Blouse Designs: ಮದ್ವೆ ಸೀಸನ್ ಶುರು, ರಶ್ಮಿಕಾ ಸ್ಟೈಲಿಷ್ ಬ್ಲೌಸ್ ಡಿಸೈನ್ಸ್ ಇಲ್ಲಿವೆ

First Published | Jan 16, 2022, 1:42 PM IST
  • Attractive Blouse Designs: ಮದ್ವೆ ಸೀಸನ್ ಶುರು, ಬ್ಲೌಸ್ ಡಿಸೈನ್ ಡಿಫರೆಂಟಾಗಿರಲಿ
  • ಕಿರಿಕ್ ಚೆಲುವೆಯ ಕೆಲವು ಸಾರಿ ಲುಕ್ಸ್, ಬ್ಲೌಸ್ ಡಿಸೈನ್ಸ್ ನೋಡಿ

ರಶ್ಮಿಕಾ ಮಂದಣ್ಣ ದಕ್ಷಿಣ ಚಿತ್ರರಂಗದ ಸುಂದರ ನಟಿ. ನಟಿ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ತಮ್ಮ ನಟನಾ ಕೌಶಲ್ಯ, ಸೌಂದರ್ಯ ಮತ್ತು ಮೋಡಿಯಿಂದ ಅನೇಕ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ನಟಿಯ ಅದ್ಭುತವಾದ ಫ್ಯಾಶನ್ ಸೆನ್ಸ್ ಕೂಡಾ ಅಭಿಮಾನಿಗಳಿಗೆ ಅಚ್ಚುಮೆಚ್ಚು.

ಅತ್ಯಾಕರ್ಷಕ ಬಟ್ಟೆಗಳ ಸಂಗ್ರಹವನ್ನು ಸಹ ಹೊಂದಿರುವ ನಟಿ ಟ್ರೆಡಿಷನಲ್ ಲುಕ್‌ನಲ್ಲಿಯೂ ಅದ್ಭುತವಾಗಿ ಕಾಣುತ್ತಾರೆ. ನಟಿಯ ಕೆಲವು ಸಿಜ್ಲಿಂಗ್ ಬ್ಲೌಸ್‌ ಡಿಸೈನ್‌ಗಳು ಈ ಸಮ್ಮರ್ ಮದ್ವೆ ಸೀಸನ್‌ಗೆ ಬೆಸ್ಟ್ ಎಂಬಂತಿವೆ.

Tap to resize

ನಟಿ ಒಮ್ಮೆ ಪಚ್ಚೆ ಹಸಿರು ಸಾಂಪ್ರದಾಯಿಕ ಸೀರೆ ಉಟ್ಟಿದ್ದರು. ಇದು ಸುಂದರವಾದ ಡಿಸೈನ್ಡ್ ಬ್ಲೌಸ್ ಹೊಂದಿತ್ತು. ಸೀರೆಗಿಂತ ಹೆಚ್ಚು ಗಮನ ಸೆಳೆದದ್ದು ಬೆರಗುಗೊಳಿಸುವ ರವಿಕೆ. ಕುಪ್ಪಸವನ್ನು ಸುಂದರವಾದ ನೆರಿಗೆಯ ಸ್ಯಾಟಿನ್ ಕುಪ್ಪಸದಲ್ಲಿ ಹೈ ನೆಕ್‌ಲೈನ್ ವಿನ್ಯಾಸಗೊಳಿಸಲಾಗಿತ್ತು. ನಟಿ ಕುಪ್ಪಸದಲ್ಲಿ ಸುಂದರವಾಗಿ ಕಾಣುತ್ತಿದ್ದರು.

ವಿಭಿನ್ನ ಸಂದರ್ಭದಲ್ಲಿ ಬೆರಗುಗೊಳಿಸುವ ಗೋಲ್ಡನ್ ಲೆಹೆಂಗಾದಲ್ಲಿ ನಟಿ ಸ್ಟೈಲಿಷ್ ಆಗಿ ವಿನ್ಯಾಸಗೊಳಿಸಲಾದ ಕುಪ್ಪಸ ಧರಿಸಿದ್ದರು. ನಟಿ ಲೆಹೆಂಗಾವನ್ನು ಡಿಸೈನ್ಡ್ ಬ್ಲೌಸ್‌ನೊಂದಿಗೆ ಮ್ಯಾಚ್ ಮಾಡಿದ್ದರು.

