭಾಗಗಳಾಗಿ ವಿಭಜಿಸಿ, ದೇಹವು ತೆಳ್ಳಗೆ ಕಾಣುವಂತೆ ಮಾಡುತ್ತದೆ. ಅಲ್ಲದೆ, ಈ ಶೈಲಿಯಲ್ಲಿ, ದೇಹವನ್ನು ಟ್ರಿಮ್ ತೋರುತ್ತದೆ.

ಫ್ರಂಟ್ ನಾಟ್  (front knot) -  ತುಂಬಾ ತೆಳ್ಳಗಿರುವ ಹುಡುಗಿಯರು ಈ ರೀತಿ ಸ್ಟೋಲ್ ಗಳನ್ನು ಒಯ್ಯುವುದು ಒಳ್ಳೆಯದು. ಈ ಶೈಲಿಯಲ್ಲಿ, ಮುಂಭಾಗದಲ್ಲಿ ಒಂದು ಗಂಟು ಇರಿಸಲಾಗುತ್ತದೆ, ಈ ರೀತಿಯಲ್ಲಿ ಸ್ಕಾರ್ಫ್ ಅನ್ನು ಒಯ್ಯುವಾಗ ಭುಜಗಳು ಅಗಲವಾಗಿ ಕಾಣುತ್ತವೆ. ಸಣ್ಣ ಎತ್ತರದ ಹುಡುಗಿಯರು ಸಹ ಇದನ್ನು ಪ್ರಯತ್ನಿಸಬಹುದು. ಸ್ಕರ್ಟ್ ಗಳು ಮತ್ತು ಬೂಟ್ ಗಳೊಂದಿಗೆ ಈ ಶೈಲಿಯ ಉಡುಪನ್ನು ಪ್ರಯತ್ನಿಸಿ.
 

ಜಾಕೆಟ್ ನಾಟ್  - ಭಾರವಾದ ದೇಹವನ್ನು ಹೊಂದಿರುವ ಹುಡುಗಿಯರು ಜಾಕೆಟ್ ನಾಟ್ ಅನ್ನು ಪ್ರಯತ್ನಿಸಿ. ಈ ಶೈಲಿ ದೇಹದ ಬೊಜ್ಜನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಶೈಲಿಯಲ್ಲಿ ಬೆಲ್ಟ್ ಅನ್ನು ಬಳಸಿರುವುದರಿಂದ, ಸೊಂಟದ ಭಾಗವು ಮೇಲಿನ ಭಾಗದಿಂದ ವಿಭಿನ್ನವಾಗಿ ಮತ್ತು ತೆಳುವಾಗಿ ಕಾಣುತ್ತದೆ.

ಶಾಲು ನಾಟ್ (showl knot) - ಈ ಶೈಲಿಯು ಎಲ್ಲಾ ರೀತಿಯ ಜನರಿಗೆ ಅತ್ಯಂತ ಸ್ಮಾರ್ಟ್ ಮತ್ತು ಪರಿಪೂರ್ಣವಾಗಿದೆ. ಈ ಲುಕ್ ಇನ್ನಷ್ಟು ಸುಂದರವಾಗಿ ಕಾಣಲು ಪಶ್ಮಿನಾ ಶಾಲುಗಳನ್ನು ಬಳಸಬಹುದು. ಶಾಲ್ ನಾಟ್ ಗಳಲ್ಲಿ ಸುಂದರವಾದ ಬೆಲ್ಟ್ ಗಳನ್ನು ಬಳಸಿ. ಸಮಾರಂಭದಲ್ಲಿ ಪ್ರಯತ್ನಿಸಿ.

Latest Videos

click me!