ಇತ್ತೀಚೆಗೆ ಮುಕ್ತಾಯಗೊಂಡ ಮಿಸೆಸ್ ವರ್ಲ್ಡ್ 2022 ರಲ್ಲಿ, ಭಾರತವನ್ನು ಮಿಸೆಸ್ ಇಂಡಿಯಾ 2022, ನವದೀಪ್ ಕೌರ್ ಪ್ರತಿನಿಧಿಸಿದ್ದರು. ಮಿಸ್ ಯೂನಿವರ್ಸ್ ಹರ್ನಾಜ್ ಸಂಧು ನಂತರ, ಸೌಂದರ್ಯ ಸ್ಪರ್ಧೆಯಲ್ಲಿ ಮತ್ತೊಂದು ಭಾರತ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಭರವಸೆಯನ್ನು ನವದೀಪ್ ಕೌರ್ ಮೂಡಿಸಿದ್ದರು. ಆದಾಗ್ಯೂ, ಮಿಸೆಸ್ ಅಮೇರಿಕಾ, ಶೈಲಿನ್ ಫೋರ್ಡ್, ಮಿಸೆಸ್ ವರ್ಲ್ಡ್ 2022 ಕಿರೀಟವನ್ನು ಪಡೆದರು.
ನವದೀಪ್ ಮಿಸೆಸ್ ಇಂಡಿಯಾ 2022, ಕಿರೀಟವನ್ನು ಮುಡಿಗೇರಿಸಿಕೊಳ್ಳದಿದ್ದರೂ, ತಮ್ಮ ಸಾಧನೆಯಿಂದ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅವುಗಳಲ್ಲಿ ಒಂದು, ಸ್ಪರ್ಧೆಯಲ್ಲಿ ಅವರ 'ಕುಂಡಲಿನಿ ಚಕ್ರ'ದ ಚಿನ್ನದ ಕಾಸ್ಟೂಮ್ ಅತ್ಯುತ್ತಮ ರಾಷ್ಟ್ರೀಯ ವೇಷಭೂಷಣ ಎಂದು ಘೋಷಿಸಲ್ಪಟ್ಟಿತು.
ನವದೀಪ್ ಕೌರ್ ಮಿಸೆಸ್ ಇಂಡಿಯಾ ವರ್ಲ್ಡ್ ಆಗುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ. ಸ್ಪರ್ಧೆಗೆ ಆಗಮಿಸಿದ ಪ್ರಪಂಚದ ಬೇರೆ ಬೇರೆ ಅವರಿಗಿಂತ ಭಿನ್ನವಾಗಿದ್ದಾರೆ. ನವದೀಪ್ ಒಡಿಶಾದ ಸ್ಟೀಲ್ ಸಿಟಿ, ರೂರ್ಕೆಲಾ ಬಳಿಯ ಸಣ್ಣ ಪಟ್ಟಣದಿಂದ ಬಂದವರು.
ಮಿಸೆಸ್ ಇಂಡಿಯಾ ವರ್ಲ್ಡ್ ನವದೀಪ್ ಕೌರ್ 'ಕುಂಡಲಿನಿ ಚಕ್ರ'ದಿಂದ ಸ್ಫೂರ್ತಿ ಪಡೆದ ಚಿನ್ನದ ವೇಷಭೂಷಣವನ್ನು ಧರಿಸಿದ್ದರು. ಸ್ಪರ್ಧೆಯಲ್ಲಿ ನವದೀಪ್ ಅವರ ವೇಷಭೂಷಣವನ್ನು ಅತ್ಯುತ್ತಮ ರಾಷ್ಟ್ರೀಯ ವೇಷಭೂಷಣವಾಗಿ ಆಯ್ಕೆ ಮಾಡಲಾಯಿತು.
ಅವರ ಶೈಕ್ಷಣಿಕ ಅರ್ಹತೆ, ನವದೀಪ್ ಕೌರ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್‌ನಲ್ಲಿ ತನ್ನ ಪದವಿಯನ್ನು ಪೂರ್ಣಗೊಳಿಸಿದರು ಮತ್ತು ಬ್ಯುಸಿನೆಸ್ ಅಡ್ಮಿನಿಸ್ಟ್ರೆಷನ್ ಸ್ನಾತಕೋತ್ತರ (MBA) ಪದವಿಯನ್ನು ಪಡೆದರು.
ಮಿಸೆಸ್ ಇಂಡಿಯಾ ವರ್ಲ್ಡ್ ಆಗುವ ಮೊದಲು, ನವದೀಪ್ ಕೌರ್ ಬ್ಯಾಂಕ್‌ನಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿದ್ದರು. ನಂತರ ಅವರು ತಮ್ಮ ವೃತ್ತಿಯನ್ನು ಬದಲಾಯಿಸಿದರು ಮತ್ತು ಸಹಾಯಕ ಪ್ರಾಧ್ಯಾಪಕರಾದರು.
ಆರು ವರ್ಷದ ಮಗಳ ತಾಯಿ ನವದೀಪ್ ಕೌರ್ ಮದುವೆಯಾಗಿ ಏಳು ವರ್ಷಗಳಾಗಿವೆ. ವರದಿಗಳ ಪ್ರಕಾರ, ಅವರು ತಮ್ಮ ಮಗಳಿಗೆ ಮಾತ್ರವಲ್ಲ ಇತರ ಹಲವರಿಗೆ ಶಿಕ್ಷಣ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರು ಶಿಕ್ಷಣಕ್ಕಾಗಿ 1000 ಹುಡುಗಿಯರನ್ನು ದತ್ತು ಪಡೆದಿದ್ದಾರೆ ಎಂದು ವರದಿಯಾಗಿದೆ.
ಮಕ್ಕಳಿಗೆ ಶಿಕ್ಷಣ ನೀಡುವ ಅವರ ಪ್ರೀತಿ ಇಷ್ಟಕ್ಕೆ ಕೊನೆಗೊಳ್ಳುವುದಿಲ್ಲ. ನವದೀಪ್ ಕೌರ್ ವಿಶೇಷ ಮಕ್ಕಳಿಗೂ ಶಿಕ್ಷಣ ನೀಡಲು ಸಮಯವನ್ನು ನೀಡುತ್ತಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ತರಗತಿಗಳನ್ನೂ ನಡೆಸುತ್ತಿದ್ದಾರೆ.
ಅವರು ಸ್ಪರ್ಧೆಗೆ ತನ್ನನ್ನು ಸಿದ್ಧಪಡಿಸಲು ಯಾವುದೇ ಅವಕಾಶವನ್ನೂ ಬಿಡಲಿಲ್ಲ. ಅದರಲ್ಲೂ ವಿಶೇಷವಾಗಿ ಅವರು ಈ ರೀತಿಯ ಸೌಂದರ್ಯ ಸ್ಪರ್ಧೆಯ ಪ್ರಪಂಚದಿಂದ ಬಂದಿಲ್ಲ ಎಂದು ಸಂದರ್ಶನವೊಂದರಲ್ಲಿ, ನವದೀಪ್ ಕೌರ್ ಹೇಳಿದರು. ಅವರು ಸೌಂದರ್ಯ ಸ್ಪರ್ಧೆಗಾಗಿ ವೃತ್ತಿಪರರ ತಂಡದಿಂದ ಬೃಹತ್ ತರಬೇತಿಯನ್ನು ಪಡೆದಿದ್ದರು.