ನಟಿ ಒಮ್ಮೆ ಸುಂದರವಾದ ಗುಲಾಬಿ ಬಣ್ಣದ ಸೀರೆಯನ್ನು ಉಟ್ಟಿದ್ದರು. ಸರಳವಾದ ಸೀರೆಯು ಉದ್ದನೆಯ ತೋಳು ಮತ್ತು ಸುಂದರವಾದ ಕಂಠರೇಖೆಯ ಬ್ಲೌಸ್ ನಿಜಕ್ಕೂ ಅದ್ಭುತವಾಗಿತ್ತು. ಕುಪ್ಪಸ ಕೂಡ ಎದ್ದು ಕಾಣುವಂತೆ ಹೆಚ್ಚು ಅಲಂಕರಿಸಲಾಗಿತ್ತು.

ಕೆಂಬಣ್ಣದ ಕಾಟನ್ ಸೀರೆ ಧರಿಸಿದ್ದ ನಟಿ ಅದಕ್ಕೆ ಸಿಲ್ವರ್ ಡಿಸೈನ್ಡ್ ಬ್ಲೌಸ್ ಧರಿಸಿದ್ದರು. ಡೀಪ್ ನೆಕ್ ಸ್ಟ್ರೈಪ್ಡ್ ಬ್ಲೌಸ್ ಟ್ರೆಡಿಷನಲ್ ಜೊತೆಗೆ ಹಾಟ್ ಲುಕ್ ಕೊಟ್ಟಿತ್ತು.

ಇತ್ತೀಚೆಗೆ ಬಹುತೇಕ ಎಲ್ಲ ನಟಿಯರು ಧರಿಸುವಂತೆ ಝರಿ ಸೀರೆಗೆ ಸ್ಲೀವ್ಲೆಸ್ ಬ್ಲೌಸ್ ಧರಿಸಿದ್ದರು ನಟಿ. ಬ್ರಾಡ್ ನೆಕ್‌ ಲೈನ್ ಹೊಂದಿದ್ದ ಬ್ಲೌಸ್ ಸೀರೆಯ ಝರಿಜಂಚಿಗೆ ಮ್ಯಾಚಿಂಗ್ ಆಗಿತ್ತು

ಇತ್ತೀಚೆಗೆ ಪುಷ್ಪಾ ಪ್ರಮೋಷನ್‌ನಲ್ಲಿ ಬ್ಲಾಕ್ ಸೀರೆ ಉಟ್ಟಿದ್ದಾಗಲೂ ಪರ್ಫೆಕ್ಟ್ ಪಾರ್ಟಿ ಲುಕ್ ಕೊಟ್ಟಿದ್ದರು ನಟಿ. ರಿಸೆಪ್ಶನ್, ಡಿನ್ನರ್ ಪಾರ್ಟಿಗಳಿಗೆ ಬೆಸ್ಟ್ ಎಂಬಂತಿದೆ ಈ ಬ್ಲೌಸ್ ಸ್ಟೈಲ್

ಮತ್ತೊಂದು ಬಾರಿ ಆರ್ಗನ್ಝಾ ಸೀರೆಯಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾ ವಿ ನೆಕ್‌ ಲೈನ್ ಸ್ಲೀವ್ಲೆಸ್ ಬ್ಲೌಸ್ ಧರಿಸಿದ್ದರು. ಇಂತಹ ಬ್ಲೌಸ್‌ಗೆ ಇದೇ ರೀತಿಯ ಹ್ಯಾಂಗಿಗ್ ಜ್ಯುವೆಲ್ಲರಿ ಹೆಚ್ಚು ಸೂಟ್ ಆಗುತ್ತದೆ.

Latest Videos

click me!