ಅಬ್ಬರೆ! ಆಲಿಯಾ ಭಟ್ ಮೆಟ್ ಗಾಲಾ ಸೀರೆಗಿಂತ 7 ಪಟ್ಟು ಹೆಚ್ಚು ಬೆಲೆಯ ಡ್ರೆಸ್ ಧರಿಸಿದ ಊರ್ವಶಿ ರಾಟೇಲಾ!

First Published | May 19, 2024, 10:25 AM IST

ಕೇನ್ಸ್ 2024ರ ಮೊದಲ ದಿನದಂದು ಊರ್ವಶಿ ರೌಟೇಲಾ ಗುಲಾಬಿ ಬಣ್ಣದ ರಫಲ್ ಉಡುಗೆಯಲ್ಲಿ ಮಾದಕವಾಗಿ ಕಾಣಿಸುತ್ತಿದ್ದರು. ಇದೀಗ ಈ ಡ್ರೆಸ್ ಬೆಲೆ ಆಲಿಯಾ ಭಟ್ ಮೆಟ್ ಗಾಲಾ ಸೀರೆಗಿಂತ ಏಳು ಪಟ್ಟು ದುಬಾರಿಯಾಗಿದೆ ಎಂದು ವರದಿಯಾಗಿದೆ. ಇದರ ಬೆಲೆಗೆ ಬೆಂಗಳೂರಿನಂಥ ಸಿಟಿಯಲ್ಲೇ ನಾಲ್ಕಾರು ಅದ್ಧೂರಿ ಮನೆ ಕೊಳ್ಳಬಹುದಿತ್ತು..

ಊರ್ವಶಿ ರೌಟೇಲಾ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ತಮ್ಮ ಅದ್ಬುತ ನೋಟಗಳಿಂದ ಮೋಡಿ ಮಾಡುತ್ತಿದ್ದಾರೆ. ಕೇನ್ಸ್‌ನ ಮೊದಲ ದಿನದಂದು, ಊರ್ವಶಿ ಧರಿಸಿದ್ದ ಗುಲಾಬಿ ಬಣ್ಣದ ಗೌನ್ ವಿಶಿಷ್ಠವಾಗಿದ್ದು, ಎಲ್ಲರ ಗಮನ ಸೆಳೆದಿತ್ತು. 

ಊರ್ವಶಿ ಖಲೀದ್ ಮತ್ತು ಮರ್ವಾನ್ ಫ್ಯೂಷಿಯಾ ವಿನ್ಯಾಸದ ಗೌನ್ ಸುಂದರವಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಅದರ ಬೆಲೆ ಮಾತ್ರ ಹೌಹಾರಿಸುತ್ತದೆ.

Tap to resize

ಕೇನ್ಸ್ 2024ರ ಮೊದಲ ದಿನದಂದು ಊರ್ವಶಿ ರೌಟೇಲಾ ಧರಿಸಿದ್ದ ಗುಲಾಬಿ ಬಣ್ಣದ ರಫಲ್ ಉಡುಗೆಯು ಸಬ್ಯಸಾಚಿ ಮುಖರ್ಜಿಯ ಆಲಿಯಾ ಭಟ್ ಮೆಟ್ ಗಾಲಾ ಸೀರೆಗಿಂತ ಏಳು ಪಟ್ಟು ದುಬಾರಿಯಾಗಿದೆ ಎಂದು ವರದಿಯಾಗಿದೆ.

ಊರ್ವಶಿ ರೌಟೇಲಾ ಕೇನ್ಸ್‌ನ ಮೊದಲ ದಿನದಂದು  ರಫಲ್-ಸ್ಲೀವ್ಸ್ ಹೊಂದಿದ್ದ ಹಾಟ್ ಪಿಂಕ್ ಟೋನ್‌ನ ಗೌನ್ ಧರಿಸಿದ್ದರು. ತೊಡೆಯ ಎತ್ತರದ ಸೀಳು ಮತ್ತು ಲೇಸ್ ವಿವರಗಳು ನಟಿಯನ್ನು ಈ ಬಟ್ಟೆಯಲ್ಲಿ ದೇವಲೋಕದ ಅಪ್ಸರೆಯಂತೆ ಕಾಣಿಸುತ್ತಿದ್ದವು. ಈ ಬಟ್ಟೆಗೆ ಹೊಂದುವಂತೆ ಊರ್ವಶಿ ಹೇರ್‌ಬ್ಯಾಂಡ್, ಇಯರಿಂಗ್ ಧರಿಸಿದ್ದರು. 

ಊರ್ವಶಿಯ ಈ ಸಂಪೂರ್ಣ ನೋಟದ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 7 ಕೋಟಿ ರೂಪಾಯಿಗಳು! ವರದಿಯಂತೆ ಆಲಿಯಾಳ ಮೆಟ್ ಗಾಲಾ ಸೀರೆಯ ಸಂಪೂರ್ಣ ನೋಟ 1 ಕೋಟಿ ಮೌಲ್ಯದ್ದಾಗಿತ್ತು.
 

ಆಭರಣಗಳೇ ದುಬಾರಿ
ಊರ್ವಶಿ ಧರಿಸಿದ್ದ ಬಟ್ಟೆಯ ಬೆಲೆ 4.17 ಲಕ್ಷ ರೂ.ಗಳಷ್ಟೇ. ಆದರೆ, ಆಕೆಯ ಲುಕ್‌ನ್ನು ದುಬಾರಿಯಾಗಿಸಿದ್ದು ಅವಳ ಆಭರಣಗಳು. ಆಕೆ ಕಿವಿಯೋಲೆಯಾಗಿ ಅಪರೂಪದ ಗುಲಾಬಿ ಆರ್ಗೈಲ್ ವಜ್ರಗಳನ್ನು ಧರಿಸಿದ್ದರು. ಈ ವಜ್ರಗಳು ಅತ್ಯಂತ ಅಪರೂಪ ಮತ್ತು ಆದ್ದರಿಂದ ಬಹಳ ದುಬಾರಿ.

 ಆಕೆ ಧರಿಸಿದ್ದ ಹೆಡ್‌ಬ್ಯಾಂಡ್ ಕೂಡಾ ಅಪರೂಪದ ಪಿಂಕ್ ರತ್ನಗಳನ್ನು ಹೊಂದಿತ್ತು. ಈ ಆಭರಣಗಳ ಬೆಲೆಯೇ 7 ಕೋಟಿ ಹತ್ತಿರವಿದೆ. 

ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಎರಡನೇ ದಿನ ಕೆಂಪು ಮತ್ತು ಬೀಜ್-ಹ್ಯೂಡ್ ಗೌನ್‌ನಲ್ಲಿ ಊರ್ವಶಿ ರೌಟೇಲಾ ಕಾಣಿಸಿಕೊಂಡರು. 

Latest Videos

click me!